ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜ ಜಾಗೃತಿಗೊಳಿಸಿದರು:ಎನ್‌.ರಘುಮೂರ್ತಿ

 

 

 

 

ಚಳ್ಳಕೆರೆ:ಕನಕದಾಸರು ಅವರ ಕೀರ್ತನೆಗಳ ಮುಖಾಂತರ ಸಮಾಜವನ್ನು ಜಾಗೃತಗೊಳಿಸಿದರು ದಾಸ ಶ್ರೇಷ್ಠರಲ್ಲಿ ಶೋಷಿತ ವರ್ಗದವರು ತಮ್ಮ ಕೀರ್ತನೆಗಳ ಮುಖಾಂತರ ದಾಸರಲ್ಲಿ ಶ್ರೇಷ್ಠರಾದಂತವರ ನಾನು ಕುರುಬ ನಮ್ಮ ದೇವರು ಬೀರದೇವರು ನಮ್ಮಜ್ಜ ಕಾಯುವವನು ಕುರಿಗಳ ಮಂದೆಯ ಎನ್ನುತ್ತಿದ್ದವರು ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ ಎಂದರು ಅಂತಿಮವಾಗಿ ಅವನ್ ಒಲಿದ ಮೇಲೆ ದ ಮೇಲೆ ಜಾತಿಯ ಹಂಗ್ಯಾಕೋ ಎಂದರು ಇಂತಹ ಸಾಮಾಜಿಕ ಬದಲಾವಣೆ ತಂದಂತ ಕನಕದಾಸರು ಮೋಹನ ತರಂಗಿಣಿ ರಾಮಧಾನ್ಯ ಚರಿತೆ ಮತ್ತು ನಳ ಚರಿತ್ರೆ ಅಂತಹ ಕಾವ್ಯಗಳನ್ನು ರಚನೆ ಮಾಡಿ ಇದರ ಮುಖಾಂತರ ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದವರು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

 

 

ಕೀರ್ತನೆಗಳು ಸರ್ವಕಾಲಿಕವಾದವು ಜೀವನದ ಪ್ರತಿಯೊಂದು ಹಂತಕ್ಕೂ ಇವುಗಳು ಬೆಸೆದು ಹೋಗಿವೆ. ಕನಕ‌ದಾಸರ  ಆದರ್ಶಗಳನ್ನು ಮತ್ತು ಇವರ ತತ್ವಗಳನ್ನು ಹಿಂದಿನ ಪೀಳಿಗೆಯ ಪರಿಪಾಲಿಸುವುದು ಔಚಿತ್ಯಪೂರ್ಣವಾಗಿದೆ ಎಂದು ಹೇಳಿದರು.

ಸಮಾಜದ ಮುಖಂಡರಾದ ಕರಿಯಣ್ಣ ಉಮೇಶ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours