ರೈತರಿಗೆ ಜಿಎಸ್ಟಿ ಟ್ಯಾಕ್ಸ್ ಹಾಕಿದ ಏಕೈಕ ಸರ್ಕಾರ ಬಿಜೆಪಿ: ರಾಹುಲ್ ಗಾಂಧಿ ಕಿಡಿ

 

 

 

 

ಚಳ್ಳಕೆರೆ:ಭಾರತ್ ಜೋಡೋ ಯಾತ್ರೆಯಲ್ಲಿ  ಕಾಂಗ್ರೆಸ್ ಮುಖಂಡ  ರಾಹುಲ್ ಗಾಂಧಿ ಮಾತನಾಡಿ  ನಾವು ಕನ್ಯಾಕುಮಾರಿಯಿಂದ ಚಳ್ಳಕೆರೆವರೆಗೆ ನಡೆದುಕೊಂಡು ಬಂದಿದ್ದು  ದಾರಿಯುದ್ದಕ್ಕೂ  ಜನರು ಸಾಕಷ್ಟು ಪ್ರೀತಿ ತೋರುತ್ತಿದ್ದಾರೆ .ಪ್ರತಿಯೊಬ್ಬ  ಜನರು ಸಹ  ಜಾತಿ ಭೇದ ಮರೆತು ನನ್ನ ಜೊತೆ ಹೆಜ್ಜೆ ಹಾಕುತ್ತಿದ್ದಾರೆ.

ನಾವು ನಡೆಯುವಾಗ ಮಳೆ, ಗಾಳಿ, ಬಿಸಿಲಿಗೆ ಎಲ್ಲೂ  ತಗ್ಗದೆ  ನಡೆದುಕೊಂಡು  ಬರುತ್ತಿದ್ದು , ಜನರ ಪ್ರೀತಿಗೆ ಇದ್ಯಾವುದೂ ಕಾಣಲಿಲ್ಲ. ಜೀವನದಲ್ಲಿ ನಿತ್ಯ ಎಡವುತ್ತೇವೆ.

ಯಾತ್ರೆಯಲ್ಲಿ ಹಲವರು ನಡೆಯುವಾಗ ಬಿದ್ದರೆ ತಕ್ಷಣ ಯಾತ್ರೆಯಲ್ಲಿ ಜೊತೆಗಿರುವವರು ಎಬ್ಬಿಸಿ ನೀರು ಕೊಟ್ಟು ಸಂತೈಸಿ ಪ್ರೀತಿ ನೀಡುತ್ತಾರೆ. ಇದರಿಂದ ಅವನಿಗೂ ಸಹ ವಿಶ್ವಾಸ ಬರುತ್ತದೆ.

ಭಾರತ ದೇಶದಲ್ಲಿ ಒಬ್ಬ ರೈತ ಬಿದ್ದರೆ ಇಡೀ ಭಾರತ ರಕ್ಷಣೆ ಕೊಡುತ್ತದೆ. ತಂದೆ- ತಾಯಿಗೆ ಭರವಸೆ ಸಿಗುತ್ತದೆ. ನೀವು ಭಾರತ್ ಜೋಡೋ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರು ಭಾಗಿಯಾಗುತ್ತಿದ್ದಾರೆ. ಯಾರು ಎದುರುತ್ತಿಲ್ಲ. ನೀವು ಈ‌ ಯಾತ್ರೆಯಲ್ಲಿ ಎಲ್ಲಾರ ಜೇಬಲ್ಲಿ ಹಣ ಒಡೆದರೆ ಹೇಗೆ ಅನಿಸುತ್ತದೆ. ಒಂದು ಜಾತಿ ಇನ್ನೊಂದು ಜಾತಿ ಒಡೆದರೆ ಹೇಗೆ ಅನಿಸುತ್ತದೆ. ಆ ಕೆಲಸ ಬಿಜೆಪಿ ಮಾಡುತ್ತಿದೆ.

ಕರ್ನಾಟಕ ರಾಜ್ಯದ ಮಂತ್ರಿಗಳು ಹೇಳುತ್ತಾರೆ.2500 ಕೋಟೊ ಬೇಕು ಸಿಎಂ ಆಗಲು ಎನ್ನುತ್ತಾರೆ ಎಂದರೆ ರಾಜ್ಯದ ಪರಿಸ್ಥಿತಿ ಎಲ್ಲಿಗೆ ಬಂದಿದೆ ನೋಡಿ,

ಹೆಣ್ಣು ಮಕ್ಕಳು ಹುಡುವ ಬಟ್ಟೆಯಿಂದ ಅತ್ಯಾಚಾರ ಅಗುತ್ತದೆ ಎಂದು ಹೇಳುತ್ತಿದ್ದು ದೇಶದ ಹೆಣ್ಣು ಮಕ್ಕಳಿಗೆ ಮಾಡುವ ಅವಮಾನ ಆಗಿದೆ. ಒಬ್ಬ ಮನುಷ್ಯ ಒಂದು ಕಲ್ಲು ಬಂಡೆಯ ಮಧ್ಯೆ ತೂರುವ ಕಷ್ಟಕ್ಕೆ ಬಿಜೆಪಿ ತಂದು ಬಿಟ್ಟಿದೆ.

 

 

ನಾನು ರೈತರಿಗೆ ಗೊಬ್ಬರ, ಬೀಜಕ್ಕೆ ಎಷ್ಟು ಖರ್ಚು ಮಾಡುತ್ತಾರೆ. ನಾನು ಒಬ್ಬ ರೈತನು ನಾನ ಲಾಭ ಸಿಗುತ್ತಿಲ್ಲ. ಸರ್ಕಾರದಿಂದ ಯಾವುದೇ ಸೌಲಭ್ಯ ಇಲ್ಲ.

ಕೃಷಿಕರು ಸರ್ಕಾರದ ಸಹಾಯದಿಂದ ಹಣ ಮಾಡಲು ಎಂದು ಸಾಧ್ಯವಿಲ್ಲ. ಮೊಟ್ಟ ಮೊದಲ ಬಾರಿಗೆ ಒಬ್ಬ ರೈತ ಜಿಎಸ್ ಟಿ ಕೊಡುತ್ತಿದ್ದಾನೆ. ರೈತ ಉಪಕರಣ ಮೇಲೆ ಸಹ ಜಿಎಸ್ಟಿ ಕಟ್ಟುತ್ತಾರೆ. ಕರ್ನಾಟಕ 2023 ರಲ್ಲಿ ಬರುವ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಬೇಕು.

ಬಿಜೆಪಿ ಪಕ್ಷ  ರೈತರಿಗೆ, ಕೂಲಿಕಾರ್ಮಿಕರಿಗೆ, ಬೀದಿ ವ್ಯಾಪರಿಗಳಿಗೆ, ಸಣ್ಣ ವ್ಯಾಪರಿಗಳಿಗೆ ಸಹಾಯ ಮಾಡದೇ ಶ್ರೀಮಂತರಿಗೆ ಸಹಾಯ ಮಾಡುತ್ತಿದೆ.

ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡುರು,  ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ರಾಜೀನಾಮೆ ಏಕೆ ಕೊಟ್ಟರು ಎಂದು ಪ್ರಶ್ನಿಸಿದರಿ. ಬಿಜೆಪಿ ಶಾಸಕರೆ ಭ್ರಷ್ಟಾಚಾರ ಸರ್ಕಾರ ಇದೆ ಎಂದು ಹೇಳುತ್ತಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ಪ್ರತಿಯೊಬ್ಬರಿಂದ  ಹಣ ಲೂಟಿ ಮಾಡುತ್ತಿದೆ. ಪಿಎಸ್ ಐ 80 ಲಕ್ಷ, ಸಣ್ಣಪುಟ್ಟ ಕೆಲಸಕ್ಕೆ 5 ಲಕ್ಷ ತೆಗೆದುಕೊಳ್ಳತ್ತಿದ್ದಾತೆ. ಇನ್ನು 2.50 ಲಕ್ಷ ಉದ್ಯೋಗ ಖಾಲಿ ಇದ್ದು ಯುವಕರು ಉದ್ಯೋಗಕ್ಕೆ ಪರದಾಡುತ್ತಿದ್ದಾರೆ.

ಇಂತಹ ಎಲ್ಲಾ ಸಮಸ್ಯೆಗಳಿಗೆ ಬಿಜೆಪಿ ನೇರ ಹೊಣೆ ಎಂದು ಕುಟಿಕಿದರು.

[t4b-ticker]

You May Also Like

More From Author

+ There are no comments

Add yours