ಕ್ರಿಕೆಟ್ ಬೆಟ್ಟಿಂಗ್, ಕ್ಯಾಸಿನೋ ದಂಧೆ ಆರೋಪದಡಿ ಕೆ.ಸಿ.ವೀರೇಂದ್ರ ಪಪ್ಪಿ ವಿರುದ್ದ 420 ಕೇಸ್ ದಾಖಲು

 

 

 

 

ಚಿತ್ರದುರ್ಗ: ನ:16: ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕ್ಯಾಸಿನೋ ದಂಧೆ ಆರೋಪದ ಮೇಲೆ ಉದ್ಯಮಿ ಹಾಗೂ ನಟ ದೊಡ್ಡಣ್ಣನ ಅಳಿಯ ಕೆ.ಸಿ. ವೀರೇಂದ್ರ ಅವರ ಮೇಲೆ 420 ಕೇಸ್​ ದಾಖಲಾಗಿದೆ. ದಾವಣಗೆರೆಯ ಬಡಾವಣೆ ಠಾಣೆಯಲ್ಲಿ ಕೆ.ಸಿ.ವೀರೇಂದ್ರ ಅವರ ಮೇಲೆ ಕೇಸ್​ ದಾಖಲಾಗಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ಪ್ರಕರಣ​ ದಾಖಲು ಆಗುತ್ತಿದ್ದಂತೆ ಕೆ.ಸಿ. ವೀರೇಂದ್ರ (ಪಪ್ಪಿ) ತಲೆಮರೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಪಪ್ಪಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಅಲ್ಲದೇ ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ನಿನ್ನೆಯಷ್ಟೇ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆ ಆಗುವ ಸುಳಿವನ್ನೂ ನೀಡಿದ್ದರು.

ಕ್ರಿಕೆಟ್‌ ಪಂದ್ಯದ ವೇಳೆ ಬೆಟ್ಟಿಂಗ್‌ ದಂಧೆ ಆರೋಪ

 

 

ಜಾತ್ಯತೀತ ಜನತಾದಳ ಪಕ್ಷದಿಂದ ಹಿರಿಯೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಪಪ್ಪಿಗೆ ಟಿಕೆಟ್ ಖಚಿತವಾಗಿರಲಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಡೆ ಒಲವು ತೋರಿ ಅರ್ಜಿ ಸಲ್ಲಿಸಿದ್ದರು. ಹಾಗೆಯೇ ಇವರ ಮೇಲೆ ಗೋವಾ ಕ್ಯಾಸಿನೋದಲ್ಲಿ ದಂಧೆ, ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಆರೋಪ. ಈ ಸಂಬಂಧ ದಾವಣಗೆರೆಯ ಕಿರಣ್, ಚೇತನ್, ಸೂರಜ್ ಕುಟ್ಟಿ ಮತ್ತು ಪಪ್ಪಿ ವಿರುದ್ಧ ದೂರು ದಾಖಲಾಗಿತ್ತು. ವೆಂಕಟೇಶ್​ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್​​ ಆಡಿದ್ದರು ಎನ್ನುವ ಆರೋಪವಿದೆ. ಅಕ್ಟೋಬರ್​​ 20ರಂದು ಪಂದ್ಯ ನಡೆದಿದ್ದು, ಕ್ರಿಕೆಟ್ ಬೆಟ್ಟಿಂಗ್ ಆಸೆ ಹುಟ್ಟಿಸಿ ಮೊಬೈಲ್ ಆಪ್ ಮೂಲಕ ಹಣ ಸಂಗ್ರಹವಾಗಿದೆ ಎನ್ನುವುದು ಬಯಲಾಗಿದೆ.

ಕೆ.ಸಿ.ವೀರೇಂದ್ರನ ಬ್ಯಾಂಕ್‌ ಅಂಕೌಂಟ್‌ ಸೀಜ್‌

ಈ ಸಂಬಂಧ ದಾವಣಗೆರೆ ಪೊಲೀಸರು ಕಿರಣ್, ಚೇತಸ್‌ ಎಂಬುವವರನ್ನು​​ ಬಂಧಿಸಿ 7 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದರು. ಇನ್ನು ಪೊಲೀಸರು ಇದೀಗ ಸೂರಜ್ ಕುಟ್ಟಿ, ವೀರೇಂದ್ರ ಪಪ್ಪಿ ಬಂಧನಕ್ಕೆ ಬಲೆ ಬೀಸಿದ್ಧಾರೆ. ವೀರೇಂದ್ರ ಪಪ್ಪಿ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ಧಾರೆ. ಕೆ.ಸಿ.ವೀರೇಂದ್ರ ಬ್ಯಾಂಕ್ ಅಕೌಂಟ್​ ಸೀಜ್ ಆಗಿದ್ದು, ಹಾಗೂ ಚಳ್ಳಕೆರೆ ಕೆನರಾ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್​ಗಳ ಅಕೌಂಟ್ ಕೂಡ ಸೀಜ್​​ ಆಗಿದೆ. ಇನ್ನು ಈ ಬಗ್ಗೆ ಪೊಲೀಸ್ ತನಿಖೆಯಿಂದ ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ. ಅಲ್ಲದೇ ವೀರೇಂದ್ರ ಈಗಾಗಲೇ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಈಗಾಗಲೇ ಲುಕ್​ಔಟ್ ನೋಟಿಸ್ ಜಾರಿ ಆಗಿದೆ. ಯಾವುದೇ ಏರ್ ಫೋರ್ಟ್‌ಗೆ ಬಂದರೂ ತಕ್ಷಣ ಬಂಧಿಸಲು ಸೂಚನೆ ನೀಡಿದೆ. ಸ್ಥಳೀಯ ಕೋರ್ಟ್​ನಲ್ಲಿ ಈಗಾಗಲೇ ಜಾಮೀನು ನಿರಾಕರಣೆ ಮಾಡಲಾಗಿದ್ದು, ವೀರೇಂದ್ರ ಬೇಲ್​ಗಾಗಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾನೆ.

[t4b-ticker]

You May Also Like

More From Author

+ There are no comments

Add yours