ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಪುನರಾರಂಭ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.12:
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಸೋಮವಾರ ಪುನರಾರಂಭಗೊಂಡಿತು.
ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಕುಟುಂಬ ಯೋಜನೆ  ಶಸ್ತ್ರ  ಚಿಕಿತ್ಸಾ ಶಿಬಿರ ಕೋವಿಡ್ ಕಾರಣದಿಂದಾಗಿ ಪ್ರತಿ ತಿಂಗಳು ನಡೆಯುತ್ತಿದ್ದ ಶಿಬಿರ ಕಳೆದ 3 ವರ್ಷಗಳಿಂದ ನಿಲ್ಲಿಸಲಾಗಿತ್ತು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ದೇವರಾಜ್ ಅವರು ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಅವರಿಗೆ ಪುನಃ ಮಹಿಳಾ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಪ್ರಾರಂಭಿಸಿ, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವಂತೆ ಪತ್ರದ ಮೂಲಕ ಕೋರಿದ್ದರು.  ಅದರಂತೆ ಜಿಲ್ಲಾ ಆರೋಗ್ಯಾಧಿಕಾರಿ ಅವರು ಜಿಲ್ಲಾ ಕಾರ್ಯಕ್ರಮ ಅನುμÁ್ಠನಾಧಿಕಾರಿ ಡಾ.ರೇಣುಪ್ರಸಾದ್ ಅವರೊಂದಿಗೆ ಮಾತನಾಡಿ ಸಾರ್ವಜನಿಕರ ಉಪಯೋಗಗಕ್ಕೆ ಅಗತ್ಯ ಪೂರ್ವ ಸಿದ್ದತೆಯೊಂದಿಗೆ ಪ್ರಾರಂಭಿಸಲು ಸೂಚಿಸಿದಂತೆ, ಮಹಿಳಾ ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸಾ ಶಿಬಿರ  ಪುನಃ ಪ್ರಾರಂಭಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದೇವರಾಜ್ ಚಾಲನೆ ನೀಡಿ ಮಾತನಾಡಿ, ನಮ್ಮ ಭಾಗದ ಜನರ ಆಶಯ ಪೂರ್ಣಗೊಂಡಂತಾಗಿದೆ. ಇದೇ ರೀತಿ ಜನೌಷಧಿ ಮಳಿಗೆ ಪ್ರಾರಂಭವಾದರೆ ಇನ್ನೂ ಹೆಚ್ಚಿನ ಅನುಕಾಲವಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಕ್ಷೇತ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಕರೆ ತಂದು ಪ್ರತಿ ಮಾಹೆ ಈ ಶಿಬಿರವನ್ನು ಯಶಸ್ವಿಗೊಳಿಸಿ ಎಂದರು.
ಶಿಬಿರದಲ್ಲಿ ಹಿರಿಯ ವೈದ್ಯರಾದ ಡಾ.ತುಳಿಸಿ ರಂಗನಾಥ, ಆಡಳಿತ ವೈದ್ಯಾಧಿಕಾರಿ ಡಾ.ತಿಮ್ಮೇಗೌಡ, ವೈದ್ಯರಾದ ಡಾ.ಮೇಘನ, ಡಾ.ಪವಿತ್ರ,  ಶಸ್ತ್ರಚಿಕಿತ್ಸಕ ಡಾ.ವಿನಯ್ ರಾಜ್,  ಅರವಳಿಕೆ ತಜ್ಞರಾದ ಡಾ.ವಿಕಾಸ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಸಿಬ್ಬಂದಿಗಳಾದ ಬಿ.ಮೂಗಪ್ಪ, ಮೋಹನ್, ಕ್ಲಾರಾ, ಗೌರಮ್ಮ, ಕಮಲಮ್ಮ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು

 

 

[t4b-ticker]

You May Also Like

More From Author

+ There are no comments

Add yours