ಆಪ್ತ  ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.12:
ಚಿತ್ರದುರ್ಗ ಸೌಖ್ಯ ಸಮುದಾಯದ ಸಂಸ್ಥೆಯ ದಮನಿತ ಮಹಿಳೆಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದವರ ಗುರಿಯಾಧಾರಿತ ಯೋಜನೆಯಲ್ಲಿ ಆಪ್ತ  ಸಮಾಲೋಚಕರ 1 ಹುದ್ದೆ ಖಾಲಿ ಇದ್ದು, ಆಪ್ತ ಸಮಾಲೋಕಚರಾಗಿ ಕಾರ್ಯ ನಿರ್ವಹಿಸಲು ಎಂಎಸ್‍ಡಬ್ಲ್ಯೂ ವಿದ್ಯಾರ್ಹತೆ ಹೊಂದಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಅನುದಾನದಿಂದ  ಅನುಷ್ಠಾನಗೊಳಿಸಿರುವ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ ಅಡಿಯಲ್ಲಿ ಕಾರ್ಯ ಕಾರ್ಯನಿರ್ವಹಿಸುತ್ತಿರುವ ಗುರಿಯಾಧಾರಿತ ಯೋಜನೆಯ ಆಪ್ತ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 17ರೊಳಗೆ ಸ್ವ ವಿವರ ಮತ್ತು ದಾಖಲಾತಿಯ ನಕಲು ಪ್ರತಿಗಳನ್ನು ಇಮೇಲ್ ಮೂಲಕ  ಅಥವಾ ಕಚೇರಿಗೆ ಸಲ್ಲಿಸಬೇಕು.

 

 

ಆಪ್ತ ಸಮಾಲೋಚಕರ 1 ಹುದ್ದೆಯು ಖಾಲಿ ಇದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಬೇಕು. ಎಂಎಸ್‍ಡಬ್ಲ್ಯೂ ಪದವಿ ಹೊಂದಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.  ಮಾಸಿಕ ರೂ.12,000/- ವೇತನ ಹಾಗೂ ಮಾಸಿಕ ಪ್ರಯಾಣ ಭತ್ಯೆ ರೂ. 900/- ನೀಡಲಾಗುವುದು.

ಕನಿಷ್ಠ 2 ವರ್ಷಗಳ ಕಾಲ ಹೆಚ್‍ಐವಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಹಾಗೂ ದಮನಿತ ಮಹಿಳೆಯರ ಜೊತೆ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು ಹಾಗೂ ಬೇಸಿಕ್ ಕಂಪ್ಯೂಟರ್, ಎಂಎಸ್ ವರ್ಡ್, ಎಂಎಸ್ ಎಕ್ಸೆಲ್, ಎಂಎಸ್ ಪವರ್ ಪಾಯಿಂಟ್ ಬಗ್ಗೆ ಜ್ಞಾನವಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸೌಖ್ಯ ಸಮುದಾಯ ಸಂಸ್ಥೆ, ಕನ್ನಿಕಾ ನಿಲಯ, ಜೆಸಿಆರ್ ಬಡವಾಣೆಯ 1ನೇ ಕ್ರಾಸ್, ಎಸ್‍ಬಿಐ ಬ್ಯಾಂಕ್ ಹತ್ತಿರ, ಜೆ.ಸಿಆರ್ ಬ್ರಾಂಚ್, ಚಿತ್ರದುರ್ಗ ಹಾಗೂ ದೂರವಾಣಿ ಸಂಖ್ಯೆ 9945850301 ಹಾಗೂ ಇ-ಮೇಲ್ ಐಡಿ  soukhyafswtione@gmail.com    ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours