ಪತ್ರಿಕಾ ವಿತರಕರ ಅಭಿವೃದ್ದಿಗೆ ಸರ್ಕಾರ ವಿಶೇಷ ಗಮನ ಹರಿಸಲಿ.

 

 

 

 

ಚಿತ್ರದುರ್ಗ: ಜಿಲ್ಲಾ ಪತ್ರಿಕಾ ವಿತರಕರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಇಂದು “ಪತ್ರಿಕಾ ವಿತರಕರ ದಿನಾಚರಣೆಯನ್ನು ಆಚರಿಸಲಾಯಿತು.
ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಕರ ಸಂಘದ ಅಧ್ಯಕ್ಷರಾಗದ ಎಸ್. ತಿಪ್ಪೇಸ್ವಾಮಿ ಮಾತಾನಾಡಿ ಪತ್ರಿಕಾ ವಿತರಕರು ,ಚಳಿ,ಮಳೆ,ಹಬ್ಬ ಹರಿದಿನ ಎನ್ನದೆ ಪ್ರತಿದಿನ ಕಾರ್ಯ ನಿರ್ವಹಿಸುತ್ತಾರೆ. ಆದರೆ ಅವರಿಗೆ ಸೂಕ್ತ ಸೌಲಭ್ಯಗಳು ಲಭಿಸಿಲ್ಲ, ಇನ್ನಾದರು ಅವರ ಕ್ಷೇಮದ ಬಗ್ಗೆ ಸರ್ಕಾರ ಗಮನ ಹರಿಸಲಿ.ಕೋವಿಡ್ ಕಾಲದಲ್ಲಿ ವಿತರಕರು ಸೋಂಕು ಲೆಕ್ಕಿಸದೆ ಕರೋನ ವಾರಿಯರ್ಸ್‌ ತರ ಕೆಲಸ ಮಾಡಿದ್ದಾರೆ. ಸರ್ಕಾರ ನಮ್ಮ ಕಡೆ ತಿರುಗಿ ನೋಡಲಿಲ್ಲ.ಇನ್ನಾದರು ವಿತರಕರ ಕಡೆ ಗಮನ ಹರಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲಕ್ಷಣ್ ಮಾತನಾಡಿ ನಮ್ಮ ವಿತರಕನ್ನು ಸರ್ಕಾರ ಕಡೆಗಣಿಸಿದ್ದು ದುರದೃಷ್ಟಕರ ಎಂದರು. ಪತ್ರಿಕೆಯ ಜಿಲ್ಲಾ ಕಾರ್ಯ‌ನಿರ್ವಾಕರಾದ ವಿಜಯ ಕರ್ನಾಟಕದ ಪ್ರವೀಣ್, ಉದಯವಾಣಿ ದರ್ಶನ್ , ಪ್ರಜಾವಾಣಿ ನಂದಗೋಪಾಲ್, ಪ್ರಜಾವಾಣಿ ಪ್ರಹ್ಲಾದ, ವಿತರಕರಾದ
ನಾಗರಾಜ್ ಶೆಟ್ಟಿ, ಪ್ರಶಾಂತ್, ಕರಿಬಸಪ್ಪ, ಹನೀಫ್ ,ತಿಪ್ಪೇಸ್ವಾಮಿ.ಜೆ., ಗಂಗಾಧರ್,
ಕುಬೇಂದ್ರಪ್ಪ, ತಿಪ್ಪೇಸ್ವಾಮಿ, ಪಿ.ಮೈಲಾರಿ.
ಮಂಜುನಾಥ,
ಇತರರು ಭಾಗವಹಿಸಿದ್ದರು

 

 

[t4b-ticker]

You May Also Like

More From Author

+ There are no comments

Add yours