ಕೋಡಿ ಬಿದ್ದ ಕುರುಮರಡಿಕೆರೆ ರೈತರ ಮೊಗದಲ್ಲಿ ಸಂತಸ

 

 

 

 

ಚಿತ್ರದುರ್ಗ:ತಾಲೂಕಿನ ಕುರುಮರಡಿಕೆರೆ ಕೋಡಿ ಬಿದ್ದಿದ್ದು ಸಾವಿರಾರು ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ‌.  ಹತ್ತಾರು ಹಳ್ಳಿಗಳ ಜಲ ಮೂಲವಾಗಿರುವ ಕುರುಮರಡಿಕೆರೆ ಮೈದುಂಬಿ ಹರಿಯುತ್ತಿದೆ. ಅನೇಕ ವರ್ಷಗಳಿಂದ ಮಳೆಯಿಲ್ಲದೆ ಸ್ವಲ್ಪ ನೀರು ಮಾತ್ರ ಇದ್ದ ಕೆರೆಗೆ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಕೆರೆ ತುಂಬಿದೆ‌. ಇಂಗಳದಾಳ್, ಕುರುಮರಡಿಕೆರೆ, ಕೆನ್ನೆಡಲು, ಚಿಕ್ಕಸಿದ್ದವ್ವನಹಳ್ಳಿ, ಕುಂಚಿಗನಾಳ್, ಬಂಗೇರಹಟ್ಟಿ, ಡಿ.ಎಸ್.ಹಳ್ಳಿ ಸೇರಿ ಅನೇಕ ಹಳ್ಳಿಗಳ ಬೋರ್ ವೆಲ್ ರೀಚಾರ್ಜ್ ಗೆ ಸಾಕಷ್ಟು ಅನುಕೂಲವಾಗಿದ್ದು  ಕುರುಮರಡಿಕೆರೆಯಲ್ಲಿ ನೀರಿದ್ದರೆ ಬೋರ್ ವೆಲ್ ನೀರಿಗೆ ಸಮಸ್ಯೆ ಇಲ್ಲಪ್ಪ ಎಂಬ ಭಾವನೆ ಜನರಲ್ಲಿರುವುದರಿಂದ  ಎಲ್ಲಾ ರೈತರ ಖುಷಿ ಜೊತೆಗೆ 2-3 ವರ್ಷ ಬೆಳೆ ಬೆಳೆಯಬಹುದು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours