ಇಂಗಳದಾಳ್ ಮತ್ತು ಕುರುಮರಡಿಕೆರೆ ಕೋಡಿ : ಡಾ.ಸಿದ್ದಾರ್ಥ ಗುಂಡಾರ್ಪಿ ಅವರಿಂದ ಬಾಗಿನ ಅರ್ಪಣೆ

 

 

 

 

ಇಂಗಳದಾಳ್ ಮತ್ತು ಕುರುಮರಡಿಕೆರೆಗೆ ಗ್ರಾಮದಲ್ಲಿ  ಯುವ ಮುಖಂಡ ಸಿದ್ದಾರ್ಥ ಗುಂಡಾರ್ಪಿ ಅವರಿಂದ ಬಾಗಿ ಅರ್ಪಣೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಪುತ್ರ ಸಿದ್ದಾರ್ಥ ಗುಂಡಾರ್ಪಿ ಅವರು  ಇಂಗಳದಾಳ್ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಎರಡು ಬೃಹತ್ ಚಕ್ ಡ್ಯಾಂ ಗಳಿಗೆ ಮತ್ತು ಹತ್ತಾರು ಹಳ್ಳಿಗಳ ರೈತರ ಜೀವನಾಡಿ ಆಗಿರುವ ಕುರುಮರಡಿಕೆರೆ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ  ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ  ಮಾತನಾಡಿ ಇಂಗಳದಾಳ್ ಗ್ರಾಮದಲ್ಲಿ ಎಲ್ಲೂ ಸಹ ಒಂದು ಹನಿ‌ ನೀರು ನಿಲ್ಲುವುದಿಲ್ಲ. ಎಷ್ಟೇ ಪ್ರಮಾಣದಲ್ಲಿ ಮಳೆ ಬಂದರು ನಮಗೆ ಉಪಯೋಗ ಇಲ್ಲ ಎಂಬ ಹಿನ್ನೆಲೆಯಲ್ಲಿ ಶಾಸಕರಾದ ಜಿ.ಹೆಚ್‌.ತಿಪ್ಪಾರೆಡ್ಡಿ  ಅವರು ಎರಡು ಕೋಟಿ ವೆಚ್ಚದಲ್ಲಿ ಎರಡು ಚಕ್ ಡ್ಯಾಂ ನಿರ್ಮಾಣ ಮಾಡಿದ್ದು  ಸಾಕಷ್ಟು ನೀರು ಶೇಖರಣೆ ಆಗಿ ತುಂಬಿ ಹರಿಯುತ್ತಿದ್ದು  ರೈತರ ಜಮೀನು ಮತ್ತು  ಸಾವಿರಾರು ಬೊರವೆಲ್ ಗೆ ಅನುಕೂಲವಾಗತ್ತದೆ ಎಂದು ಗ್ರಾಮಸ್ಥರು ಹೇಳಿತ್ತಿರುವುದು ಸಂತಸ ತಂದಿದೆ ಎಂದರು.
ಕುರುಮರಡಿಕೆರೆ ಸಹ ಕೋಡಿ ಬಿದ್ದಿದ್ದು  ಇಂಗಳದಾಳ್, ಕುಂಚಿಗನಾಳ್, ಪಾಲವ್ವಹಳ್ಳಿ,‌ಕುರುಮರಡಿಕೆರೆ, ಡಿ.ಎಸ್.ಹಳ್ಳಿ ಸೇರಿ ಅನೇಕ ಹಳ್ಳಿಗಳಿಗೆ ಜಲದ ಮೂಲವಾಗಿದೆ ಎಂದರು. ಒಮ್ಮೆ ಕುರುಮರಡಿಕೆರೆ ತುಂಬಿದರೆ ರೈತರು ಕನಿಷ್ಠ 2-3 ವರ್ಷ ನೆಮ್ಮದಿಯಿಂದ ಬೆಳೆ ಬೆಳೆಯುತ್ತಾರೆ ಎಂಬ ದೃಢ  ನಂಬಿಕರ ರೈತರಿದ್ದು ನಾನು ಸಹ  ಪ್ರತಿ ವರ್ಷ ಉತ್ತಮ ಮಳೆ ಬೆಳೆ ಆಗಿ ರೈತರು ಸಮೃದ್ದಿಯಿಂದ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಸಂದರ್ಭದಲ್ಲಿ  ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್, ಮಹೇಶ್, ರಾಜಪ್ಪ ,ರಘು ಮುಖಂಡರಾದ ಜಿ.ತಿಪ್ಪೇಸ್ವಾಮಿ, ಪಿ.ಕೆ.ರಾಮಣ್ಣ, ಬಿ.ಅಶೋಕ್, ಜಿ.ಟಿ.ಓಬಣ್ಣ, ಜಿ.ಟಿ.ನಾಗರಾಜ್, ಎಸ್.ಮಂಜುನಾಥ್, ಉಮೇಶ್,ಪ್ರಕಾಶ್ ಪ್ರಸನ್ನ, ಮಂಚಿನ್ನಮ್ಮ, ಕೆ.ಟಿ.ಗಾದ್ರಪ್ಪ  ಮಹಂತೇಶ್,ಹನುಂಮತಪ್ಪ, ರವಿಕುಮಾರ್,ಆರ್.ಹೆಚ್.ಉಮೇಶ್, ರಾಮಣ್ಣ ,‌ಮಹಂತೇಶ್ ತಳವಾರ್,ಅಶೋಕ್, ಆರ್.ಟಿ.ಭೀಮಣ್ಣ, ಜಿ.ಟಿ.ಗುರುರಾಜ್, ಚಿನ್ನಮ್ಮ ಇದ್ದರು.
[t4b-ticker]

You May Also Like

More From Author

+ There are no comments

Add yours