ಸಾವಿರಾರು ಹೆಕ್ಟೇರ್ ಈರುಳ್ಳಿ ಶೇಂಗಾ ಬೆಳೆ ಮಳೆಗೆ ಹಾನಿ, ತಾಲೂನಾದ್ಯಂತ ಆಗಿರುವ ನಷ್ಟದ ಪರಿಹಾರ ತುರ್ತು ಘೋಷಿಸಿ: ಶಾಸಕ ಟಿ.ರಘುಮೂರ್ತಿ

 

 

 

 

ವಿಧಾನಸಭೆ ಅಧಿವೇಶನ: ಚಿತ್ರದುರ್ಗ ಜಿಲ್ಲೆಯ ಜನರು ಸಂಭ್ರದಲ್ಲಿದ್ದಾರೆ. ರೈತರ, ಸಂಘ ಸಂಸ್ಥೆಗಳ ಹೋರಟ ಫಲವಾಗಿ 16.5 ಟಿಎಂಸಿ ಭದ್ರಾ ನೀರು ಹರಿದು ಜೊತೆಗೆ ಈ ಬಾರಿ ಉತ್ತಮ ಮಳೆಯಾಗಿದ್ದು ವಾಣಿವಿಲಾಸ ಸಾಗರ ದಾಖಲೆ ಮಟ್ಟ ತಲುಪಿ ತುಂಬಿ ಹರಿಯುತ್ತಿದೆ.ನಮ್ಮ  ಜಿಲ್ಲೆಯ  ಆರು  ತಾಲೂಕುಗಳಿಗೆ ಅನುಕೂಲವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದ್ದಕ್ಕೆ ಪಕ್ಷಾತೀತವಾಗಿ ಎಲ್ಲಾ ಸರ್ಕಾರದ ಮುಖ್ಯಮಂತ್ರಿಗಳಿಗೆ ನನ್ನ ಕ್ಷೇತ್ರದ ಮತ್ತು ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು  ಶಾಸಕ ಟಿ.ರಘುಮೂರ್ತಿ ತಿಳಿಸಿದರು.

 

 

ನನ್ನ   ಕ್ಷೇತ್ರದಲ್ಲಿ ಸಂಭ್ರಮದ ಜೊತೆಗೆ ವೇದವಾತಿ ನದಿ ನೀರಿನ‌ ಮಟ್ಟ ಮೀರಿ ಹರಿಯುತ್ತಿದ್ದು
ಚಳ್ಳಕೆರೆ ತಾಲೂಕಿನ ಸುಮಾರು ಮೂರು ಹಳ್ಳಿಗಳು ಜಲವೃತವಾಗಿವೆ. ಆರು ಹಳ್ಳಿಗಳು ಸಂಪರ್ಕ ಕಡಿತುಕೊಂಡಿವೆ. ನಾಲ್ಕು ಜನರು ಹಸುನಿಗಿದ್ದಾರೆ. ಶೇಖಡಾ 70%  ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಪರಿಶಿಷ್ಟ ಜಾತಿ ಕಾಲೋನಿ ಆಗಿರುವ ಹಾಲಗೊಂಡನಹಳ್ಳಿ ಗ್ರಾಮದ 100 ಮನೆಗಳು ಸಂಪೂರ್ಣ ನೀರಿನಲ್ಲಿ ಮುಳುಗಡೆ ಆಗಿದೆ. ಆ ಗ್ರಾಮದ ಸ್ಥಳಾಂತರಕ್ಕೆ 10 ಎಕರೆ ಜಮೀನು ಸಹ ಮೀಸಲಿಡಲಾಗಿದ್ದು ಮನೆ ನಿರ್ಮಾಣಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಲು ಮನವಿ ಮಾಡಿದರು.

ಚಳ್ಳಕೆರೆ ಮತ್ತು ಮೊಳಕಾಲ್ಮುರು ಭಾಗದಲ್ಲಿ ಹೆಚ್ಚು ಈರುಳ್ಳಿ ಮತ್ತು ಶೇಂಗಾ ಬೆಳೆಯನ್ನು ಬೆಳೆಯುತ್ತಿದ್ದಿ ಹೆಚ್ಚಿನ ಮಳೆಯಿಂದ 5600 ಹೆಕ್ಟೇರ್ ಹಾನಿ ಒಳಗಾಗಿದೆ. ತೋಟಗಾರಿಕೆ ಸಮೀಕ್ಷೆ ಪ್ರಕಾರ   ಅತಿ ಹೆಚ್ಚು ಈರುಳ್ಳಿ ಪ್ರದೇಶ ಹಾನಿಯಾಗಿದೆ. ಪಿಡ್ಲ್ಯೂಡಿ ಬ್ರಿಡ್ಜ್, ರಸ್ತೆಗಳು ಹಾಳಗಿದ್ದ ಎಲ್ಲಾವೂ ಸೇರಿ 200 ಕೋಟಿ ನಷ್ಟ ಉಂಟಾಗಿದ್ದು ಸರ್ಕಾರ ಕೂಡಲೇ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

[t4b-ticker]

You May Also Like

More From Author

+ There are no comments

Add yours