ಗರ್ಭಿಣಿಯರು, ಬಾಣಂತಿಯರು ಉತ್ತಮ ಪೋಷಕಾಂಶದ ಆಹಾರ ಸೇವಿಸಬೇಕು:ಭಾರತಿ ಆರ್ ಬಣಕಾರ್

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ)ಸೆಪ್ಟೆಂಬರ್13:
ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರು ಉತ್ತಮ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಹೇಳಿದರು.
ನಗರದ ಮಹಾತ್ಮಗಾಂಧಿನಗರದ ಸಮುದಾಯ ಭವನದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇವರ ವತಿಯಿಂದ ಪೋಷಣ್ ಮಾಸಾಚರಣೆ ಅಂಗವಾಗಿ ನಡೆದ ಪೋಶಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟನೆ, ಅಂಗನವಾಡಿ ಫಲಾನುಭವಿ ಗರ್ಭಿಣಿಗೆ ಸೀಮಂತ ಹಾಗೂ ಮಗುವಿಗೆ  ಅನ್ನಪ್ರಾಶನ ಮಾಡಿ ಅವರು ಮಾತನಾಡಿದರು.
ಬಾಣಂತಿಯರು, ಗರ್ಭಿಣಿಯರು ಹಾಗೂ ಮಕ್ಕಳಿಗೆ ಪೆÇೀಷಣೆಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ನೀಡಲಾಗುತ್ತಿದ್ದು, ಇದರ ಸದ್ಭಳಕೆ ಮಾಡಿಕೊಳ್ಳಬೇಕು. ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್ ಸುಧಾ ಮಾತನಾಡಿ, ಕೇಸರಿ, ಬಿಳಿ, ಹಸಿರು ಈ ಮೂರು ತರಹದ ಸೊಪ್ಪು ಮತ್ತು ತರಕಾರಿಗಳನ್ನು ತಿನ್ನಬೇಕು. ಸೊಪ್ಪು ದೈಹಿಕ ಸದೃಢತೆಯನ್ನು ಮಾಡುತ್ತದೆ. ಈ ಆಹಾರ ಮೇಳ ಏರ್ಪಡಿಸಿರುವ ಉದ್ದೇಶ ನಮ್ಮ ದೈನಂದಿನ ಜೀವನದಲ್ಲೂ ಕೂಡ ಈ ಒಂದು ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ತರಕಾರಿ ಹಣ್ಣಿನಲ್ಲಿ ಇರುವ  ಪೋಷಕಾಂಶಗಳು, ವಿಟಮಿನ್ಸ್‍ಗಳ  ಬಗ್ಗೆ ಮಾಹಿತಿ ನೀಡಿದರು.
ಮಕ್ಕಳಿಗೆ ಹಣ್ಣು ಮತ್ತು ಪೋಷಕಾಂಶಯುಕ್ತ ಆಹಾರದ ವೇಷ ಭೂಷಣ ಹಾಕಿಸುವುದರ ಮೂಲಕ ವಿವಿಧ ಪೌಷ್ಟಿಕ ಆಹಾರಗಳು, ಹಣ್ಣುಗಳು, ಸೊಪ್ಪು ತರಕಾರಿಗಳ ಪರಿಚಯ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ಕೆಂಪಹನುಮಯ್ಯ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕುಮಾರಿ ಮಂಜುಳಾ, ದಾಸಪ್ಪ, ಅಂಗನವಾಡಿ ಕಾರ್ಯಕರ್ತರಾದ ನಳಿನಾಕ್ಷಿ, ಮುನಿಯಮ್ಮ, ಚಂದ್ರಿಕಾ, ನಾಗವೇಣಿ, ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಸ್ವಾಗತಿಸಿದರು. ಮಹಿಳಾ ಮೇಲ್ವಿಚಾರಕರಾದ ರೂಪಲಕ್ಷಿ  ನಿರೂಪಿಸಿದರು.

 

 

[t4b-ticker]

You May Also Like

More From Author

+ There are no comments

Add yours