ಮಾಹಿತಿ ಮತ್ತು ತಂತ್ರಜ್ಞಾನದ ಅವಶ್ಯಕತೆ ಸಮಾಜಕ್ಕೆ ಹೆಚ್ಚು ಅಗತ್ಯ:ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:ಇಂದಿನ ದಿನಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ಅವಶ್ಯಕತೆ ಸಮಾಜಕ್ಕೆ ಅಗತ್ಯವಾಗಿದೆ ಸರ್ಕಾರದ ಅಂಗವಾಗಿ ಕೆಲಸ ಮಾಡುತ್ತಿರುವಂತಹ ಖಾಸಗಿ ವ್ಯಕ್ತಿಗಳು ಕೂಡ ಇಂದಿನ ತಂತ್ರಜ್ಞಾನ ಮತ್ತು ಆಧುನಿಕತೆಯನ್ನು ಮೈ ಗೂಡಿಸಿಕೊಳ್ಳಬೇಕೆಂದು ತಹಲ್ದಾರ್ ಎನ್ ರಘುಮೂರ್ತಿ ಹೇಳಿದರು .

 

 

ನಗರದ ಇಂದು ತಾಲೂಕ ಕಚೇರಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರುಗಳಿಗೆ ವಿಜ್ಯನ್ಮಾನ ತಂತ್ರಜ್ಞಾನದ ಇ ಕೆ ವೈ ಸಿ ಬಳಕೆಯ ಬಗ್ಗೆ ವಿವಿಧ ಬ್ಯಾಂಕುಗಳಲ್ಲಿ ಡಿಜಿಟಲ್ ಹಣಕಾಸು ವ್ಯವಹಾರದ ಕುರಿತಾದ ಸಾಫ್ಟ್ ವೇರ್ ಬಳಕೆಯ ಬಗ್ಗೆ ಮಾತನಾಡಿ ಸರ್ಕಾರದ ಸಹಭಾಗಿತ್ವದಲ್ಲಿ ಕೆಲಸ ನಿರ್ವಹಿಸುತ್ತಿರುವ ಖಾಸಗಿ ನ್ಯಾಯ ಬೆಲೆ ಅಂಗಡಿ ಯ ಮಾಲೀಕರುಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಕೆಲಸ ಮಾಡಿಸುತ್ತಿರುವಂತಹ ಬಿ ಆರ್ ಓ ಗಳು ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವಂತ ಸ್ವಯಂಸೇವಕರು ಇನ್ನು ಮುಂತಾದ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇಂದಿನ ಯುಗದಲ್ಲಿ ಬ್ಯಾಂಕುಗಳಿಗೆ ಸಂಬಂಧಿಸಿದಂತ ಡಿಜಿಟಲ್ ಪಾವತಿಗೆ ಕುರಿತಂತ ತಂತ್ರಾಂಶಗಳನ್ನು ವ್ಯವಸ್ಥಿತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಇದರಿಂದ ಇದರಿಂದ ಸುಖವಾಗಿ ಪ್ರತಿ ಬ್ಯಾಂಕಿಗೆ ರೂ.50 ಗಳ ಬಳಕೆ ಶುಲ್ಕವನ್ನು ಪಾವತಿ ಮಾಡುವುದು ತಪ್ಪಿಸಿದಂತಾಗುತ್ತದೆ ಹಾಗಾಗಿ ಸಮಾಜದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರವು ಇನ್ನೂ ಹತ್ತು ಹಲವು ಪ್ರಾಯೋಗಿಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದು ಇವುಗಳೆಲ್ಲವುಗಳ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಇದಕ್ಕೆ ಸಂಬಂಧಿಸಿದ ಕನಿಷ್ಠ ಜ್ಞಾನ ಮತ್ತು ಬಳಕೆಯವಿಧಾನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು .
ಇದೇ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಶ್ರೀನಿವಾಸ್ ಮತ್ತು ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಯ ಮಾಲೀಕರುಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours