ಅರಳಿದ ಹೂವುಗಳು” ಯಶಸ್ವಿಯಾಗಿ ಮುಕ್ತಾಯಗೊಂಡ ಚಿತ್ರೀಕರಣ

 

 

 

 

ಚಿತ್ರದುರ್ಗ:ಸೋನು ಫಿಲಂಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿರುವ ನಿವೃತ್ತ ಶಿಕ್ಷಕ ಕೆ.ಮಂಜುನಾಥ್ ನಾಯಕ್ ಅವರ ಕಾದಂಬರಿ ಆಧಾರಿತ “ಅರಳಿದ ಹೂವುಗಳು” ಚಲನಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಸ್ತ್ರೀ ಶಿಕ್ಷಣದ ಬಗ್ಗೆ, ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮತ್ತು ಹೆಣ್ಣು ಅಬಲೆಯಲ್ಲ ಸಬಲೆ ಎಂಬ ಕಥಾಹಂದರವನ್ನು ಈ ಚಲನಚಿತ್ರ ಹೊಂದಿದೆ. ಈ ಚಲನಚಿತ್ರವನ್ನು ಚಿತ್ರದುರ್ಗ ಮತ್ತು ಅಸುಪಾಸಿನಲ್ಲಿ ಚಿತ್ರೀಕರಣ ನಡೆದಿದ್ದು, ಈಚೆಗೆ ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ಚಿತ್ರೀಕರಣ ಮುಕ್ತಾಯಗೊಂಡಿತು. 2023ರ ಜನವರಿಯಲ್ಲಿ ಹೊಸ ವರ್ಷಕ್ಕೆ ಚಿತ್ರ ಬೆಳ್ಳಿ ತೆರೆಗೆ ಬರಲಿದೆ.
ಚಿತ್ರವನ್ನು ಸೋನು ಫಿಲಂಸ್‍ನ ಕೆ.ಮಂಜುನಾಥ್ ನಾಯಕ್ ಅವರು ನಿರ್ಮಿಸುತ್ತಿದ್ದು, ಎಂ.ಸುಮೀತ್ ಕುಮಾರ್ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಚಿತ್ರವನ್ನು ಪುರುಷೋತ್ತಮ ಓಂಕಾರ್ ನಿರ್ದೇಶಿಸಿದ್ದಾರೆ.
ತಾರಾಗಣದಲ್ಲಿ ಕೆ.ಮಂಜುನಾಥ್ ನಾಯಕ್, ಧನಲಕ್ಷ್ಮಿ, ಭಾಗ್ಯಶ್ರೀ, ಶಶಿಕಲಾ ಮುಂತಾದವರು ಅಭಿನಯವಿದೆ.
ಈ ಚಲನಚಿತ್ರವು ಮುಖ್ಯವಾಗಿ ಮಹಿಳಾ ಶಿಕ್ಷಣದ ಬಗ್ಗೆ ಇದ್ದು, ಮಹಿಳೆ ಅಬಲೆಯಲ್ಲ ಸಬಲೆ ಎಂದು ಬಿಂಬಿಸಲಾಗಿದೆ. ಇದಲ್ಲದೇ ಅನೇಕ ರೋಚಕ ದೃಶ್ಯಗಳು ಒಳಗೊಂಡಿವೆ. ಚಿತ್ರದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳು ಮತ್ತು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರ ಇದಾಗಿದೆ. ಈ ಚಲನಚಿತ್ರಕ್ಕೆ ಡಾ.ರಾಜ್‍ಕುಮಾರ್‍ರವರ ಚಲನಚಿತ್ರಕ್ಕೆ ಕ್ಯಾಮರಮನ್ ಆಗಿ ಕೆಲಸ ನಿರ್ವಹಿಸಿದ ಮುತ್ತುರಾಜ್ ಅವರು ಈ ಚಿತ್ರಕ್ಕೆ ಕ್ಯಾಮರಾದ ಸ್ವಿಚ್ ಆನ್ ಮಾಡಿದ್ದಾರೆ.
ಕಾದಂಬರಿ ಆಧಾರಿತ “ಅರಳಿದ ಹೂವುಗಳು” ಚಲನಚಿತ್ರವು ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಪೂರ್ಣಗೊಂಡು ಮುಕ್ತಾಯವಾಗಿದೆ. ಡಿಸೆಂಬರ್ ಮಾಹೆಯಲ್ಲಿ ಎಡಿಟಿಂಗ್ ಕಾರ್ಯಪೂರ್ಣಗೊಳಿಸಿ, ಹೊಸ ವರ್ಷದ ಜನವರಿಗೆ ಬೆಳ್ಳಿ ತೆರೆಯಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಮಹಿಳಾ ಶಿಕ್ಷಣದ ಮಹತ್ವ ಕುರಿತು ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಹಾಗೂ ನಟ ಕೆ.ಮಂಜುನಾಥ್ ನಾಯಕ್.

 

 

[t4b-ticker]

You May Also Like

More From Author

+ There are no comments

Add yours