ನರೇಗಾದಡಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಒದಗಿಸಿ: ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.17: ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ. ಗ್ರಾಮ ಪಂಚಾಯತಿ ಸ್ಥಳೀಯ ಸರ್ಕಾರವಿದ್ದಂತೆ. ನರೇಗಾದಡಿ (ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ) ಗ್ರಾಮದ ಮೂಲಭೂತ ಸೌಕರ್ಯಗಳ ಹೆಚ್ಚಿಸಲು ಅವಕಾಶವಿದೆ. ಸುಸಜ್ಜಿತ ಆಟದ ಮೈದಾನ ಶೌಚಾಲಯ, ಶಾಲೆ ಕಾಂಪೌಂಡ್ ನಿರ್ಮಿಸಬಹುದು.  ಆದ್ಯತೆ ಮೇರೆಗೆ ಇವುಗಳನ್ನು ಗ್ರಾಮ ಪಂಚಾಯತಿ ಯೋಜನೆಯಲ್ಲಿ ಸೇರಿಸಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಗ್ರಾಮ ಪಂಚಾಯತಿ ಅಧಿಕಾರಿ ಹಾಗೂ ಸದಸ್ಯರಿಗೆ ಸೂಚನೆ ನೀಡಿದರು.


ಶನಿವಾರ ಚಳ್ಳಕೆರೆ ತಾಲೂಕಿನ ಎನ್.ಮಹಾದೇವಪುರ ಗ್ರಾಮದಲ್ಲಿ ಆಯೋಜಿಸಲಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮವಾಸ್ತವ್ಯ ಕೈಗೊಂಡು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ಶಾಲೆ ಹಾಗೂ ಅಂಗನವಾಡಿ ಕೊಠಡಿಗಳ ದುರಸ್ತಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಯಾವ ಯೋಜನೆಯಡಿ ಇವುಗಳನ್ನು ನಿರ್ಮಾಣ ಕೈಗೊಳ್ಳಬಹುದು ಎಂದು ಪಿಡಿಓ ವರದಿ ನೀಡಬೇಕು. ಶಿಕ್ಷಣ ವ್ಯವಸ್ಥೆ ಬಲಪಡಿಸಲು ಎಲ್ಲರು ಶ್ರಮಿಸಬೇಕು. ಶಿಕ್ಷಣದಿಂದ ಜನರ ಜೀವನದಲ್ಲಿ ಬದಲಾವಣೆ ಸಾಧ್ಯ. ಗ್ರಾಮಸ್ಥರು ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ವಿಷಯವಾರು ಶಿಕ್ಷಕರ ನೇಮಕಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಶೀಘ್ರವಾಗಿ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮದ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಹಾಗೂ ಔಷಧಿಗಳ ಕೊರತೆ ಇದ್ದರೆ ಅದನ್ನು ಸರಿಪಡಿಸಲಾಗಿವುದು. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಇದರ ಅನುಪಾಲ ವರದಿಯನ್ನು ತಹಶಿಲ್ದಾರರು ಸಂಬಂಧ ಪಟ್ಟವರಿಗೆ ನೀಡುವರು. ಭೂ ದಾಖಲೆಗಳ ಸಮಸ್ಯೆಗಳು ನಮ್ಮ ಹಂತದಲ್ಲಿ ಇದ್ದರೆ ತಕ್ಷಣ ಪರಿಹಾರ ನೀಡುತ್ತೇವೆ. ಇಲ್ಲವಾದರೆ ಸರ್ಕಾರದ ನಿರ್ದೇಶನ ಕೋರಿ ಪತ್ರ ಬರೆಯಲಾಗುವುದು. ಕಂದಾಯ ಹೊರತು ಪಡಿಸಿ ಬೇರೆ ಇಲಾಖೆ ಮನವಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಕಳುಹಿಸಿಕೊಡಲಾಗುವುದು ಎಂದರು.

ತಹಶೀಲ್ದಾರ್ ರಘುಮೂರ್ತಿ  ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾಗಿ ಅನುμÁ್ಠನಗಳಿಸಲು ಪ್ರಯತ್ನಿಸಲಾಗಿದೆ. ಗ್ರಾಮ ವಾಸ್ತವ್ಯ ಕೈಗೊಳ್ಳುವ ಗ್ರಾಮದಲ್ಲಿ ಒಂದು ತಿಂಗಳ ಮುಂಚೆ ಗ್ರಾಮದ ಸಮಸ್ಯೆಗಳ ಕುರಿತು ಸರ್ವೇ ಮಾಡಲಾಗಿದೆ. ಗ್ರಾಮಗಳಲ್ಲಿ 35 ರಿಂದ 40 ವರ್ಷಗಳಿಂದ ಬಗೆಹರಿಯದ ಫೌತಿ ಖಾತೆಗಳನ್ನು ಸರಿಪಡಿಸಲಾಗಿದೆ. ಪೆÇೀಡಿ ಪ್ರಕರಣ, ಸ್ಮಶಾನ, ದಾರಿ ವಿವಾದ ಇತ್ಯರ್ಥ ಪಡಿಸಲಾಗಿದೆ. ಸಾಮಾಜಿಕ ಭಧ್ರತೆ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ತಾಲೂಕಿನ 82 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮವಾಗಿ ಘೋಷಿಸಲಾಗಿದೆ. ತಾಲೂಕಿನ 1750 ಯುವಕರಿಗೆ ದೆಹಲಿಯಿಂದ ಆನ್ ಲೈನ್ ಮೂಲಕ ಕೋಚಿಂಗ್ ನೀಡಲಾಗುತ್ತಿದೆ. 12 ಶಾಲೆಗಳಲ್ಲಿ ದಾನಿಗಳಿಂದ ನಿಧಿ ಸಂಗ್ರಹಿಸಿ ಸ್ಮಾರ್ಟ್ ಕ್ಲಾಸ್ ನಿರ್ಮಿಸಲಾಗಿದೆ. 10 ಶಾಲೆಗಳಿಗೆ ನವೀಕೃತವಾಗಿ ಬಣ್ಣ ಬಳಸಲಾಗಿದೆ. ಅಕಾಲಿಕ ಮಳೆಯಿಂದಾಗಿ ತಾಲೂಕಿನ 46 ಸಾವಿರ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ವರದಿಯನ್ನು ನಮೂದಿಸಲಾಗಿದೆ. ರೂ.72 ಕೋಟಿ ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗಿದೆ ಎಂಬ ಮಾಹಿತಿ ನೀಡಿದರು.
ಕಂದಾಯ ಗ್ರಾಮಕ್ಕೆ ಮನವಿ:ಎನ್.ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮನಮೈನಹಟ್ಟಿ ಹಾಗೂ ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮವಾಗಿ ಮಾರ್ಪಾಡಿಸಲು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ತಹಶಿಲ್ದಾರರ ರಘುಮೂರ್ತಿ ಕಂದಾಯ ಗ್ರಾಮವಾಗಿಸಲು ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ. ಮನಮೈನಹಟ್ಟಿ ಗ್ರಾಮದ ಸರಹದ್ದಿನ ಕೆಲವು ಪ್ರದೇಶಗಳನ್ನು ನಾಯಕನಹಟ್ಟಿ ಪಟ್ಟಣ ಪಂಚಾಯಿ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಈ ಕುರಿತು ಸರ್ಕಾರ ವರದಿ ಸಲ್ಲಿಸಲಾಗಿದೆ. ಸರ್ಕಾರದಿಂದ ಸರಹದ್ದಿ ಜಾಗದ ಕುರಿತು ಡಿ ನೋಟಿಫಿಕೇಷನ್ ಆದ ತಕ್ಷಣ ಕಂದಾಯ ಗ್ರಾಮವಾಗಿ ಮಾರ್ಪಾಡು ಮಾಡಲಾಗುವುದು ಎಂದರು.

 

 

ಸರ್ಕಾರಿ ಕಾಲೇಜು ಸ್ಥಾಪನೆ ಹಾಗೂ ಬಸ್ ಸಂಪರ್ಕ ಕಲ್ಪಿಸಲು ಒತ್ತಾಯ: ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಪಿಯು ಕಾಲೇಜುಗಳು ಇಲ್ಲ. ಇದರಿಂದ ಗ್ರಾಮದ ಮಕ್ಕಳ ಜಗಳೂರು, ಚಿತ್ರದುರ್ಗ ಹಾಗೂ ತಳುಕು ಗ್ರಾಮಕ್ಕೆ ತೆರಳಿ ವಿಧ್ಯಾಭ್ಯಾಸ ಮಾಡಬೇಕಾದ ಪ್ರಸಂಗ ಒದಗಿ ಬಂದಿದೆ. ಖಾಸಗಿ ಕಾಲೇಜುಗಳ ಹಿತಾಸಕ್ತಿಯಿಂದಾಗಿ ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ತಡೆ ಬಂದಿದೆ. ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಸೂಕ್ತ ಬಸ್ ಸಂಪರ್ಕವೂ ಇಲ್ಲ. ಆದ್ದರಿಂದ ಸರ್ಕಾರಿ ಪಿ.ಯು. ಕಾಲೇಜು ಹಾಗೂ ಬಸ್ ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ತರು ಒತ್ತಾಯಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು .ಜಿ.ಆರ್.ಜೆ ಗ್ರಾಮಸ್ಥರ ಮನವಿ ಪುರಸ್ಕರಿಸಿ, ಸುತ್ತಮುತ್ತಲಿನ ಗ್ರಾಮದಿಂದ ವಿದ್ಯಾಭ್ಯಾಸ ಅರಸಿ ದೂರದ ನಗರಗಳಿಗೆ ತೆರಳಿರುವ ವಿಧ್ಯಾರ್ಥಿಗಳು ಮಾಹಿತಿ ಸಂಗ್ರಹಿಸಿ, ಸರ್ಕಾರಿ ಪಿ.ಯು ಕಾಲೇಜು ಸ್ಥಾಪನೆಯ ಕುರಿತು ಸೂಕ್ತ ವರದಿ ನೀಡುವಂತೆ ಪಿ.ಯು ಉಪನಿರ್ದೇಶಕ ಡಿ.ರಾಜು ಅವರಿಗೆ ಸೂಚನೆ ನೀಡಿದರು.
ಹಂಡಿ ಜೋಗಿ ಅಲೆಮಾರಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ವಿದ್ಯಾರ್ಥಿಗಳಿಂದ ಬೇಡಿಕೆ: ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಹಂಡಿ ಜೋಗಿ ಅಲೆಮಾರಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ನೀಡುತ್ತಿಲ್ಲ. ಈ ಹಿಂದೆ 2012 ರಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗಿತ್ತು. ಎಸ್.ಟಿ. ಸಮುದಾಯಕ್ಕೆ ಸೇರಿದ ಕಡುಬಡತನದಲ್ಲಿ ಇರುವ ಹಂಡಿ ಜೋಗಿ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ಇಲ್ಲದೆ, ವಿದ್ಯಾಭ್ಯಾಸ ಹಾಗೂ ಸರ್ಕಾರಿ ಉದ್ಯೋಗಕ್ಕೆ ಅರ್ಜಿಸಲ್ಲಿಸು ತೊಂದರೆಯಾಗುತ್ತದೆ. ಇದನ್ನು ಶೀಘ್ರವಾಗಿ ಸರಿಪಡಿಸಲು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಯಾವ ಕಾರಣಕ್ಕಾಗಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಲಾಗಿದೆ ಎಂಬುದನ್ನು ಪರಿಶೀಲಿಸುತ್ತೇನೆ.  ಸರ್ಕಾರ ನಿಯಮ ಹಾಗೂ ನಿರ್ದೇಶನಗಳ ಅನುಸಾರ ಸಮುದಾಯ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ರಾಷ್ಟೀಯ ಪೆÇೀಷಣಾ ಅಭಿಯಾನದ ಅಂಗವಾಗಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ನೆರವೆರಿಸಿದರು. ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಬ್ಯಾಂಕ್ ಪಾಸ್ ಪುಸ್ತಕ ನೀಡಿದರು. ಚಿಕ್ಕ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಿದರು. ವಿವಿಧ ಸಾಮಾಜಿಕ ಭದ್ರತಾ ಯೋಜನೆ ಫಲನುಭವಿಗಳಿಗೆ ಹಕ್ಕುಪತ್ರ ಆದೇಶ ಪ್ರತಿಗಳನ್ನು ಹಸ್ತಾಂತರಿಸಿದರು.

ಭವ್ಯ ಸ್ವಾಗತ : ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಆಗಮನದ ಹಿನ್ನಲೆಯಲ್ಲಿ ಎನ್.ಮಹದೇವಪುರ  ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಶಾಲಾ ಮಕ್ಕಳು ಹಾಗೂ ಗ್ರಾಮದ ಮಹಿಳೆಯರು ಪೂರ್ಣ ಕುಂಬಹೊತ್ತು ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿದರು. ಹೂವಿನಿಂದ ಅಲಂಕೃತಗೊಂಡ ಚಕ್ಕಡಿ ಬಂಡಿ ಏರಿದ ಜಿಲ್ಲಾಧಿಕಾರಿಗಳನ್ನು ಗ್ರಾಮದ ಕುಕ್ಕಡದೇಶ್ವರಿ ಹಾಗೂ ಮಹಾಲಿಂಗೇಶ್ವರ ಆವರಣದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಖಾಸ ಬೇಡ ಪಡೆ ವೇಷ ತೊಟ್ಟ ವಿದ್ಯಾರ್ಥಿಗಳು, ಸಾಂಪ್ರದಾಯಿಕ ಲಂಬಾಣಿ ಬಟ್ಟೆ ಧರಿಸಿದ ವಿದ್ಯಾರ್ಥಿನಿಯರು, ಬಣ್ಣ ಬಣ್ಣದ ಬಟ್ಟೆ ನವಿಲು ಗರಿಯಿಂದ ಸಿಂಗರಿಸಿದ ಪೇಟ ತೊಟ್ಟ ಕಿಂದರಿ ಜೋಗಿ ಕಹಳೆ, ಡೋಲು ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಬಾಯಿ.ಕೆ.ಪಿ., ಉಪಾಧ್ಯಕ್ಷೆ ತಿಪ್ಪಮ್ಮ ತಿಪ್ಪೆಸ್ವಾಮಿ,ಜಿ.ಪಂ. ಉಪಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿವಣ್ಣ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ.ಜಿ, ಪಶು ವೈದ್ಯ ಹಾಗೂ ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ಎಸ್.ಕಲ್ಲಪ್ಪ, ತಾ.ಪಂ.ಇಓ ಹೊನ್ನಯ್ಯ, ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿ ವೈಶಾಲಿ.ಜಿ ಸೇರಿದಂತೆ ಇತರೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ. ಸದಸ್ಯರಾದ ತಿಪ್ಪೇಸ್ವಾಮಿ, ಓಬಲೇಶ್, ಶ್ವೇತಾ ಪಾಟೀಲ್, ಎಂ.ಪಾಲಯ್ಯ, ಶಾಂತಮ್ಮ, ರೋಹಿಣಿ ಬಾಯಿ, ಶಿವಣ್ಣ ಹೆಚ್,  ಶಿವಕುಮಾರ್, ನಿರಂಜನ್, ಪಿ.ಡಿ.ಓ ರಾಘವೇಂದ್ರ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ಲಿಂಗಣ್ಣ, ಗ್ರಾಮದ ಮುಖಂಡ ಮಾಜಿ.ಜಿ.ಪಂ.ಸದಸ್ಯ ಪಟೇಲ್ ಜಿ ತಿಪ್ಪೇಸ್ವಾಮಿ, ಮುಖಂಡರುಗಳಾದ ಮಸಿಯಪ್ಪ, ಪಿ.ಜಿ.ಬೋರನಾಯಕ, ಮಕ್ಸೂದ್ ಬಾμÁ ಮತ್ತಿತರರು ಇದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಗಾಯನ ಪ್ರಸ್ತುತ ಪಡಿಸಿದರು.

 

[t4b-ticker]

You May Also Like

More From Author

+ There are no comments

Add yours