ಗರ್ಭಿಣಿಯರು ಕಾಲಕಾಲಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಂಡಲ್ಲಿ ಅನಾಹುತ ತಪ್ಪಿಸಬಹುದು:ಡಾ.ಅಕ್ಷತಾ

 

 

 

 

ಕರ್ನಾಟಕ ವಾರ್ತೆ).ಡಿ.09:
ಗರ್ಭಿಣಿಯರು ಕಾಲಕಾಲಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಂಡಲ್ಲಿ ಮುಂದೆ ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತೊಡಕು, ಅನಾಹುತಗಳನ್ನು ತಪ್ಪಿಸಬಹುದು ಎಂದು ವೈದ್ಯಾಧಿಕಾರಿ ಡಾ.ಅಕ್ಷತಾ ಸಲಹೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಗೊಡಬನಹಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜರುಗಿದ ಪ್ರಧಾನಮಂತ್ರಿ ಸುರಕ್ಷಿತ ಅಭಿಯಾನದಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿ  ಸುರಕ್ಷಿತ ಮಾತೃತ್ವ ಅಭಿಯಾನ ಪ್ರತಿ ತಿಂಗಳು 9ನೇ ತಾರೀಕಿನಂದು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸುವ ಯೋಜನೆಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಗರ್ಭಿಣಿಯರಿಗೆ ಉಚಿತ ವೈದ್ಯಕೀಯ, ಪ್ರಯೋಗಾಲಯದ ಪರೀಕ್ಷೆ ಚಿಕಿತ್ಸೆ ಪೌಷ್ಟಿಕಾಹಾರ ಮಾಹಿತಿ ಶಿಕ್ಷಣ ನೀಡುವುದಾಗಿದೆ. ಪ್ರತಿ ಗರ್ಭಿಣಿಯರು ಈ ದಿನಾಂಕದಂದು ತಪ್ಪದೇ ಸರ್ಕಾರದ ಯೋಜನೆ ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.
ಗರ್ಭೀಣಿಯರು ಕಾಲಕಾಲಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಂಡಲ್ಲಿ ಮುಂದೆ  ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತೊಡಕು ಅನಾಹುತಗಳನ್ನು ತಪ್ಪಿಸಿ, ಸಹಜ ಹೆರಿಗೆಗೆ ಸಿದ್ದವಾಗಬಹುದು. ತಾಯಿ ಮರಣ, ಶಿಶು ಮರಣ ತಪ್ಪಿಸ ಬಹುದು ಎಂದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಸ್ಥಳೀಯವಾಗಿ ದೊರೆಯುವ ರಕ್ತಹೀನತೆ ಸರಿದೂಗಿಸುವ ಪೌಷ್ಟಿಕಾಹಾರ ಸೇವನೆ ಲಘು ವ್ಯಾಯಾಮ, ನಡಿಗೆ, ಚಟುವಟಿಕೆಯಿಂದ ಕೂಡಿರುವುದು, ಸಹಜ ಹೆರಿಗೆಗೆ ಅಗತ್ಯ ಮನೋ ಸ್ಥೈರ್ಯ, ಹೆರಿಗೆ ಪೂರ್ವಸಿದ್ಧತೆ ಆರೋಗ್ಯ ಇಲಾಖೆಯಿಂದ ದೊರೆಯುವ ತಾಯಿ ಮಕ್ಕಳ ಸೇವೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಗರ್ಭಿಣಿಯರ ತಪಾಸಣೆ ನಡೆಸಲಾಯಿತು. 5 ಗರ್ಭಿಣಿಯರಿಗೆ ರಕ್ತಹೀನತೆ ಕಾರಣ ಕಬ್ಬಿಣಾಂಶದ ಐರನ್ ಸುಕ್ರೋಸ್ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಕಾತ್ಯಾಯಣಮ್ಮ, ತಾಲ್ಲೂಕು ಆಶಾ ಭೋದಕರಾದ ಪದ್ಮಜಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷತಾಧಿಕಾರಿ, ಶುಶ್ರೂμÁಧಿಕಾರಿ, ಫಾರ್ಮಸಿ ಅಧಿಕಾರಿಗಳು ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಗಳು, ಆಶಾ ಕಾರ್ಯಕರ್ಯರು, ಗರ್ಭಿಣಿಯರು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours