ಅಬಕಾರಿ ಇಲಾಖೆಯಿಂದ ಆಕ್ರಮವಾಗಿ ಮಾರುತ್ತಿದ್ದ 69 ಲೀಟರ್ ಸೇಂಧಿ ಮತ್ತು ಆರೋಪಿ ವಶಕ್ಕೆ

 

 

 

 

ಸುದ್ದಿ: ಚಿತ್ರದುರ್ಗ ಜಿಲ್ಲೆಯ ಅಬಕಾರಿ ಉಪ ಆಯುಕ್ತರ  ಮಾರ್ಗದರ್ಶನದಂತೆ ಹಾಗೂ ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ ಹಿರಿಯೂರು  ನಿರ್ದೇಶನದಂತೆ ಚಳ್ಳಕೆರೆ ವಲಯ ವ್ಯಾಪ್ತಿಯ ದೇವರೆಡ್ಡಿಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಆಂಧ್ರಪ್ರದೇಶದ ಗಡಿ ರೇಖೆಯಿಂದ ಹೊಂದಿ ಸಾಗಾಣಿಕೆ ಮಾಡುತ್ತಿದ್ದ 69ಲೀಟರ್ ಸೇಂಧಿಯನ್ನು ಅಕ್ರಮವಾಗಿ ಮಾರಾಟದ ಉದ್ದೇಶಕ್ಕೆ ದ್ವಿಚಕ್ರ ವಾಹನದಲ್ಲಿ  ಸಾಗಾಣಿಕೆ ಮಾಡುತ್ತಿದ್ದ  ಎಂಬ ಖಚಿತ ಮಾಹಿತಿಯೊಂದಿಗೆ  69 ಲೀಟರ್ ಸೇಂದಿ, ದ್ವಿಚಕ್ರ ವಾಹನ ಹಾಗೂ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಘನ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದ್ದು ಆರೋಪಿಯನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಯಿತು. ಅಬಕಾರಿ ಪ್ರಕರಣದಲ್ಲಿ ಜಪ್ತಾದ ಸೇಂದಿ ಮತ್ತು ದ್ವಿಚಕ್ರವಾಹನದ ಅಂದಾಜು ಮೌಲ್ಯ 35,000 ಆಗಿರುತ್ತದೆ.
ಸಿ ನಾಗರಾಜು ಅಬಕಾರಿ ನಿರೀಕ್ಷಕರು ಚಳ್ಳಕೆರೆ ಇವರು  ಪ್ರಕರಣವನ್ನು ದಾಖಲಿಸಿರುತ್ತಾರೆ. ಅಬಕಾರಿ ದಾಳಿ ಸಮಯದಲ್ಲಿ ಅಬಕಾರಿ ಉಪನಿರೀಕ್ಷಕರಾದ
ಟಿ.ರಂಗಸ್ವಾಮಿ, ಡಿಟಿ ತಿಪ್ಪಯ್ಯ ವಾಹನ ಚಾಲಕರಾದ ನಾಗರಾಜ ತೋಳಮಟ್ಟಿ ಮತ್ತು ಅಬಕಾರಿ ಸಿಬ್ಬಂದಿಗಳಾದ ಟಿ. ಸೋಮಶೇಖರ , ಎನ್ ನಾಗರಾಜ ಎನ್ .ಶಾಂತಣ್ಣ ರವರು ಹಾಜರಿದ್ದರು.

 

 

[t4b-ticker]

You May Also Like

More From Author

+ There are no comments

Add yours