ಪಿಎಂ ಕುಸುಮ್​ಸಿ ಯೋಜನೆಯಡಿ 3,37,000 ಪಂಪ್ ಸೆಟ್ ಗಳಿಗ ಸೋಲರ್ ಫೀಡರ್

 

 

 

 

ಬೆಳಗಾವಿ:  ಪಿಎಂ ಕುಸುಮ್​ಸಿ ಯೋಜನೆಯಡಿ 3,37,000 ರೈತರ ಕೃಷಿ ಪಂಪ್​ಸೆಟ್​ಗಳಿಗೆ ಶೀಘ್ರವೇ ಸೋಲಾರ್ ಫೀಡರ್ ಮೂಲಕ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತದೆ ಎಂದು ಇಂಧನ ಸಚಿವ ವಿ.ಸುನೀಲ್​ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು. ಪಿಎಂ ಕುಸುಮ್​ಸಿ ಯೋಜನೆ ಮೂಲಕ ಪ್ರಧಾನಿ ಅವರ ಈ ಕೊಡುಗೆಯನ್ನು ಬಳಸಿಕೊಳ್ಳಲಾಗುತ್ತಿದೆ, ಈಗಾಗಲೆ ಯೋಜನೆಗೆ ಟೆಂಡರ್ ಕೂಡ ಆಗಿದೆ, ಒಟ್ಟು 1300 ಮೆಗಾವಾಟ್ ವಿದ್ಯುತ್ ಅನ್ನು ಸೋಲಾರ್ ಫೀಡರ್ ಮೂಲಕ ಐಪಿಸೆಟ್​ಗಳಿಗೆ ನೀಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.

 

 

12,03,887 ಕೖಷಿ ಪಂಪ್​ಸೆಟ್​ಗೆ

ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಹಾಕಿದ್ದಾರೆ, ಇದರಲ್ಲಿ 66,086 ಮಂದಿಗೆ ವಿದ್ಯುತ್ ಸಂಪರ್ಕ ಒದಗಿಸುವುದಕ್ಕೆ ಟೆಂಡರ್ ಆಗಿದೆ, ತಕ್ಷಣವೇ ಸಕ್ರಮ ಮಾಡಿಕೊಡಲಾಗುತ್ತದೆ. ಉಳಿದದ್ದನ್ನು ಮುಂದಿನ ಹಂತದಲ್ಲಿ ಒದಗಿಸಲಾಗುವುದು. ಒಟ್ಟಾರೆಯಾಗಿ ರಾಜ್ಯದಲ್ಲಿ 32.55 ಲಕ್ಷ ಕೃಷಿ ಪಂಪ್​ಸೆಟ್​ಗಳಿವೆ, 1900 ಮೆಗಾವಾಟ್ ವಿದ್ಯುತ್ ಪ್ರತಿದಿನ ಇದಕ್ಕೆ ವಿನಿಯೋಗವಾಗುತ್ತದೆ, ವರ್ಷಕ್ಕೆ 13,632 ಕೋಟಿ ರೂ. ಸಬ್ಸಿಡಿಯನ್ನು ರೈತರಿಗಾಗಿ ನೀಡಲಾಗುತ್ತದೆ ಎಂದು ಹೇಳಿದರು. ಮಧುಗಿರಿ ಶಾಸಕ ವೀರಭದ್ರಯ್ಯ ಪ್ರಶ್ನೆಗೆ ಉತ್ತರಿಸಿದ ಸುನೀಲ್​ಕುಮಾರ್, ಇದುವರೆಗೆ 71,115 ರೈತರು ತತ್ಕಾಲ್ ಯೋಜನೆಯಡಿ ಐಪಿ ಸೆಟ್​ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಅದರಲ್ಲಿ ಮೊದಲ ಹಂತದಲ್ಲಿ 2014 ರೈತರಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು. 68 ಸಾವಿರ ರೈತರು ತತ್ಕಾಲ್ ಸೇವೆಗಾಗಿ ತಮ್ಮ ವಂತಿಗೆಯಾದ 10 ಸಾವಿರ ರೂ. ಪಾವತಿಸಿದ್ದಾರೆ, ಆದರೆ ಆಯಾ ವಿದ್ಯುತ್ ಕಂಪನಿ ತಲಾ 1.5 ಲಕ್ಷ ರೂ. ವ್ಯಯಿಸಬೇಕಾಗಿದೆ ಎಂದರು.

[t4b-ticker]

You May Also Like

More From Author

+ There are no comments

Add yours