ವಿದ್ಯಾರ್ಥಿ ಮೊಬೈಲ್ ವಾಪಸ್ ನೀಡಲು ಹಣಕ್ಕೆ ಬೇಡಿಕೆ ಇಟ್ಟ ಪೋಲಿಸ್ ಲೋಕಯಕ್ತ ಬಲೆಗೆ

 

 

 

 

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಕಳೆದುಕೊಂಡಿದ್ದ ತನ್ನ ಮೊಬೈಲ್ ಪತ್ತೆ ಮಾಡಿ ಕೊಡಲು 5 ಸಾವಿರಕ್ಕೆ ಲಂಚ ಬೇಡಿಕೆ ಇಟ್ಟಿದ್ದ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸ್ ಈಗ ಜೈಲು ಕಂಬಿ ಹಿಂದೆ ಇದ್ದಾನೆ.

 

 

ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಉಪಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಹರೀಶ್ ತಂದೆ ಬಸವರಾಜಪ್ಪ ಅವರು ವಿದ್ಯಾರ್ಥಿನಿಯಿಂದ 2 ಸಾವಿರ ರೂ. ಲಂಚ ಸ್ಪೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿಯ ರೈತ ಕುಟುಂಬ ವಿದ್ಯಾರ್ಥಿನಿ ಕೆ.ಸಿ.ಬೃಂದಾ ತಂದೆ ಚಾಮರಾಜ ಇವರು ಜವನಗೊಂಡನಹಳ್ಳಿಯ ಪಂಕ್ಚರ್ ಅಂಗಡಿ ಸಮೀಪ ಮೊಬೈಲ್ ಕಳೆದುಕೊಂಡಿದ್ದು ಈ ಕುರಿತು ದೂರು ನೀಡಲು ಜವನಗೊಂಡನಹಳ್ಳಿಯ ಉಪ ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಸಂದರ್ಭದಲ್ಲಿ ಆ ಠಾಣೆಯ ಪೊಲೀಸ್ ಹರೀಶ್ ದೂರು ನೀಡುವುದು ಬೇಡ, ಮೊಬೈಲ್ ಪತ್ತೆ ಮಾಡಿಕೊಡುತ್ತೇವೆ. ಇದಕ್ಕಾಗಿ 5 ಸಾವಿರ ರೂ.ಗಳನ್ನು ಕೊಡಬೇಕು, ನೀವು ದೂರು ನೀಡುವುದಾದರೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಎನ್ನುವ ಸಲಹೆ ನೀಡಿರುತ್ತಾರೆ. ಅಂದರಂತೆ ಅ.25ರಂದು ಹಿರಿಯೂರು ಠಾಣೆಯಲ್ಲಿ ದೂರು ದಾಖಲಿಸಲಾಗುತ್ತದೆ. ಇದಾದ ನಂತರ ಪೊಲೀಸ್ ಕಾನ್ಸ್‌ಟೇಬಲ್ ಹರೀಶ್ ಗೆ 3 ಸಾವಿರ ರೂ.ಗಳನ್ನು ನೀಡಿ ಮೊಬೈಲ್ ಪತ್ತೆ ಮಾಡಿಕೊಡುವಂತೆ ಮನವಿ ಮಾಡುತ್ತಾರೆ. ಉಳಿದ 2 ಸಾವಿರ ರೂ.ಗಳನ್ನು ಮೊಬೈಲ್ ಕೊಡುವ ಸಂದರ್ಭದಲ್ಲಿ ನೀಡುವುದಾಗಿ ಸಂತ್ರಸ್ತ ವಿದ್ಯಾರ್ಥಿನಿ ಮತ್ತು ಅವಳ ತಂದೆ ಪೊಲೀಸ್ ಕಾನ್ಸ್‌ಟೇಬಲ್ ಹರೀಶ್ ಗೆ ತಿಳಿಸುತ್ತಾರೆ. ಮೊಬೈಲ್ ವಾಪಸ್ ಕೊಡುವ ಸಂದರ್ಭದಲ್ಲಿ ವಿದ್ಯಾರ್ಥಿನಿ ಬೃಂದಾ 2 ಸಾವಿರ ರೂ. ಲಂಚ ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕಿ ಬಿ.ಕೆ.ಲತಾ, ಡಿವೈಎಸ್ಪಿ ಮಂಜುನಾಥ್, ನಿರೀಕ್ಷಕಿ ಶಿಲ್ಪಾ, ಶಿವಮೊಗ್ಗ ಡಿವೈಎಸ್ಪಿ ಮೃತ್ಯುಂಜಯ ಇತರೆ ಪೊಲೀಸ್ ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಪೊಲೀಸ್ ಕಾನ್ಸ್‌ಟೇಬಲ್ ಹರೀಶ್ ನನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ವಾಸುದೇವರಾಮ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours