ಮೈಸೂರು ದಸರಾದ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ಚಿತ್ರದುರ್ಗಕ್ಕೆ ಮೂರನೇ ಸ್ಥಾನ

 

 

 

 

ಮೈಸೂರು:  ಮೈಸೂರು ದಸರಾ ಮಹೋತ್ಸವ 2022ರ ಅಂಗವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ ವಿವಿಧ ಸ್ತಬ್ಧ  ಚಿತ್ರಗಳಲ್ಲಿ ಕ್ರಮವಾಗಿ  ಮೊದಲನೇ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಈ ಕೆಳಕಂಡ ಜಿಲ್ಲೆಗಳು ಪಡೆದಿವೆ.

ಮೊದಲ ಬಹುಮಾನ ಪಡೆದ ಕೊಡಗು

ಎರಡನೇ ಬಹುಮಾನ ಪಡೆದ ಮೈಸೂರು

 

 

ಮೂರನೇ ಬಹುಮಾನ ಪಡೆದ ಚಿತ್ರದುರ್ಗ

ಮೈಸೂರು ದಸರಾ ಉತ್ಸವ 2022ರ ಮೆರವಣಿಗೆಯಲ್ಲಿ ಭಾಗವಹಿಸಲು ಸ್ತಬ್ಧ ಚಿತ್ರಗಳನ್ನು ವಿಶೇಷವಾಗಿ ರೂಪಿಸುವ ಮೂಲಕ ಪ್ರವಾಸಿಗರಿಗೆ ಮತ್ತು ವೀಕ್ಷಕರಿಗೆ ರಸದೌತಣ ಬಡಿಸಿದ ನನ್ನೆಲ್ಲಾ ಸರ್ಕಾರಿ ನೌಕರ ಬಂದು ಭಗಿನಿಯರಿಗೆ ವಿಶೇಷವಾದ ಅಭಿನಂದನೆಗಳು.

ಅದರಲ್ಲಿ ಮುಖ್ಯವಾಗಿ ಪ್ರಥಮ ಸ್ಥಾನ ಪಡೆದ ಸ್ತಬ್ಧ ಚಿತ್ರವನ್ನು ತಯಾರಿಸುವಲ್ಲಿ ಸಹಕರಿಸಿದ ಕೊಡಗು ಜಿಲ್ಲೆಯ ಅಧಿಕಾರಿ ಮತ್ತು ನೌಕರರಿಗೆ, ದ್ವಿತೀಯ ಸ್ಥಾನ ಪಡೆದ ಸ್ತಬ್ಧ ಚಿತ್ರವನ್ನು ತಯಾರಿಸುವಲ್ಲಿ ಸಹಕರಿಸಿದ ಮೈಸೂರು ಜಿಲ್ಲೆಯ ಅಧಿಕಾರಿ ಮತ್ತು ನೌಕರರಿಗೆ, ವಿಶೇಷವಾಗಿ ತೃತೀಯ ಸ್ಥಾನ ಪಡೆದು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಚಿತ್ರದುರ್ಗ ಜಿಲ್ಲೆಯ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ಸಾರಿದ ಹಾಗೂ ಈ ಸ್ತಬ್ಧ ಚಿತ್ರವನ್ನು ತಯಾರಿಸುವಲ್ಲಿ ಶ್ರಮಿಸಿದ ಜಿಲ್ಲೆಯ ಸಮಸ್ತ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಹಾಗೂ ಕಲಾವಿದರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಕೆ.ಮಂಜುನಾಥ್ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours