ಎ.ಜಿ.ಸದಾಶಿವ ಅಯೋಗ ವರದಿ ಜಾರಿಯಾದರೆ ದಲಿತ ಸಮುದಾಯಕ್ಕೆ ನ್ಯಾಯ

 

 

 

 

ಚಳ್ಳಕೆರೆ-19: ಶೋಷಿತ ಸಮುದಾಯಕ್ಕೆ ಎ.ಜಿ.ಸದಾಶಿವ ಅಯೋಗ ವರದಿಯನ್ನು ಜಾರಿಗೆ ತರುವ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ತಿಳಿಸಿದರು.

 

 

ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದು 75ವರ್ಷಗಳೇ ಕಳೆದರೂ ಇಂದಿಗೂ ದಲಿತ ಸಮುದಾಯಕ್ಕೆ ಮುಕ್ತವಾಗಿ ಬದುಕುವ ಅವಕಾಶವಿಲ್ಲವಾಗಿದೆ. ಆಳುವ ಸರ್ಕಾರಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದ ರಕ್ಷಣೆ ನಿಲ್ಲಬೇಕು ಎಂದರು.

ತಾಲ್ಲೂಕು ಅಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ, ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪ್ರತಿ ಗ್ರಾಮದಲ್ಲೂ ನಮ್ಮ ಶಾಖೆ ಪ್ರಾರಂಭಿಸುವ ಮೂಲಕ ದಲಿತ ಸಮುದಾಯಕ್ಕೆ ಶ್ರೀರಕ್ಷೆಯಲಿದೆ. ನಮ್ಮ ಸಂಘಟನೆಯಿಂದ ದಲಿತ ರಕ್ಷಣೆಗೆ ಮುಂದಾಗಲಾಗುವುದು ಎಂದರು. ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ”ಕೋದಂಡರಾಮರವರ ಮಾರ್ಗದರ್ಶನದಲ್ಲಿ ಶಾಖೆ ಪ್ರಾರಂಭಿಸಲಾಗುವುದು.
ಜಿಲ್ಲಾಕಾರ್ಯಧ್ಯಕ್ಷ ವೃಷಬೆಂದ್ರ ಬಾಬು ಮಾತನಾಡಿ, ಬಾಬಾ ಸಾಹೇಬ್ ಡಾ”ಬಿ. ಆರ್. ಅಂಬೇಡ್ಕರ್ ಬಗ್ಗೆ ಗ್ರಾಮಸ್ಥರಿಗೆ ಮತ್ತು ನೂತನ ಪದಾಧಿಕಾರಿಗಳಿಗೆ ಅರಿವು ಮೂಡಿಸಬೇಕಿದೆ ಎಂದರು. ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಅಧ್ಯಕ್ಷ ರಾಮಚಂದ್ರ, ಸ್ವಾಭಿಮಾನಿ ಸೇನೆ ಸಂಘಟನೆ ಬೆಳೆದು ಬಂದ ದಾರಿ, ಸಂಘಟನೆಯ ನಿಯಮಗಳ ಬಗ್ಗೆ ನೂತನ ಪದಾಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸಿದಪ್ಪ, ಹನುಮಂತು, ಮುಜಾಹಿದ್, ದಾವಣಗೆರೆ ಜಿಲ್ಲಾ ಅಧ್ಯಕ್ಷ ಚಂದ್ರಣ್ಣ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರೇವಣ್ಣಸಿದಪ್ಪ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಮೊಹಮ್ಮದ್ ರಫಿ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ತಿಪ್ಪೇಶ್, ಹಿರಿಯೂರು ತಾಲ್ಲೂಕು ಕಾರ್ಯಧ್ಯಕ್ಷ ರಾಘವೇಂದ್ರ, ಹಿರಿಯೂರು ತಾಲ್ಲೂಕು ಕಾರ್ಯದರ್ಶಿ ಕಣುಮೇಶ್, ಚಿತ್ರದುರ್ಗ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ದಾದಾಪೀರ್, ತಾಲ್ಲೂಕು ಪ್ರದಾನ ಕಾರ್ಯದರ್ಶಿ ಜಾಕಿರ್, ತಾಲ್ಲೂಕು ಕಾರ್ಯದರ್ಶಿ ಖಾಸಿಂ, ತಾಲ್ಲೂಕು ಉಪಾಧ್ಯಕ್ಷ ದುರ್ಗೇಶ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಗೌತಮ್, ಮತ್ತು ಹೆಗ್ಗೆರೆ ಗ್ರಾಮದ ಎಲ್ಲಾ ನೂತನ ಪದಾಧಿಕಾರಿಗಳು ಮತ್ತು ಹೆಗ್ಗೆರೆ ಗ್ರಾಮದ ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours