ಚಳ್ಳಕೆರೆಯಲ್ಲಿ ರಾಹುಲ್ ಪಾದಯಾತ್ರೆಗೆ ಹರಿದು ಬಂದ ಜನಸಾಗರ

 

 

 

 

ಚಳ್ಳಕೆರೆ:(challakere) ರಾಹುಲ್‌ಗಾಂಧಿ( Rahul Gandhi  )ಅವರ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ 11ನೇ ದಿನಕ್ಕೆ ಕಾಲಿಟ್ಟಿದ್ದು  ಇಂದು ಪಾದಯಾತ್ರೆ  ಜನಸಾಗರದ  ಜೊತೆ  ಚಳ್ಳಕೆರೆಯಿಂದ ಬಳ್ಳಾರಿಯತ್ತ  ಹೊರಟಿತು.

ಬೆಳಿಗ್ಗೆ ರಾಹುಲ್‌ಗಾಂಧಿ ಅವರು ಎಲ್ಲರ ಜೊತೆಯಲ್ಲಿ  ಉತ್ಸಾಹ ಮತ್ತು ಭರ್ಜರಿ ಹುರುಪಿನಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ರಾಹುಲ್ ಪಾದಯಾತ್ರೆ ಆರಂಭಕ್ಕೆ ಚಳ್ಳಕೆರೆ ಗಂಧರ್ವ ಹೊಟೇಲ್ ಬಳಿ  ಜನ ಸಾಗರವೇ ಹರಿದು ಬಂದಿತ್ತು. ಪಾದಯಾತ್ರೆ ಸಾಗಿದ ರಸ್ತೆಯ ಎರಡು ಬದಿಯಲ್ಲಿ ಜನ ಕಿಕ್ಕಿರಿದು ನಿಂತಿದ್ದರು. ಜನ ರಾಹುಲ್‌ಗಾಂಧಿ ಅವರನ್ನು ನೋಡಲು ಮುಗಿಬಿದ್ದಿದ್ದು, ಕೆಲವೆಡೆ ಜನ ಅವರಿಗೆ ಕೈಕುಲುಕಿ, ಸೆಲ್ಫಿ  ತೆಗೆದುಕೊಂಡು   ಸಂಭ್ರಮಿಸಿದವರ ಸಂತೋಷಕ್ಕೆ ಪಾರವಿರಲಿಲ್ಲ.

 

 

ಪಾದಯಾತ್ರೆಯಲ್ಲಿ ವಿದ್ಯಾರ್ಥಿಗಳೂ ಸಹ ರಾಹುಲ್ ಜತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಇವರಿಗೆಲ್ಲ ರಾಹುಲ್ ಅವರು ಚಾಕ್‌ಲೇಟ್ ನೀಡಿ ಖುಷಿ ಪಟ್ಟರು. ಬಾಲಕಿಯೊಬ್ಬಳು ಪಾದಯಾತ್ರೆ ಸಂದರ್ಭದಲ್ಲಿ ಭರತನಾಟ್ಯದ ವೇಷ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮಾರ್ಗ ಮಧ್ಯದಲ್ಲಿ ರಾಹುಲ್‌ಗಾಂಧಿ ಅವರು ಚಿಕ್ಕಮ್ಮನಹಳ್ಳಿ ಬಳಿಯ ಒಂಟಿ ಮನೆಯೊಂದಕ್ಕೆ ತೆರಳಿ ಅಲ್ಲೇ ಟೀ ಕುಡಿದು ಮನೆಯ ಬಳಿ ಇದ್ದ ಗೂಡಂಗಡಿ ಮಾಲೀಕನ ಜೊತೆ ಮಾತನಾಡಿ ಆತನ ಕಷ್ಟ-ಸುಖಗಳಿಗೆ ಕಿವಿಯಾದರು.
ಯಾತ್ರೆಯಲ್ಲಿ ಕೆಲವರು ಪುನೀತ್‌ರಾಜ್‌ಕುಮಾರ್ ಅವರ ಭಾವಚಿತ್ರ ಹಿಡಿದು ಸಾಗಿದರು. ಪುನೀತ್ ಮಾದರಿಯಲ್ಲಿ  ಅಂಗಾಂಗ ದಾನಕ್ಕೂ ಯಾತ್ರಿಗಳು ಪ್ರೇರಣೆ ನೀಡಿದ್ದು, ಅದರಂತೆ ಯಾತ್ರೆಯಲ್ಲಿ ಭಾಗವಹಿಸಿದ್ದ 33 ಕಾರ್ಯಕರ್ತರು ನೇತ್ರದಾನ ಪತ್ರಗಳಿಗೆ ಸಹಿ ಹಾಕಿದ್ದು, ಯಾತ್ರೆಯ ಹೈಲೈಟ್ ಆಗಿತ್ತು. ಜನಸಾಗರದ ನಡುವೆ ರಾಹುಲ್ ಜೋಷ್ ಮತ್ತಷ್ಟು ಹೆಚ್ಚಿಸಿತು. (Rahul Gandhi )

ರಾಹುಲ್ ಗಾಂಧಿಯವರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಹೆಚ್ ಆಂಜನೇಯ, ಮಾಜಿ ಸಚಿವ ಸುಧಾಕರ್, ಸವಿತಾ ರಘು, ರಘು,  ಮುಖಂಡರಾದ ರಣದೀಪ್ ಸರ್ಜೆವಾಲ,ಸಲೀಂ ಅಹ್ಮದ್ ಹಾಗೂ ಚಳ್ಳಕೆರೆ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours