ಚಿತ್ರದುರ್ಗ ಕಲ್ಲು ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದಿಂದ ಉಚಿತ ನೋಟ್‍ಬುಕ್ ಪೆನ್‍ಗಳ ವಿತರಣೆ

 

 

 

 

ಚಿತ್ರದುರ್ಗ: ಕೋಡಯ್ಯನಹಟ್ಟಿಯಲ್ಲಿರುವ ಸರ್ಕಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳಿಗೆ ಚಿತ್ರದುರ್ಗ ಕಲ್ಲು ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದಿಂದ ಗುರುವಾರ ಉಚಿತ ನೋಟ್‍ಬುಕ್ ಹಾಗೂ ಪೆನ್‍ಗಳನ್ನು ವಿತರಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‍ರೆಡ್ಡಿ ಮಕ್ಕಳಿಗೆ ನೋಟ್‍ಬುಕ್, ಪೆನ್‍ಗಳನ್ನು ವಿತರಿಸಿ ಮಾತನಾಡುತ್ತ ಕಲ್ಲು ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದವರು ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್‍ಬುಕ್‍ಗಳನ್ನು ವಿತರಿಸುತ್ತಿರುವುದು ಅತ್ಯಂತ ಮಹತ್ವದ ಕೆಲಸ. ಸಾಕಷ್ಟು ಶ್ರೀಮಂತರಿದ್ದಾರೆ. ಎಲ್ಲರಿಗೂ ಧಾರಾಳವಾದ ಮನಸ್ಸಿರುವುದಿಲ್ಲ. ಪ್ರತಿ ವರ್ಷವೂ ಎರಡು ಸರ್ಕಾರಿ ಶಾಲೆಯ ಮಕ್ಕಳಿಗೆ ಕಲ್ಲು ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದವರು ನೋಟ್‍ಬುಕ್‍ಗಳನ್ನು ವಿತರಿಸುತ್ತಿದ್ದು, ಇದೇ ರೀತಿ ಇನ್ನು ಹೆಚ್ಚು ಹೆಚ್ಚು ಮಕ್ಕಳಿಗೆ ನೀಡಲಿ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಮಾಲಿನ್ಯಾಧಿಕಾರಿ ಪ್ರಕಾಶ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕ ರಂಜ್ಯಾನಾಯ್ಕ, ಚಿತ್ರದುರ್ಗ ಕಲ್ಲು ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್, ಕಾರ್ಯದರ್ಶಿ ಜಿ.ಬಿ.ಶೇಖರಪ್ಪ, ನಗರಸಭಾ ಸದಸ್ಯ ವೆಂಕಟೇಶ್, ಕ್ರಷರ್ ಮಾಲೀಕರುಗಳಾದ ಕಾಂ.ಜಿ.ಸಿ.ಸುರೇಶ್‍ಬಾಬು, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕ್ರಷರ್ ಮಾಲೀಕ ನಿರಂಜನ್, ಅಭಿಷೇಕ್, ಸಂದೀಪ್‍ರೆಡ್ಡಿ, ಎಂ.ಕೆ.ಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ಮಂಜುಳ, ಬೈಯಪ್ಪ, ತಿಮ್ಮರಾಜು, ಪಾಲಾಕ್ಷಮ್ಮ, ಗಿರೀಶ್, ಡಿ.ಡಿ.ಪಿ.ಐ.ಕಚೇರಿಯ ರಾಜೀವ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವಲಿಂಗಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

 

 

[t4b-ticker]

You May Also Like

More From Author

+ There are no comments

Add yours