ಹೆಗ್ಗೆರೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿ: KRS ಪಕ್ಷ‌ದಿಂದ ಮನವಿ

 

 

 

 

ಚಳ್ಳಕೆರೆ-19 ಹೆಗ್ಗೆರೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕೆಂದು ಸೋಮವಾರ ಗ್ರಾಮದ ಮಹಿಳೆಯರು, ಕೆಆರ್ ಎಸ್ ಪಕ್ಷದ ಮುಖಂಡರು ತಹಶೀಲ್ದಾರ್, ಅಬಕಾರಿ ಅಧಿಕಾರಿಗಳಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಯುವ ಘಟಕ ಜಿಲ್ಲಾ ಅಧ್ಯಕ್ಷ ಮಹೇಶ್ ನಗರಂಗೆರೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವತಿಯಿಂದ ಎಂದಿನಂತೆ ಪ್ರತಿ ಸೋಮವಾರ ಜನಸ್ಪಂದನ ಕಾರ್ಯಕ್ರಮವನ್ನು ತಾಲೂಕು ಕಚೇರಿಯ ಮುಂದೆ ನಡೆಸುವ ಸಮಯದಲ್ಲಿ ಸಾಣಿಕೆರೆ ಗ್ರಾಮ ಪಂಚಾಯಿತಿಯ ಹೆಗ್ಗೆರೆ ಗ್ರಾಮದ ಮಹಿಳೆಯರು ಬಂದು ನಮ್ಮನ್ನು ಸಂಪರ್ಕಿಸಿ ನಮ್ಮ ಗ್ರಾಮದಲ್ಲಿ ಮಧ್ಯ ಮಾರಾಟ ಮಾಡುವುದರಿಂದ ನಮಗೆ ತುಂಬಾ ಕಷ್ಟವಾಗುತ್ತಿದೆ. ಕುಟುಂಬದಲ್ಲಿ ತುಂಬಾ ಗಲಾಟೆ ಜಗಳಗಳು ಆಗುತ್ತಿವೆ ಮತ್ತು ನಾವೇ ಸ್ವತಃ ದುಡಿದು ಮಕ್ಕಳನ್ನು ಮತ್ತು ಸಂಸಾರವನ್ನು ಸಾಗಿಸುವ ಪರಿಸ್ಥಿತಿ ಇರುವಾಗ ನಮ್ಮ ಗಂಡ ನಮ್ಮ ಬಳಿಯೆ ಹಣವನ್ನು ತೆಗೆದುಕೊಂಡು ಮಧ್ಯವನ್ನು ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅಕ್ರಮವಾಗಿ ನಮ್ಮ ಹಳ್ಳಿನಲ್ಲಿ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಮಧ್ಯ ಮಾರಾಟ. ಇದರಿಂದ ನಮಗೆ ಜೀವನ ನಡೆಸಲು ಮತ್ತು ನೆಮ್ಮದಿಯಿಂದ ಇರಲು ಆಗುತ್ತಿಲ್ಲ.
ಈ ಕುರಿತು ನಾವು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವತಿಯಿಂದ ತಹಸೀಲ್ದಾರ್ ಮತ್ತು ಅಬಕಾರಿ ಇನ್ಸ್ ಪೆಕ್ಟರ್ ಗೆ ಮನವಿಯನ್ನು ನೀಡಲಾಗಿದೆ. ಮಧ್ಯ ನಿಷೇಧವನ್ನು ಮಾಡಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುವವರನ್ನು ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಮನವಿ ಮಾಡಲಾಗಿದೆ ಎಂದರು

 

 

ಈ ಸಂದರ್ಭದಲ್ಲಿ ಕಾರ್ಯದರ್ಶಿ ಹನುಮಂತ ಹೆಗ್ಗೆರೆ, ಬೋಜರಾಜ ವೀರೇಶ ಮತ್ತು ಹೆಗ್ಗೆರೆಯ ಸಾರ್ವಜನಿಕರು ಇದ್ದರು.

[t4b-ticker]

You May Also Like

More From Author

+ There are no comments

Add yours