ಹೊಳಲ್ಕೆರೆ ಪೌರಕಾರ್ಮಿಕರಲ್ಲಿ ಸಂಸ್ಕ್ರಾತಿಕ ಹಬ್ಬ ವಾತವರಣ:ಎ.ವಾಸಿಂ

 

 

 

 

೨೩ಹೆಚ್.ಎಲ್.ಕೆ.೧
ಹೊಳಲ್ಕೆರೆ : ಆರೋಗ್ಯಪೂರ್ಣ ಹಾಗೂ ಶುದ್ದ ಪರಿಸರ ನಿರ್ಮಾಣಕ್ಕೆ ಸ್ವಚ್ಚತೆ ಮುಖ್ಯ. ಆರೋಗ್ಯವಂತ ಸಮಾಜ ಕಟ್ಟುವ ನಿಟ್ಟಿನಲ್ಲಿ ಪೌರಕಾರ್ಮಿಕರ ಅವಿರಥ ಶ್ರಮವಿದೆ ಎಂದು ಪುರಸಭೆ ಉಪಾಧ್ಯಕ್ಷ ಕೆ.ಸಿ.ರಮೇಶ್ ತಿಳಿಸಿದರು.

ಪಟ್ಟಣದ ಸ್ನೇಹ ಕಂಫರ್ಟ್ ಆವರಣದಲ್ಲಿ ಶುಕ್ರವಾರ ನಡೆದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

 

ಪೌರಕಾರ್ಮಿಕರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಸಾರ್ವಜನಿಕರು ಅವರ ಬಗ್ಗೆ ನಿರಂತರವಾಗಿ ಗೌರವ ಇಟ್ಟುಕೊಂಡಿರಬೇಕು. ಅವರ ಸೇವೆ ಅಪಾರವಾದುದು. ಹೀಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪೌರಕಾರ್ಮಿಕರ ಪಾದ ತೊಳೆದು ಪೂಜೆ ಮಾಡಿ ಗೌರವ ಸಲ್ಲಿಸಿದ್ದರು. ಪೌರಕಾರ್ಮಿಕರು ಆರೋಗ್ಯದ ಜೊತೆ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು. ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಈ ಬಾರಿ ೧೦ ಜನ ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸ ಕೈಗೊಳ್ಳುವ ಅವಕಾಶ ಕಲ್ಪಿಸಿಕೊಡಬೇಕು. ವಿಶೇಷದಲ್ಲಿ ಸ್ವತ್ತೆ ಆದ್ಯಯನ ಮೂಲಕ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಪರಿವರ್ತಿಸಬೇಕೆಂದÀರು.

ಮುಖ್ಯಾಕಾರಿ ಎ.ವಾಸಿಂ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರಕಾರ ಪೌರಕಾರ್ಮಿಕರ ದಿನಾಚರಣೆ ಆಚರಿಸಲು ಅಕೃತವಾಗಿ ಘೋಷಣೆ ಮಾಡಿರುವುದು ಖುಷಿ ತಂದಿದೆ. ಪ್ರತಿಯೊಬ್ಬರಿಗೆ ೭ ಸಾವಿರ ರೂ. ಪ್ರೋತ್ಸಾಹ ಧನ ನೀಡಿದೆ. ನಿವೇಶನ ಉಳ್ಳವರು ಮನೆ ಕಟ್ಟಿಕೊಳ್ಳಲು ೭ ಲಕ್ಷ ರೂ. ಉಚಿತವಾಗಿ ನೀಡುತ್ತಿದೆ. ಅದಕ್ಕೆ ತಕ್ಕಂತೆ ಪೌರಕಾರ್ಮಿಕರು ಕೂಡ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮ ಹೊಳಲ್ಕೆರೆ ಪುರಸಭೆೆಯು ಸ್ವಚ್ಛತೆಯಲ್ಲಿ ರಾಜ್ಯ ಮತ್ತು ರಾಷ್ಟç ಪ್ರಶಸ್ತಿ ಪಡೆದುಕೊಂಡಿದೆ ಎಂದು ಹೇಳಿದರು.

ಪುರಸಭೆ ಸದಸ್ಯರಾದ ಹೆಚ್.ಆರ್.ನಾಗರತ್ನ ವೇದಮೂರ್ತಿ, ಮಲ್ಲಿಕಾರ್ಜುನ ಪಿ.ಆರ್. ಡಿ.ಎಸ್.ವಿಜಯ್, ವಿಜಯಸಿಂಹ ಖಾಟ್ರೋತ್, ಸೈಯದ್ ಸಜೀಲ್, ಮನ್ಸೂರ್, ಸುಧಾಬಸವರಾಜ್, ವಸಂತ ರಾಜಪ್ಪ, ಮಮತ ಜಯಸಿಂಹ ಖಾಟ್ರೋತ್, ಸವಿತಾ ನರಸಿಂಹ ಖಾಟ್ರೋತ್, ಪಿ.ಹೆಚ್.ಮುರುಗೇಶ್, ಬಂಗಿನಾಗರಾಜ್, ಇಂಜನೀಯರ್ ವೆಂಕಟೇಶ್, ಸಿಬ್ಬಂದಿಗಳಾದ ಮಹೇಶ್, ಕಿಶೋರ್, ನಾಗಬೂಷನ್, ಶೌಕತ್, ಕುಮಾರ್, ರವಿ, ಲೋಕೇಶ್, ಯಶೋಧಮ್ಮ ಸೇರಿದಂತೆ ಪೌಕಕಾರ್ಮಿಕರು ಉಪಸ್ಥಿತರಿದ್ದರು.
ಎಲ್ಲಾ ಪೌರಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿಗಳಿAದ ವಿಶೇಷ ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಂಗಿ ನಾಗರಾಜ್ ಇವರಿಂದ ಪೌರಕಾರ್ಮಿಕರಿಗೆ ವಿಶೇಷ ಕೊಡುಗೆ ವಿತರಣೆ ಮಾಡಲಾಗಿತ್ತು.

[t4b-ticker]

You May Also Like

More From Author

+ There are no comments

Add yours