ಆಯರ್ವೇದ ಎಲ್ಲಾರೂ ಅಳವಡಿಸಿಕೊಳ್ಳಬೇಕು: ಪ್ರೋ.ಬಸವರಾಜ್

 

 

 

 

ಚಿತ್ರದುರ್ಗ ಸೆ.೨೪: ನೀವುಗಳು ಮುಂಚೆ ಆಯುರ್ವೇದ ಅಳವಡಿಕೆ ಮಾಡಿಕೊಂಡು ನಂತರ ಬೇರೆಯವರಿಗೆ ತಿಳಿಸುವ ಕಾರ್ಯವನ್ನು ಮಾಡುವಂತೆ ಪ್ರೋ.ಬಸವರಾಜ್ ನೂತನ ಪದವಿ ಪಡೆದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಮೈಲಾರಲಿಂಗೇಶ್ವರ ಆರ್ಯುವೇದ ಕಾಲೇಜು ಮತ್ತು ಆಸ್ಪತ್ರೆವತಿಯಿಂದ ಹಮ್ಮಿಕೊಂಡಿದ್ದ ಪದವಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಆಯುರ್ವೇದ  ಪುರಾತನವಾದ ಚಿಕಿತ್ಸೆಯಾಗಿದೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇಂದಿನ ದಿನಮಾನದಲ್ಲಿ ಇದರ ಬಳಕೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಬೇಕಿದೆ. ನಿಮ್ಮ ಪರಿಕ್ಷೆಯನ್ನು ಪುಸ್ತಕದಿಂದ ಬರೆಯದೇ ಮಸ್ತಕದಿಂದ ಬರೆಯುವ ಕಾರ್ಯವನ್ನು ಮಾಡಬೇಕಿದೆ. ಯಾವುದೇ ಕಾರಣದಿಂದ ಆತ್ಮವಿಶ್ವಾಸವನ್ನು ಕಳೆದು ಕೊಳ್ಳಬೇಡಿ ಎಂದರು.

 

 

ಹಿಂದಿನ ಹತ್ತು ಸಾವಿರ ವರ್ಷದಿಂದಲೂ ಸಹಾ ಆರ್ಯುವೇದ ಇದೆ ಇದ್ದಲ್ಲದೆ ಮುಂದಿನ ಹತ್ತು ಸಾವಿರ ವರ್ಷ ಸಹಾ ಆರ್ಯವೇದ ಇರುತ್ತದೆ. ೨೦೧೮ರಲ್ಲಿ ಕರೋನ ಸಮಯದಲ್ಲಿ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ ಇದಕ್ಕೆ ಆರ್ಯವೇದ ಕಾರಣವಾಗಿದೆ. ಮಾನವನ ಜೀವನ ಶೈಲಿ ಇಂದು ಬದಲಾಗಿದೆ. ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ವಿವಿಧ ರೀತಿಯ ರೋಗಗಳಿಗೆ ಆರ್ಯವೇದ ಉತ್ತಮವಾದ ಚಿಕಿತ್ಸೆಯಾಗಿದೆ. ಆತ್ಮವಿಶ್ವಾಸ ಇಲ್ಲದ ವ್ಯಕ್ತಿ ಎನ್ನುವ ಏನನ್ನು ಸಾಧಿಸಲಾರ, ಅದರೆ ಆತ್ಮವಿಶ್ವಾಸವನ್ನು ಹೊಂದಿದ ವ್ಯಕ್ತಿ ಮಾತ್ರ ಸಾಧನೆಯನ್ನು ಮಾಡಲು ಸಾದ್ಯವಿದೆ ಎಂದು ಬಸವರಾಜ್ ತಿಳಿಸಿದರು.

ಆರ್ಯವೇದಕ್ಕೆ ಯೋಗ ಬಹಳ ಮುಖ್ಯವಾಗಿದೆ. ಪ್ರತಿ ದಿನ ಯೋಗವನ್ನು ಮಾಡುವುದರ ಮೂಲಕ ಉತ್ತಮವಾದ ಆರೋಗ್ಯವನ್ನು ಪಡೆಯಬಹುದಾಗಿದೆ. ಮೊದಲು ಆರ್ಯವೇದವನ್ನು ನೀವುಗಳು ಮುಂಚೆ ಅಳವಡಿಕೆ ಮಾಡಿಕೊಳ್ಳಿ ತದ ನಂತರ ಬೆರೆಯವರಿಗೆ ತಿಳಿಸುವ ಕಾರ್ಯವನ್ನು ಮಾಡಿ ನಿಜವಾದ ಆರೋಗ್ಯ ಸಿಗುವುದು ಸುಲಭದ ಮಾತಲ್ಲ, ಯಾರಾದರೂ ಒಂದಲ್ಲ ಒಂದು ರೀತಿಯಲ್ಲಿ ರೋಗದಿಂದ ಬಳಲುತ್ತಿದ್ದಾರೆ. ವಿವಿಧ ರೀತಿಯ ಮಾಧ್ಯಮದ ಮೂಲಕ ಆರ್ಯವೇದದ ಬಗ್ಗೆ ಜನತೆಗೆ ತಿಳಿಸುವ ಕಾರ್ಯವನ್ನು ಮಾಡುವುದರ ಮೂಲಕ ಆರ್ಯವೇದವನ್ನು ಪ್ರಚಾರ ಮಾಡಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರೋ. ಡಾ.ಜಯಶ್ರೀ, ಕಾರ್ಯದರ್ಶಿ ಭರತ್ ಹಾಗೂ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಭಾಗವಗಹಿಸಿದ್ದರು.

[t4b-ticker]

You May Also Like

More From Author

+ There are no comments

Add yours