ಶ್ರೀಕೃಷ್ಣನಿಗೆ ಮತ್ತು ಮ್ಯಾಸ ಬೇಡ ಕುಲದ ಬುಡಕಟ್ಟು ಸಂಸ್ಕೃತಿಗೂ ಅವಿನಭಾವ ಸಂಬಂಧ:ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:ದ್ವಾಪರಯುಗದ ಶ್ರೀ ಕೃಷ್ಣನಿಗೆ ಮತ್ತು ಮ್ಯಾಸ ಬೇಡ ಕುಲದ ಬುಡಕಟ್ಟು ಸಂಸ್ಕೃತಿಗೂ ಅವಿನ ಭಾವ ಸಂಬಂಧವಿದೆ ದ್ವಾಪರ ಯುಗದಲ್ಲಿ ಜಾನುವಾರುಗಳು ಅದರಲ್ಲೂ ಗೋವುಗಳಿಗೆ ಅಗ್ರಸ್ಥಾನವಿದೆ ಮ್ಯಾಸ ಕುಲದ ಬುಡಕಟ್ಟು ಸಂಸ್ಕೃತಿಯಲ್ಲಿಯೂ ಕೂಡ ದೇವರ ಎತ್ತುಗಳಿಗೆ ವಿಶೇಷ ಸ್ಥಾನವಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಇಂದು ನನ್ನಿಹಾಳ ಗ್ರಾಮದ ವರ್ವಿ ನರಹಟ್ಟಿ ಗದ್ದೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಟ್ಟೆ ಮನೆ ಯವರು ಹಮ್ಮಿಕೊಂಡಿದ್ದಂತಹ ಗೋ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ  ಭಗವಾನ್ ಶ್ರೀ ಕೃಷ್ಣನ ಆದರ್ಶಗಳು ಮತ್ತು ಆಚರಣೆಗಳನ್ನು ಬುಡಕಟ್ಟು ಸಂಸ್ಕೃತಿಯಲ್ಲಿ ಪ್ರತಿಬಿಂಬಿಸಲಾಗಿದೆ ಹಾಗಾಗಿ ದೀಪಾವಳಿಯ ದಿನ ಬದುಕಿನ ಅಂಧಕಾರವನ್ನು ತೊರೆದು ಬೆಳಕಿನ ಕಡೆ ಮುಖ ಮಾಡುವಂತ ಈ ಒಂದು ಆಚರಣೆ ಇಲ್ಲಿ ಬಿಟ್ಟರೆ ದಕ್ಷಿಣ ಭಾರತದಲ್ಲೇ ಇಲ್ಲ ಹಾಗಾಗಿ ಈ ದೈವಿಕ ಪರಂಪರೆ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಉಳಿಸಿಕೊಂಡು ಹೋಗುವಂತ ಜವಾಬ್ದಾರಿ ಇಂದಿನ ಪೀಳಿಗೆಗೆ ಅಗತ್ಯವಾಗಿದೆ.

 

 

ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಮನೆ ಮಾಡಲು ಕಾರಣವಾಗಿವೆ. ಇಂತಹ ಆಚರಣೆಗಳಿಂದ ದೇಹ ಮತ್ತು ಮನಸ್ಸು ಶುದ್ಧಿಯಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ ದುರಾಲೋಚನೆಗಳು ದೂರವಾಗುತ್ತವೆ ವಿಶ್ವಶಾಂತಿಗೆ ಎಲ್ಲಾ ಆಚರಣೆಗಳು ಪೂರಕವಾಗಿವೆ ಬುಡಕಟ್ಟು ಸಂಸ್ಕೃತಿಯಿಂದ ಸಂಸ್ಕೃತಿಕ ಶ್ರೀಮಂತಿಕೆ ಹೆಚ್ಚುತ್ತದೆ. ಪರಂಪರೆಯನ್ನು ಹಪ್ಪಿಕೊಂಡು ಹೋಗುವ ಅಗತ್ಯವಿದೆ ಯುವ ಪೀಳಿಗೆಯ ಕೂಡ ಆಚರಣೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಮಾಜಿ ಮಂಡಲ ಪಂಚಾಯತಿ ಅಧ್ಯಕ್ಷ ದೊರೆಬಯ್ಯಣ್ಣ  ಮಾತನಾಡಿ ಈ ಆಚರಣೆಯಿಂದ ಜನಜಾನುವಾರುಗಳಿಗೆ ಯಾವುದೇ ಮಾರಕವಾದ ಕಾಯಿಲೆಗಳು ಮತ್ತು ರೋಗ ರಜಿನೆಗಳು ಸಂಭವಿಸುವುದಿಲ್ಲ . ನಿಮ್ಮ ನಂಬಿಕೆ ಜನರಲ್ಲಿದೆ ಪೂರ್ವಜರು ನಡೆಸಿಕೊಂಡು ಬಂದಂತೆ ಪರಂಪರೆಯನ್ನು ನಾವು ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿಯ ಇದರಿಂದ ಮನೆ ಮಾಡಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್ ಬಿಜೆಪಿ ಮುಖಂಡರಾದ ಜಯರಾಮ್ ಮಂಜುನಾಥ್ ,ದೊರೆ ನಾಗರಾಜ್ ಮತ್ತು ಬುಡಕಟ್ಟು ಸಮುದಾಯದ ಎಲ್ಲ ಭಕ್ತಾದಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours