ಆನೆಬಾಗಿಲು ಯುವಕರ ಸಂಘದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ

 

 

 

 

ಚಿತ್ರದುರ್ಗ: ಆನೆಬಾಗಿಲು ಯುವಕರ ಸಂಘದ ವತಿಯಿಂದ ಹದಿನೆಂಟನೆ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆನೆಬಾಗಿಲು ಸಮೀಪ ಮಂಗಳವಾರ ಆಚರಿಸಲಾಯಿತು.
ಆನೆಬಾಗಿಲು ಯುವಕರ ಸಂಘದ ಗೌರವಾಧ್ಯಕ್ಷ ಲೀಲಾಧರ್ ಠಾಕೂರ್ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ ಕಳೆದ ಹದಿನೆಂಟು ವರ್ಷಗಳಿಂದಲೂ ಆನೆಬಾಗಿಲು ಯುವಕರ ಸಂಘ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದೆ. ಕೇವಲ ನವೆಂಬರ್ ತಿಂಗಳಿಗಷ್ಟೆ ಕನ್ನಡ ರಾಜ್ಯೋತ್ಸವ ಸೀಮಿತವಾಗುವ ಬದಲು ಪ್ರತಿಯೊಬ್ಬರ ಜೀವನದಲ್ಲಿ ಕನ್ನಡ ನಿತ್ಯೋತ್ಸವವಾಗಿ ಮೊಳಗಬೇಕು. ಆಗ ಮಾತ್ರ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ ಪ್ರಖ್ಯಾತ ಜ್ಯುವೆಲ್ಲರ್ಸ್ ಮಾಲೀಕರಾದ ಕೇಶವಮೂರ್ತಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ ಕರ್ನಾಟಕದ ಏಕೀರಕಣಕ್ಕಾಗಿ ಹೋರಾಡಿ ಮಡಿದ ಅನೇಕ ಹಿರಿಯರನ್ನು ಕನ್ನಡ ರಾಜ್ಯೋತ್ಸವದಂದು ಸ್ಮರಿಸಿಕೊಳ್ಳಬೇಕು. ಅದರಲ್ಲಿ ಬಹು ಪ್ರಮುಖರಾದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪನವರನ್ನು ನೆನಪಿಸಿಕೊಂಡರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಆನೆಬಾಗಿಲು ಯುವಕರ ಸಂಘದ ಅಧ್ಯಕ್ಷ ಎಂ.ಶಂಕರಮೂರ್ತಿ ವಿಶ್ವಕರ್ಮ, ಗೋವರ್ಧನಾಚಾರ್, ರಾಜೇಂದ್ರಚಾರ್, ನಾಗರಾಜ್, ಸ್ವಾಮಿನಾಥ್, ವೇದಪ್ರಕಾಶ್, ರಮೇಶ್‍ಆಚಾರ್, ಜೆ.ನಟರಾಜ್, ಶ್ರೀನಿವಾಸ ಆಚಾರ್, ಚಿದಾನಂದ ಆಚಾರ್, ಮಂಜುನಾಥ್ ಪಿ. ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.

 

 

[t4b-ticker]

You May Also Like

More From Author

+ There are no comments

Add yours