ವನ್ಯಜೀವಿಗಳ ಸಂರಕ್ಷಣೆಯ ಸಂದೇಶ ಸಾರೋಣ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಅ:3 ಪರಿಸರ ಸಮತೋಲನೆಗಾಗಿ ವನ್ಯಜೀವಿಗಳ ಸಂರಕ್ಷಣೆಗೆ ಇಂದಿನಿಂದಲೇ ಕಾರ್ಯ ಪ್ರವೃತ್ತರಾಗೋಣ, “ವನ್ಯಜೀವಿಗಳ ಸಂರಕ್ಷಣೆಯ ಸಂದೇಶ ಸಾರೋಣ” ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಜಟ್ ಪಟ್ ನಗರದಲ್ಲಿ ಜಿಲ್ಲಾ ಅರಣ್ಯ ಇಲಾಖೆ ವತಿಯಿಂದ 68 ನೇ ವನ್ಯಜೀವಿ ಸಪ್ತಾಹ -2022 ಕಾರ್ಯಕ್ರಮ ಅಂಗವಾಗಿ  ಸಸಿನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿಯ ಪರಿಸರ ಸಮತೋಲನವನ್ನು ಕಾಪಡುವಲ್ಲಿ ಅತಿ ಮುಖ್ಯ ಪಾತ್ರವಮನ್ನು ವನ್ಯ ಜೀವಿ ವಹಿಸುತ್ತದೆ ಎಂದರೆ ತಪ್ಪಗಲಾರದು. ವನ್ಯ ಜೀವಿಗಳು ನಮ್ಮ ಭೂ ಜಗತ್ತಿನ ಪ್ರಮುಖ ಸಂಗತಿಗಳಾಗಿವೆ. ಅರಣ್ಯಕ್ಕೆ ನಾವು ಮಾಡುವ ಯಾವುದೇ ಹಾನಿಯು ಇಡೀ ನಮ್ಮ ಪರಿಸರ ವ್ಯವಸ್ಥೆಗೆ ಅಪಾಯವನ್ನು ಸೃಷ್ಟಿಸುತ್ತದೆ. ಆದ್ದರಿಂದ ಅರಣ್ಯ ಮತ್ತು ಪ್ರಾಣಿಗಳನ್ನು ರಕ್ಷಣೆ ಎಲ್ಲಾರ ಸೇರಿ ಮಾಡುವ ಕಾಲ ಬಂದೊದಗಿದೆ ಎಂದರು. ಪ್ರಾಣಿಗಳು ಮತ್ತು ಪರಿಸರದ ರಕ್ಷಣೆಗಾಗಿ ಸರ್ಕಾರ ಇಂತಹ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತದೆ ಎಂದರು. ಚಿತ್ರದುರ್ಗ ನಗರದ ಪಾರ್ಕ್ ಗಲ ಅಭಿವೃದ್ಧಿಗೆ 10  ಕೋಟಿ ಹಣ ನೀಡಿದ್ದೇನೆ. ಅರಣ್ಯ ಇಲಾಖೆಯಿಂದ ಸಾಮಾಜಿ ಅರಣ್ಯ ಇಲಾಖೆ ಮತ್ತು  ಅರಣ್ಯ ಇಲಾಖೆಗೆ 3 ಕೋಟಿ ಹಣ ನೀಡಿದ್ದೇನೆ.ನಗರ ಸೇರೊ ಎಲ್ಲಾ ಕಡೆಗಳಲ್ಲಿ   10 ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಲಾಗುತ್ತಿದೆ.
ದೆಹಲಿಯಲ್ಲಿ ಹವಮಾನ ವೈಪರೀತ್ಯಗಳಿಂದ  ಲಕ್ಷಾಂತರ ಜನರು ಪ್ರಾಣ ಬಿಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಗೆ ಎಷ್ಟು ಪರಾದಾಡಿದರು ಎಂದು ಎಲ್ಲಾರಿಗೂ ತಿಳಿದಿದೆ.ಅದಕ್ಕಾಗಿ ಮನುಷ್ಯನ ಆಯಸ್ಸು ವೃದ್ದಿಗೆ
ಪರಿಸರ ಮತ್ತು ಪ್ರಾಣಿ ಪಕ್ಷಿಗಳ ರಕ್ಷಣೆಗೆ ಪಣ ತೊಡೋಣ ಎಂದು ಕರೆ ನೀಡಿದರು.
ಜಿಲ್ಲಾ ಅರಣ್ಯಧಿಕಾರಿ ಟಿ.ರಾಜಣ್ಣ ಮಾತನಾಡಿ ಒಂದು ವಾರಗಳ ಕಾಲ ಹಬ್ಬದ ರೀತಿಯಲ್ಲಿ ವನ್ಯಜೀವಿ ಕಾರ್ಯಕ್ರಮ ಮಾಡಲಾಗುತ್ತದೆ. ಭಾರತ ವನ್ಯಜೀವಿ ರಕ್ಷಣೆ, ಗಿಡ ಮರ ರಕ್ಷಣೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಆದರೆ ಪ್ರಸ್ತುತ ದಿನಮಾನದಲ್ಲಿ ಹುಲಿ, ಆನೆ, ಜಿಂಕೆ ಅಳಿವಿನ ಹಂಚಿಗೆ ಬಂದು ನಿಂತಿವೆ. ಆದ್ದರಿಂದ ಸಾರ್ವಜನಿಕರು ವನ್ಯಜೀವಿಗಳನ್ನು ಕಾಪಡಬೇಕಿದೆ.1952 ರಲ್ಲಿ ವನ್ಯ ಜೀವಿ ಸಪ್ತಾಹ ಜಾರಿ ಮಾಡಿ ಅಕ್ಟೋಬರ್ 2 ರಿಂದ ಅಕ್ಟೋಬರ್ 8 ರವಗೆ ಒಂದು ವಾರಗಳ ಕಾಲ ಮಾಡುತ್ತೇನೆ. ನಮ್ಮ‌ ಜವಬ್ದಾರಿ ಅರಿತು ಪರಿಸರದ ಜೊತೆಗೆ ನವ್ಯ ಜೀವಿಗಳ ರಕ್ಷಣೆಗೆ ಎಲ್ಲಾರೂ ಕೈ ಜೋಡಿಸೋಣ ಎಂದು  ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶ್ರೀನಿವಾಸ್, ಮಾಜಿ ನಗರಸಭೆ ಸದಸ್ಯ ಮಹೇಶ್,
ಸಹಾಯಕ ಅರಣ್ಯ ಸಂರಕ್ಷಣ ಅಧಿಕಾರಿ ಎಸ್.ಸುರೇಶ್,
ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ್,ನಗರಸಭೆ ಪೌರಯುಕ್ತ  ಉಪ ವಲಯ ಅರಣ್ಯಧಿಕಾರಿಗಳಾದ ರುದ್ರಮುನಿ, ರವಿ, ಮಖಂಡ ರವಿಕುಮಾರ್, ರಮೇಶ್, ಕ್ಯಾತಣ್ಣ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours