ಹಿಂದೂ ಪದದ ಬೌದ್ಧಿಕ ಸಂವಾದದ ಬದಲಿಗೆ ವಿವಾದ ಸೃಷ್ಟಿಸಲು ಸರ್ಕಾರ ಯತ್ನ:ಮಾನವ ಬಂಧುತ್ವ ವೇದಿಕೆ

 

 

 

 

ಚಿತ್ರದುರ್ಗ ನ. ೧೦
“ಹಿಂದೂ” ಪದದ ಬಗೆಗಿನ ಹೇಳಿಕೆ ಐತಿಹಾಸಿಕ ಸತ್ಯವೂ, ಸರ್ವಕಾಲಿಕವಾಗಿ ಈ ನೆಲದಲ್ಲಿ ಚರ್ಚೆಯಾಗಬೇಕಾದ ಗಂಭೀರ ವಿಚಾರವೂ ಆಗಿದೆ. ಹಿಂದೂ ಎಂಬ ಪದ ಪಾರಸೀ ಅಥವಾ ಇರಾನಿ ಭಾಷೆಯ ಮೂಲವಾಗಿದ್ದು ಆಶ್ಲೀಲ ಅರ್ಥವನ್ನು ಧ್ವನಿಸುತ್ತದೆ ಎಂದು ಹೇಳಿ, ಇದಕ್ಕೆ ಗ್ರಂಥಗಳ ಆಧಾರವನ್ನು ನೀಡಿದ್ದಾರೆ. ಬೌದ್ಧಿಕ ಸಂವಾದದ ಬದಲಿಗೆ ಇದನ್ನು ವಿವಾದ ಮಾಡಿ ತಮ್ಮ ಸರ್ಕಾರದ ಜನವಿರೋಧಿ ಅನ್ಯಾಯಗಳನ್ನು ಮುಚ್ಚಿ ಹಾಕುವ ಬಿಜೆಪಿಯ ಹುನ್ನಾರವನ್ನು `ಮಾನವ ಬಂಧುತ್ವ ವೇದಿಕೆ’ಯು ಖಂಡಿಸುತ್ತದೆ.

ಚಿತ್ರದುಗÀð ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೂಷ್ಠಿಯಲ್ಲಿ ಮಾತನಾಡಿದ ಮಾನವ ಬಂಧುತ್ವ ವೇದಿಕೆ’ಯ ಸಂಚಾಲಕ ಅಂಜನಪ್ಪ ಬಿಜೆಪಿಯವರಷ್ಟೇ ವಿಚಾರ ಶೂನ್ಯರಾಗಿ ಈ ವಿಚಾರವನ್ನು ದಿಕ್ಕುತಪ್ಪಿಸುತ್ತಿರುವುದಕ್ಕೆ ಕನಿಕರ ಪಡಬೇಕಾಗಿದೆ. ಸತೀಶ ಜಾರಕಿಹೊಳಿ ಅವರು ಏನೋ ದೊಡ್ಡ ಅಪರಾಧ ಮಾಡಿದಂತೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಕೋಮುವಾದಿ ಶಕ್ತಿಗಳು ಯತ್ನಿಸುತ್ತಿವೆ. ಸತೀಶ್ ಜಾರಕಿಹೊಳಿಯವರ ಹೇಳಿಕೆ ಬಗ್ಗೆ ಚರ್ಚೆಯಾಗಲಿ. ಸಂವಾದದ ಮೂಲಕ ಅವರನ್ನು ಎದುರಿಸಲಿ. ಅವರು ಹೇಳಿದ್ದು ಧರ್ಮದ ಬಗ್ಗೆ ಅಲ್ಲ, ಹಿಂದು ಪದದ ಬಗ್ಗೆ. ರಾಮಾಯಣ, ಮಹಾಭಾರತ, ಭಗವದ್ಗೀತೆಗಳಲ್ಲೂ `ಹಿಂದೂ’ ಎಂಬ ಪದವಿಲ್ಲ. ಅದು ಪರ್ಷಿಯನ್ ಸೃಷ್ಟಿ ಎಂಬ ಅವರ ಅಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ ಎಂದಿದ್ದಾರೆ.

ಬಿಜೆಪಿ ನಾಯಕರುಗಳು ಜಾತಿ ತಾರತಮ್ಯ, ಅಸಮಾನತೆಗಳನ್ನು ಭೋದಿಸಿ, ಸಾವಿರಾರು ವರ್ಷಗಳಿಂದ ತಳ ಸಮುದಾಯಗಳನ್ನು ಶೋಷಿಸಿದ, ಮನುಸ್ಮೃತಿಯ ಗುಲಾಮರು ಮತ್ತು ಸರ್ವರಿಗೂ ಸ್ವಾತಂತ್ರö್ಯ, ಸಮಾನತೆ, ಬಂಧುತ್ವ ನೀಡುವ ಸಂವಿಧಾನದ ವಿರೋಧಿಗಳು ಎಂಬುದು ಜಗತ್ತಿಗೆ ತಿಳಿದಿರುವ ವಿಷಯ. ಆದರೆ ಅವರು ಈಗ ನೀಡುತ್ತಿರುವ ವಿವೇಕ ರಹಿತ ಹೇಳಿಕೆಗಳಿಂದ ಅವರ ಬೌದ್ಧಿಕ ದಾರಿದ್ರö್ಯವನ್ನು ಅವರೇ ಪ್ರದರ್ಶಿಸುತ್ತಿದ್ದಾರೆ. ಇಪ್ಪತ್ತೊಂದನೇ ಶತಮಾನದ ಆಧುನಿಕ ದೇಶದಲ್ಲಿ ವೈಜ್ಞಾನಿಕ, ವೈಚಾರಿಕ ಪ್ರಜ್ಞೆಗಳನ್ನು ಕೊಂದು, ಮಧ್ಯಕಾಲೀನ ಯುಗಕ್ಕೆ ಕೊಂಡೊಯ್ಯುವ ಅವರ ಹುನ್ನಾರಗಳು ಬೆತ್ತಲಾಗುತ್ತಿವೆ ಎಂದರು.

ಪಾರಸಿ ಭಾಷೆಯಲ್ಲಿ ‘ಹಿಂದು’ ಎಂಬ ಪದಕ್ಕೆ ಯಾವ ಅರ್ಥ ಇದೆ ಎಂಬುವುದನ್ನು ವಿದ್ವಾಂಸರ ಕರೆ ತಂದು, ಸೂಕ್ತ ಉತ್ತರ ನೀಡಿ ಅಥವಾ ಹಿಂದೂ ಎಂಬ ಪದದ ವ್ಯಾಖ್ಯಾನ ಮಾಡಬಹುದಿತ್ತು. ಬದಲಾಗಿ ಇದನ್ನೇ ತಮಗೆ ಬೇಕಾದಂತೆ ತಿರುಚಿ ದಿಕ್ಕು ತಪ್ಪಿಸುತ್ತಿದ್ದಾರೆ. ಸ್ವಾತಂತ್ರö್ಯ ಭಾರತದ ಪೂರ್ವದಲ್ಲಿ ಯಾವುದಾದರೂ ಭಾಷೆಯಲ್ಲಿ ಹಿಂದೂ ಶಬ್ಧ ಇತ್ತೇ ಎಂದು ಆಧಾರ ಸಹಿತ ಸ್ಪಷ್ಟಪಡಿಸಿದ್ದರೆ, ಬಿಜೆಪಿಯವರು ನಾಗರೀಕ ಸಮಾಜದಲ್ಲಿ ಇದ್ದಾರೆ ಎಂದು ಭಾವಿಸಬಹುದಿತ್ತು.

 

 

ಅಂಬೇಡ್ಕರ್ ಮತ್ತು ಪರಿಯಾರ್ ಅವರು ಎತ್ತಿರುವ ಪ್ರಶ್ನೆಗಳನ್ನೇ ಈ ಸಂದರ್ಭದಲ್ಲಿ ಸತೀಶ ಜಾರಕಿಹೊಳಿಯವರು ಪುನರುಚ್ಚರಿಸಿದ್ದಾರೆ.. ಶತಮಾನಗಳಿಂದಲೂ ದಾರ್ಶನಿಕರು, ಸಂತರು, ಸಾಹಿತಿಗಳು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಾಮರ್ಥ್ಯವಿಲ್ಲದ ಮನುವಾದಿಗಳು ಕುತಂತ್ರದಿAದ, ವಿಚಾರದ ಹಿಂದಿನ ಸತ್ಯವನ್ನೇ ನಾಶ ಮಾಡಲು ಯತ್ನಿಸುತ್ತಾ ಬಂದಿರುವುದೇ ಈ ನೆಲದ ಇತಿಹಾಸ. ಈ ಕಾಲಕ್ಕೂ ಸಾಹಿತಿಗಳು, ಸಂಶೋಧಕರು, ಚಿಂತಕರು, ಬರಹಗಾರರು, ಪ್ರಗತಿಪರರು, ಬುದ್ಧಿಜೀವಿಗಳು ಮತ್ತು ಸಾಮಾಜಿಕ ಹೋರಾಟಗಾರರು ಈ ವಿಷಯದ ಬಗ್ಗೆ ಎಲ್ಲಿಯೂ ಕೂಡ ವಿರೋಧ ವ್ಯಕ್ತಪಡಿಸಿರುವುದಿಲ್ಲ ಎಂದು ಅಂಜಿನಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕ ಪಿ.ಬಸವರಾಜ ಬಚ್ಚಬೋರನಹಟ್ಟಿ ಎಸ್.ರಾಜಕುಮಾರ್ ಜಿಲ್ಲಾಧ್ಯಕ್ಷರು, ಕಾಡುಗೊಲ್ಲರ ಸಂಘ, ಪ್ರಕಾಶ್‌ರಾಮನಾಯ್ಕ, ಜಿಲ್ಲಾಧ್ಯಕ್ಷರು, ಬಂಜಾರ ವಿದ್ಯಾರ್ಥಿ ಸಂಘ, ಹಾಗೂ ಇತರರು ಹಾಜರಿದ್ದರು.

 

 

[t4b-ticker]

You May Also Like

More From Author

+ There are no comments

Add yours