30 ವರ್ಷಗಳ ದಾರಿ ವಿವಾದಕ್ಕೆ ತೆರೆ ಎಳೆದ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ

 

 

 

 

ಚಿತ್ರದುರ್ಗ: ಸಾರ್ವಜನಿಕರು ಯಾರು ಸಹ ಸರ್ಕಾರಿ ಜಮೀನು, ನಕಾಶೆ ದಾರಿ, ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಳ್ಳಬಾರದು ಎಂದು ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಹೇಳಿದರು.

ತಾಲೂಕಿನ ಆಯಿತೋಳ್  ಗ್ರಾಮದಲ್ಲಿ  30  ವರ್ಷಗಳಿಂದ ಸಾರ್ವಜನಿಕರ ಅನುಕೂಲಕ್ಕೆ ಇದ್ದ  ನಕಾಶೆಯ  ರಸ್ತೆಯ ಒತ್ತೂವರೆ ಮಾಡಿಕೊಂಡಿರುವುದನ್ನು  ತಹಶೀಲ್ದಾರ್ ನೇತೃತ್ವದಲ್ಲಿ   ತೆರವುಗೊಳಿಸಿ ಸರ್ಕಾರಕ್ಕೆ ಪಡೆದು ಸಾರ್ವಜನಿಕರ ದಾರಿಗೆ ಅನುವು ಮಾಡಲಾಯಿತು.

 

 

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಅವರು  ಜನರು  ಸಾರ್ವಜನಿಕರ ಹಿತ  ದೃಷ್ಟಿಯಿಂದ ನಕಾಶೆ ದಾರಿಗಳು, ಸರ್ಕಾರಿ ಜಾಗಗಳು,‌ ಜಮೀನುಗಳ, ಸ್ಮಶಾನಗಳನ್ನು ಕಾಯ್ದೆರಿಸುತ್ತಾರೆ. ಆದರೆ ಅದನ್ನು  ಒತ್ತುವರಿ ಮಾಡಿಕೊಳ್ಳವುದರಿಂದ ಜನರಿಗೆ ಸಾಕಷ್ಟು ತೊಂದರೆ ಆಗುತ್ತದೆ‌. ಒಬ್ಬರ ಹಿತಕ್ಕಾಗಿ ನೂರಾರು ಜನರಿಗೆ ತೊಂದರೆ ಆಗಬಾರದು. ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು  ಕ್ರಿಮಿನಲ್ ಕೇಸ್ ದಾಖಲಿಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಧಿಕಾರಿ ಮತ್ತು ನೂರಾರು ಸಾರ್ವಜನಿಕರು ಹಾಜರಿದ್ದರು.

 

[t4b-ticker]

You May Also Like

More From Author

+ There are no comments

Add yours