ತುರುವನೂರು ನಾಡಕಚೇರಿಗೆ ನೂತನ ನೀರು, ನೆರಳು, ಆಸನ ವ್ಯವಸ್ಥೆ ಉದ್ಘಾಟಿಸಿದ ಡಿಸಿ ದಿವ್ಯಪ್ರಭು ಜಿ.ಆರ್.ಜೆ

 

 

 

 

ಚಿತ್ರದುರ್ಗ:ತುರುವನೂರು ನಾಡಕಛೇರಿ ಮುಂಭಾಗದಲ್ಲಿ  ಸಾರ್ವಜನಿಕರು ಬಿಸಿಲಿನಲ್ಲಿ ನಿಲ್ಲಬಾರದು ಎಂಬ ಹಿತದೃಷ್ಟಿಯಿಂದ ಜನರಿಗೆ  ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ವೇದಾಂತ ಮೈನಿಂಗ್ ಸಹಕಾರದೊಂದಿಗೆ ನಿರ್ಮಿಸಿದ್ದು ಇದನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಉದ್ಘಾಟಿಸಿದರು.

 

 

ತಹಶೀಲ್ದಾರ್ ಜಿ.ಹೆಚ್. ಸತ್ಯನಾರಾಯಣ ಮಾತನಾಡಿ ತುರುವನೂರು ಅತಿ ದೊಡ್ಡ ಹೋಬಳಿ ಕೇಂದ್ರವಾಗಿದ್ದು ನಿತ್ಯ ನೂರಾರು  ಜನರು  ನಾಡ ಕಚೇರಿಗೆ ಅಗಮಿಸುತ್ತಾರೆ.‌ಆದರೆ ಬಿಸಿಲು ಹೆಚ್ಚಿದ್ದಾಗ ಕಷ್ಟವಾಗುತ್ತದೆ ಎಂಬುದನ್ನು ಅರಿತು ವೇದಾಂತ ಮೈನಿಂಗ್ ಅವರ ಸಹಕಾರ ಪಡೆದು  ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮತ್ತು ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ  ಮಾಡಲಾಗಿದೆ. ಚಿತ್ರದುರ್ಗ ತಾಲೂಕು ಕಚೇರಿ ಮುಂಭಾಗದಲ್ಲಿ ಸಹ ದಾನಿಗಳನ ಮುಖಾಂತರ ಆಸನ ವ್ಯವಸ್ಥೆ, ನೆರಳಿನ ವ್ಯವಸ್ಥೆ , ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.ಇದಕ್ಕೆ ಸಹಕಾರ ನೀಡಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಈ‌ ಸಂದರ್ಭದಲ್ಲಿ ಗ್ರಾಮದ ಸಾರ್ವಜನಿಕರು, ನಾಡಕಚೇರಿ ಸಿಬ್ಬಂದಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours