ಪೋಷಕರು ಮಕ್ಕಳ ಅಂಕಗಳ ಜೊತೆ ಜೊತೆಯಲ್ಲಿ ಕಲೆ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಸೆ.30  ಪೋಷಕರು ಮಕ್ಕಳ ಅಂಕಗಳ ಜೊತೆ ಜೊತೆಯಲ್ಲಿ ಕಲೆ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ನಲ್ಲಿ  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ  ದಿನಗಳಲ್ಲಿ ಖಾಸಗಿ ಶಾಲೆಗಳ ಡೋನೇಶನ್  ಅವಳಿಗೆ ಶಿಕ್ಷಣ ಒಂದು ಮುಗಿಸಿದರೆ ಸಾಕಪ್ಪ ಎಂಬ ಭಾವನೆಯಲ್ಲಿ ಪೋಷಕರು ಇದ್ದಾರೆ. ಆದರೆ ಒಬ್ಬ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಗೆ ಒಂದಲ್ಲ ಒಂದು ರೀತಿ‌ ಭಿನ್ನವಾಗಿರುತ್ತಾರೆ. ಅದಕ್ಕಾಗಿ ಮಕ್ಕಳ ಮೇಲೆ ಕೇವಲ ಶಿಕ್ಷಣಕ್ಕೆ ಒತ್ತಡ ಮಾಡದೇ ಸ್ವಾತಂತ್ರ್ಯವಾಗಿ ಬಿಟ್ಟರೆ ಮಾತ್ರ ಮಕ್ಕಳಲ್ಲಿ  ಇರುವ ಆಸಕ್ತಿಯ ವಿಚಾರ ಹೊರ ಬರುತ್ತದೆ ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು‌.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದವರಿಗೆ ಕ್ರೀಡಾ ಕೋಟದಲ್ಲಿ ಉದ್ಯೋಗ ಸೇರಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿವೆ. ಮಕ್ಕಳು ಕ್ರಿಕೆಟ್ ಗೆ ಆಸಕ್ತಿ ತೋರಿದಂತೆ ದೇಶಿಯ ಕ್ರೀಡೆಗೆ ಆಸಕ್ತಿ ತೊರಬೇಕು.
ಪ್ರತಿಭಾ ಕಾರಂಜಿ ಸರ್ಕಾರಿ ಕಾರ್ಯಕ್ರಮ ಆಗಿದ್ದರು ಮಕ್ಕಳಿಗೆ ತಮ್ಮ ಪ್ರತಿಭೆ ಮತ್ತು ಸಾಮಾರ್ಥ್ಯ ತೋರ್ಪಡಿಸಲು ಉತ್ತಮ ಅವಕಾಶವಾಗಿದೆ ಎಂದರು.
ವಿದ್ಯಾಭ್ಯಾಸ ಇಲ್ಲದವರು ಸಹ ಕಲೆಯಲ್ಲಿ ಉತ್ತಮ ಸಾಧನೆ  ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ‌ತಮ್ಮ ಜೀವನ ಶೈಲಿಯಲ್ಲಿ ನಡೆಯುವ ಘಟನೆಗಳ ಕುರಿತು ಪದ ಕಟ್ಟಿ ಹಾಡುವ ಮೂಲಕ ರಾಜ್ಯಕ್ಕೆ ಪ್ರಸಿದ್ದಿಯಾಗಿದ್ದಾರೆ. ಲತಾ ಮಂಗೇಶ್ಕರ್ ಅವರು ನಮನ್ನು ಅಗಲಿದ್ದಾರೆ ಆದರೆ ಅವರ ಗಾನ ಎಲ್ಲಾರಲ್ಲೂ ರಿಂಗಣಿಸುತ್ತಿದೆ. ಮಧ್ಯಪ್ರದೇಶದಲ್ಲಿ  ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಚಿಕ್ಕ ಚಿಕ್ಕ ಅವಕಾಶಗಳ ಮುಖಾಂತರ ದೊಡ್ಡ ಸಾಧನೆ ಮಾಡಿದ್ದಾರೆ. ಇಂತಹ ಸಾಕಷ್ಟು ಘಟನೆಗಳು ನಮ್ಮ ಮುಂದೆ ಇದ್ದು ಸ್ವರ್ಧೆ ಎಲ್ಲದರಲ್ಲೂ ಇದೆ ಹೋರಟ ಮಾಡಿ ಗೆಲ್ಲಬೇಕು ಎಂದು ಮಕ್ಕಳಿಗೆ ಧೈರ್ಯ  ತುಂಬುವ ಕೆಲಸವನ್ನು  ಶಾಸಕರು ಮಾಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು. ಚಿಕ್ಕ ವಯಸ್ಸಿನಲ್ಲಿ  ಮಕ್ಕಳು ತಮ್ಮಲ್ಲಿರುವ ಕಲೆಯನ್ನು ಜಗತ್ತಿಗೆ ತೋರಿಸುವ ಮೂಲಕ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು.ನಾನು  ಸೇಂಟ್ ಜೋಸೆಫ್ ಕಾನ್ವೆಂಟ್ ವಿದ್ಯಾರ್ಥಿಯಾಗಿದ್ದೇನೆ. ಇಲ್ಲಿ ಚಿಕ್ಕ ಸಂದೇಶ ನೀಡಿದ ನನಗೆ  ಜಿಲ್ಲಾಧಿಕಾರಿ ಪ್ರಶಸ್ತಿ ನೀಡಿದ್ದರು ಎಂದು ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದರು. ಮಕ್ಕಳಲ್ಲಿ ತನ್ನದೇ ವಿಶೇಷ ಕಲೆಯನ್ನು ಹೊಂದಿದ್ದು ಎಲ್ಲಾ ಶಿಕ್ಷಕರು ಪ್ರೋತ್ಸಹಿಸಿ ಹೊರ ತೆಗೆಯಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಡಿಡಿಪಿಐ ರವಿಶಂಕರ್ ರೆಡ್ಡಿ, ಬಿಇಒ ತಿಪ್ಪೇಸ್ವಾಮಿ, ರಾಜ್ಯ ಸರ್ಕಾರಿ  ನೌಕರರ ಸಂಘದ ಸದಸ್ಯ ತಿಮ್ಮಾರೆಡ್ಡಿ ಮತ್ತು ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ತಾಲೂಕು ಮಟ್ಟಕ್ಕೆ ಆಯ್ಕೆಯಾದ ಮಕ್ಕಳು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours