ಆಫೀಸ್ ಪತ್ರ ವ್ಯವಹಾರ ಬಿಡಿ, ಫೀಲ್ಡ್ ಗೆ ಇಳಿದು ಕೆಲಸ ಮಾಡಿದರೆ ಸಮಸ್ಯೆಗೆ ಪರಿಹಾರ:ಶಾಸಕ ಟಿ.ರಘುಮೂರ್ತಿ ಕಿಡಿ

 

 

 

 

ಚಿತ್ರದುರ್ಗ:ಅಧಿಕಾರಿಗಳು ಸಮಸ್ಯೆ ಇರುವ ಕಡೆ  ತೆರಳಿ ಪರಿಹಾರ ಹುಡುಕಬೇಕು. ಆಫೀಸ್ ನಲ್ಲಿ ಪತ್ರ ವ್ಯವಹಾರ ಮಾಡಿದರೆ  ಸಮಸ್ಯೆ ಬಗೆಹರಿಯಲ್ಲ. ಎಲ್ಲಾರೂ ಒಟ್ಟಾಗಿ  ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ವಿರುದ್ದ ಕಿಡಿಕಾರಿದರು.

 

 

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ‌ರ ಅಧ್ಯಕ್ಷತೆಯಲ್ಲಿ  ತುರುವನೂರು ಹೋಬಳಿಯ 6 ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ  ಮಾತನಾಡಿದರು‌.
ತಾಲೂಕಿನಲ್ಲಿ ಮಳೆ ಹೆಚ್ಚು ಬಂದಿದ್ದು ಎಲ್ಲಾ ಕಡೆಗಳಲ್ಲಿ ಏನೇನು ಸಮಸ್ಯೆ ಇದೆ ಎಂಬುದನ್ನು ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಜನರಿಗೆ ಪರಿಹಾರ ಸೇರಿ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸಬೇಕು ಎಂದರು.
ಗ್ರಾಮ  ಪಂಚಾಯತಿ ಪಿಡಿಓ ಗಳು ರಾಜಕಾರಣ ಮಾಡಬಾರದು. ಸರ್ಕಾರಿ ಕೆಲಸ ಕಾನೂನು ಪ್ರಕಾರ ಅಚ್ಚುಕಟ್ಟಾಗಿ ಮಾಡಬೇಕು. ನಿಮ್ಮ ಹಂತ ಮೀರಿದ ಸಮಸ್ಯೆ ತಾಲೂಕು ಪಂಚಾಯಿತಿ ಇಓ, ತಹಶೀಲ್ದಾರ್ ಸೇರಿ ಸಂಬಂಧಿಸಿದ ಇಲಾಖೆ ಅಧಕಾರಿಗಳ ಗಮನಕ್ಕೆ ತರಬೇಕು. ಸಮಸ್ಯೆ ನಿಮ್ಮಲ್ಲಿ  ಇದ್ದರೆ ಯಾರಿಗ್ರಿ ತಿಳಿಯುತ್ತೆ ಎಂದು ಪಿಡಿಓ ಗಳ ವಿರುದ್ದು  ಹರಿಹಾಯ್ದರು.
ತುರುವನೂರು ಹೋಬಳಿಯ ಮಾಡನಾಯಕನಹಳ್ಳಿ, ಸುಲ್ತಾನಿಪುರ, ಬೋಗಳರಹಟಗಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಕೂಡಲೇ ಬೊರವೆಲ್ ಕೊರೆಸಬೇಕು ಎಂದು ಕುಡಿಯುವ ನೀರು ಸರಬರಾಜು ಇಲಾಖೆಯವರಿಗೆ ತಾಖೀತು ಮಾಡಿದರು. ಪಿಡಿಓ ಗಳು
ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಪಟ್ಟಿ  ಬಗೆಹರಿಸಿಕೊಳ್ಳಿ.  ಕೇಲವು ಕಡೆಗಳಲ್ಲಿ ಟ್ರಾನ್ಸ್ ಫಾರ್ಮರ್ ಹಾಕಬೇಕು ಎಂದು ಬೇಡಿಕೆ ಇದ್ದು ಬೆಸ್ಕಾಂ ಇಲಾಖೆ ಕ್ರಮ ವಹಿಸಿ ತುರ್ತಾಗಿ ಟ್ರಾನ್ಸ್ ಫಾರ್ಮರ್ ಹಾಕಿ. ಬೆಸ್ಕಾಂ ಇಲಾಖೆ ಅವರು ಮಳೆಯಿಂದ ಪ್ರತಿ ಹಳ್ಳಿಗೆ ಭೇಟಿ ನೀಡಿ ಬಾಗಿರುವ ಮತ್ತು ಮುರಿದು ಬಿದ್ದಿರುವ  ವಿದ್ಯುತ್ ಕಂಬಗಳನ್ನು  ಬದಲಾಯಿಸಬೇಕು. ಫೀಲ್ಡ್ ಗೆ ಇಳಿದರೆ ಸಮಸ್ಯೆ ತಿಳಿಯುತ್ತದೆ.ಜನರು ನಿಮ್ಮ ಬಳಿ ಬಂದು ಹೇಳುವ ತನಕ ಬಿಡದೇ ಸ್ವಯಂ ಆಸಕ್ತಿಯಿಂದ ಜನರಿಗಾಗಿ ಕೆಲಸ ಮಾಡಿ ಎಂದರು.
ಮಳೆಗಾಲದಲ್ಲಿ ನೀರು ಖರೀದಿಗೆ ಶಾಸಕರು ಕೆಂಡಾಮಂಡಲ:   ಮಾಡನಾಯಕನಹಳ್ಳಿ ಪಂಚಾಯಿತಿ  ಪಿಡಿಓ   ರೈತರ ಬೊರವೆಲ್ ಗಳನ್ಎರಡ್ಮೂರು ತಿಂಗಳಿಂದ  ಒಂದು ತಿಂಗಳಿಗೆ 4200ರೂ ಹಣ ನೀಡಿ ನೀರು ಬಾಡಿಗೆ ಪಡೆಯುತ್ತೇನೆ ಎಂದಾಗ ಶಾಸಕರು  ಯಾರನ್ನು ಕೇಳಿ ಬಾಡಿಗೆಗೆ ನೀರನ್ನು ಸರಬರಾಜು ಮಾಡಿದಿರ್ರಿ, ಇಓ ಗಮನಕ್ಕೆ ತಂದಿಲ್ಲ.  ಯಾವ ಪರಿಸ್ಥಿತಿಯಲ್ಲ ಕುಡಿಯುವ ನೀರಿಗೆ ಹ ಬಳಕೆ ಮಾಡಬೇಕು ಎಂಬುದು ತಿಳಿದಿಲ್ಲ.‌ಸರ್ಕಾರಿ ಹಣ ಎಂದರೆ ಏನ್ ತಿಳಿದುಕೊಂಡಿಯ್ಯ   ಎಂದು ಪಿಡಿಓ ಗೆ ಚಾರ್ಜ್ ಮಾಡಿದರು‌.
ಎಲ್ಲಾ  ಪಿಡಿಓ ಗಳು ಕುಡಿಯುವ ನೀರು ಸರಬರಾಜು ಮತ್ತು ಬೆಸ್ಕಾಂ ಇಲಾಖೆ  ದೂರವಾಣಿ ಸಂಖ್ಯೆ ಇಟ್ಟುಕೊಂಡು ಸಮಸ್ಯೆ ಬಂದ ಕೂಡಲೇ ಸಂಪರ್ಕ ಮಾಡಬೇಕು  ಎಂದರು.
ಪಿಆರ್ಇ ಡಿ ಸೇರಿ ಎಲ್ಲಾ  ಇಲಾಖೆಯವರು ರಸ್ತೆಗಳು, ಕೆರೆಗಳ ಸುತ್ತಮುತ್ತಲೂ, ಶಾಲೆಗಳು ಗ್ರಾಮಗಳ ಸಮಸ್ಯೆಗಳನ್ನು   ಪರಿಶೀಲಿಸಿ ಸಮಸ್ಯೆ  ಇರುವ ಎಲ್ಲಾವನ್ನು ಬಗೆಹರಿಸಬೇಕು.
ಶಾಲಾ ಮತ್ತು ಅಂಗನವಾಡಿ ಕಟ್ಟಡಗಳಿಗೆ ಬಂದಿರುವ ಹಣವನ್ನು ಕೂಡಲೇ ಬಳಸಬೇಕು. ಸಮಸ್ಯೆಗಳ ಪಿಆರ್ಇಡಿ , ನಿರ್ಮಿತಿ  ವಿವಾದಗಳಿಂದ ಉಳಿದಿರುವ ರಸ್ತೆ, ಶಾಲೆ ಕಟ್ಟಡ, ಅಂಗನವಾಡಿ ಕಟ್ಟಡಗಳನ್ನು ಇಓ, ತಹಶೀಲ್ದಾರ್, ಪಿಆರ್ಇಡಿ , ಸಿಡಿಪಿಓ, ಪಿಡಿಓ ಸೇರಿ ಎಲ್ಲಾರೂ ಒಟ್ಟಿಗೆ ಹೋಗಿ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಿ ಕಟ್ಟಡ ಮತ್ತು ರಸ್ತೆಗಳನ್ನು ಪ್ರಾರಂಭಿಸಬೇಕು.
ಚಳ್ಳಕೆರೆ to ಚಿತ್ರದುರ್ಗ ರಸ್ತೆ ಸಂಪೂರ್ಣ ಹಾಳಗಿದ್ದು ಅದಷ್ಟು ಬೇಗ  ಕಾಮಗಾರಿ  ಮಾಡಬೇಕು. ಹುಣಸೆಕಟ್ಟೆ, ಮಾಡನಾಯಕನಹಳ್ಳಿ , ಚಿಕ್ಕಪ್ಪನಹಳ್ಳಿ ರಸ್ತೆಗಳು ಮಾಡಬೇಕು. ತುರುವನೂರು , ಚಿಕ್ಕಗೊಂಡನಹಳ್ಳಿ to ಯಳಗೋಡು ಮುದ್ದಾಪುರ ರಸ್ತೆ ತುರ್ತಾಗಿ ಮಾಡಬೇಕು ಎಂದಾಗ ಎಲ್ಲಾವೂ ಟೆಂಡರ್ ಆಗಿದೆ. ಕೆಲಸ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಮುದ್ದಾಪುರದಲ್ಲಿ ನಬರ್ಡ್ ವತಿಯಿಂದ 6 ಶಾಲಾ ಕೊಠಡಿಗಳನ್ನು ನೀಡಿದ್ದು ಕೇಲವರು ತಕರಾರು
ಮಾಡಿದ್ದು ಕೂಡಲೇ ಸಮಸ್ಯೆ ಸ್ಥಳಕ್ಕೆ ಭೇಟಿ ನೀಡಿ  ಕಾಮಗಾರಿ ಪ್ರಾರಂಭಿಸಲು ತಹಶೀಲ್ದಾರ್ ಅವರಿಗೆ ಸೂಚಿಸಿದರು.
ರಸ್ತೆಯ ಅಕ್ಕ ಪಕ್ಕದಲ್ಲಿ ಇರುವಂತಹ ವಿದ್ಯುತ್ ಕಂಬಕ್ಕೆ ಅಡ್ಡಲಾಗಿರುವ ಮರಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಅರಣ್ಯ ಇಲಾಖೆ ಅವರಿಗೆ ತಿಳಿಸಿದರು.
ಆಹಾರ ಇಲಾಖೆಯಲ್ಲಿ ಜಮೀನು ಹೆಚ್ಚಿದೆ ಎಂದು   720 ಬಿಪಿಎಲ್ ಕಾರ್ಡ್ ರದ್ದಾಗಿವೆ ಎಂದು ಮಾಹಿತಿ ನೀಡಿದರು.  ಇದಕ್ಕೆ ಶಾಕಕರು ಮರು ಪರಿಶೀಲಿಸಿ   ಬಡವರನ್ನು ಗುರುತಿಸಿ ಬಿಪಿಎಲ್ ಕಾರ್ಡ್ ನೀಡಬೇಕು ಎಂದಾಗ ಇಲಾಖೆಯವರು  100 ಕಾರ್ಡಗಳನ್ನು  ಬಿಪಿಎಲ್ ಮಾಡಕೊಡಲಾಗಿದೆ ಎಂದರು. ಇದಕ್ಕೆ ಶಾಸಕರು ಕನಿಷ್ಠ 50% ಜನರಿಗೆ ಬಿಪಿಎಲ್ ಅವಶ್ಯಲತೆ ಇದ್ದು ಕಾನೂನು ಪ್ರಕಾರ ಬಿಪಿಎಲ್ ನೀಡಲು ಕ್ರಮ ವಹಿಸಬೇಕು ಎಂದರು.
ಪಶುಸಂಗೋಪನೆ ಇಲಾಖೆಯವರು ಪ್ರವಾಹ ಅಥವಾ ಕೆರೆ ನೀರು ಕಾಯಿಲೆಗಳಿಂದ ಮರಣ ಹೊಂದಿರುವ ಕುರಿಗಳಿಗೆ ಪರಿಹಾರ  ಕೊಡಿಸಬೇಕು ಎಂದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ  ಕೃಷಿಹೊಂಡ, ಬದು ನಿರ್ಮಾಣ, ಧನದ ದೊಡ್ಡಿಗಳು, ಕುರಿ ಶೆಡ್ ಗಳ ಮಾಹಿತಿ ಜನರಿಗೆ ನೀಡಿ ಕಟ್ಟಿಕೊಳ್ಳಲು ಅವರಿಗೆ ಮಾಹಿತಿ ನೀಡಬೇಕು.ಯೋಜನೆ ಸಂಪೂರ್ಣ ಮಾಹಿತಿ ನೀಡಿದರೆ ಜನರು ಸದುಪಯೋಗ ಮಾಡಿಕೊಳ್ಳವುದರಲ್ಲಿ ಅನುಮಾನವಿಲ್ಲ.
ಎಲ್ಲಾ ಇಲಾಖೆ ಅವರು ಮಾಹಿತಿ ಇಲ್ಲದೆ ಸಭೆಗೆ ಬರಬೇಡಿ. ಏನೋ‌ ಕೇಳುತ್ತಾರೆ ಎಂದು ಬಂದರೆ ಗ್ರಾಹಚಾರ ಸರಿ ಇರಲ್ಲ.  ಒಂದು ಇಲಾಖೆ ಮತ್ತೊಂದು ಇಲಾಖೆ ಸರಪಳಿ ಇದ್ದಂತೆ ಎಲ್ಲಾರೂ ಒಟ್ಟಿಗೆ ಸೇರೊಕೊಂಡು ಕೆಲಸ ಮಾಡಬೇಕು.‌ಪ್ರವಾಹದ ಸಂದರ್ಭದಲ್ಲಿ ವಿಶೇಷವಾಗಿ ಅನುದಾನ ಬಳಸಲು ಅವಕಾಶ ಇದ್ದು  ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಂತಹ ವಿಶೇಷ ಸಂದರ್ಭದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು.ಆದರೆ ಇಚ್ಚಾಶಕ್ತಿ ಇರಬೇಕು. ನಿತ್ಯದ  ಕೆಲಸದ ಜೊತೆಗೆ  ವಾರದಲ್ಲಿ ಒಂದೆರಡು ದಿನ ಜನರೊಟ್ಟಿಗೆ  ಹೋದರೆ ಸಮಸ್ಯೆಗೆ ಪರಿಹಾರ ಸಿಕ್ಕೆ ಸಿಗುತ್ತದೆ  ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಓ ಹನುಂಮತಪ್ಪ, ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು  ಇದ್ದರು
[t4b-ticker]

You May Also Like

More From Author

+ There are no comments

Add yours