ಅಲ್ಪಸಂಖ್ಯಾತರ ವಸತಿ ಶಾಲೆಗೆ ಸ್ಥಳ ಮೀಸಲಿಡಲು ಸೂಚನೆ

 

 

 

 

ಚಳ್ಳಕೆರೆ: ಕುರುಡಿಹಳ್ಳಿ ಗ್ರಾಮದ ಸರ್ವೆ ನಂಬರ್ ೨೪೨ರಲ್ಲಿ 8 ಎಕರೆ ಪ್ರದೇಶವನ್ನು ಪ್ರದೇಶವನ್ನು ಅಲ್ಪಸಂಖ್ಯಾತರ ವಸತಿ ಶಾಲೆಗೆ ಮೀಸಲಿಟ್ಟಿದ್ದು ಗ್ರಾಮಸ್ಥರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದಕ್ಕೆ ಪರ್ಯಾಯವಾಗಿ ಗ್ರಾಮಕ್ಕೆ ಹೊಂದಿಕೊಂಡಿರುವಂತ ಸರ್ಕಾರಿ ಸರ್ವೇ ನಂಬರನ್ನು ಗುರುತಿಸಿ ಇಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆಗೆ ಜಮೀನನ್ನು ಪ್ರಸ್ತಾಪಿಸಲು ಕ್ರಮ ಕೈಗೊಳ್ಳುವಂತೆ ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಅವರಿಗೆ ಕೇಂದ್ರ ಸರ್ಕಾರದ ಮಂತ್ರಿಗಳಾದ ಎ. ನಾರಾಯಣಸ್ವಾಮಿಯವರು ಸೂಚಿಸಿದರು.

 

 

ಈ ಸರ್ವೇ ನಂಬರ್ ನಲ್ಲಿ ಈಗಾಗಲೇ 8 ಎಕರೆ ಪ್ರದೇಶವನ್ನು  ಜಿಲ್ಲಾಧಿಕಾರಿಗಳು ಮೀಸಲಿರಿಸಿ ಆದೇಶ ಮಾಡಿದ್ದು ಗ್ರಾಮಸ್ಥರುಗಳು ಜಾನುವಾರಗಳು ಮತ್ತು ಮತ್ತಿತರ ಯೋಗಕ್ಕೆ ಜಾಗವಿಲ್ಲವೆಂದು ಮೊನ್ನೆಯೂ ಕೂಡ ಪ್ರತಿರೋಧ ಒಡ್ಡಿದ್ದು ಇಂದು ಕೂಡ ಕೇಂದ್ರ ಸಚಿವರಿಗೆ ಮನವಿ ಮಾಡಿ ಮುಷ್ಕರ ಕೊಡುವುದಾಗಿ ಕೋರಿದರ ಮೇರೆಗೆ ಇಂದು ಸಚಿವರು ಚಳ್ಳಕೆರೆ ತಹಶೀಲ್ದಾರ್  ಅವರೊಂದಿಗೆ ಸಳಕ್ಕರ  ಭೇಟಿ ನೀಡಿ ನಿರ್ದೇಶನ ನೀಡಿದರು.

ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮತ್ತಿತರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours