ಹೊಳಲ್ಕೆರೆ ಪುರಸಭೆ ವತಿಯಿಂದ ಕೆರೆಯ ಸ್ವಚ್ಛತೆ

 

 

 

 

ಹೊಳಲ್ಕೆರೆ: ಪಟ್ಟಣದ ಹೊಸದುರ್ಗ ರಸ್ತೆಯ ಕೆಸರುಕಟ್ಟೆ ಕೆರೆಯನ್ನು ಉತ್ತಮ ಪ್ರವಾಸೀ ತಾಣವಾಗಿಸುವ ನಿಟ್ಟಿನಲ್ಲಿ ಮತ್ತು ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಉದ್ದೇಶದಿಂದ ಹೊಳಲ್ಕೆರೆ ಕ್ಷೇತ್ರದ ಶಾಸಕರಾದ ಎಂ ಚಂದ್ರಪ್ಪನವರು ಕೆರೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕೆರೆಯ ಮಧ್ಯದಲ್ಲಿ ಶಿವನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿ, ಶಿವನ ಕೆರೆ ಎಂದು ನಾಮಕರಣ ಮಾಡಿ ದೋಣಿ ವಿಹಾರ ವ್ಯವಸ್ಥೆಯನ್ನು ಕಲ್ಪಿಸಿ ಉತ್ತಮ ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಲು ಉದ್ದೇಶಿಸಿರುತ್ತಾರೆ.

 

 

ಈ ನಿಟ್ಟಿನಲ್ಲಿ ಹೊಳಲ್ಕೆರೆ ಪುರಸಭೆಯ ಪೌರಕಾರ್ಮಿಕರು ಕೆಸರುಕಟ್ಟೆ ಕೆರೆಯಲ್ಲಿ ದೋಣಿಯ ಮೂಲಕ ತೆರಳಿ ಕೆರೆಯಲ್ಲಿ ತೇಲುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಪಾಚಿ, ಗಿಡ ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿದರು ಹಾಗೂ ಕೆರೆಯ ದಡದ ಸುತ್ತಲೂ ಇದ್ದಂತಹ ತೇಲುವ ತ್ಯಾಜ್ಯ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಹೊಳಲ್ಕೆರೆ ಪುರಸಭೆಯ ಅಧ್ಯಕ್ಷರಾದ ಆರ್ ಎ ಅಶೋಕ್, ಉಪಾಧ್ಯಕ್ಷರಾದ ಕೆ ಸಿ ರಮೇಶ್ ಮತ್ತು ಪುರಸಭೆಯ ಸರ್ವ ಸದಸ್ಯರುಗಳು, ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಎ ವಾಸಿಂ ಹಾಗೂ ಆರೋಗ್ಯ ನಿರೀಕ್ಷಕ ಮಹಮದ್ ಶೌಕತ್ ಅಲಿ ಸ್ಥಳದಲ್ಲಿ ಇದ್ದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರಕಾರ್ಮಿಕರ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours