ಶಾಸಕ ಟಿ.ರಘುಮೂರ್ತಿ ಅವರ ಸೂಚನೆಯಂತೆ ಸುಗಮವಾಗಿ ಅಂಗನವಾಡಿ ಕಟ್ಟಡ ಪ್ರಾರಂಭ:ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ 16 ಲಕ್ಷ ವೆಚ್ಚದಲ್ಲಿ ನೂತನ ಅಂಗನವಾಡಿ ಕಾಮಗಾರಿಗೆ  ಸಂಬಂಧಿಸಿದಂತೆ ಹಲವು  ತಿಂಗಳಿಂದ ಈ ಕಟ್ಟಡ ಕಾಮಗಾರಿಗೆ   ಸಂಬಂಧಿಸಿದಂತೆ ಗ್ರಾಮದ ಎರಡು ಗುಂಪುಗಳ‌ ನಡುವೆ ಬಿನ್ನಭಿಪ್ರಾಯದಿಂದ  ನೆನೆಗುದಿಯಲ್ಲಿ ಇತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಟಿ.ರಘುಮೂರ್ತಿ ಅವರು ಗ್ರಾಮದ ಎರಡು ಗುಂಪುಗಳ ಜೊತೆ ಚರ್ಚಿಸಿ ಎರಡು ಗುಂಪುಗಳನ್ನು  ವಿಶ್ವಾಸಕ್ಕೆ ತೆಗೆದುಕೊಂಡು  ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದ್ದರು.

 

 

ಇದಕ್ಕೆ ಸಂಬಂಧಿಸಿದ ಶಾಸಕರ ಸೂಚನೆ ಮೇರೆಗೆ  ತಹಶೀಲ್ದಾರ್ ಎನ್.ರಘುಮೂರ್ತಿ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ  ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಅವರು   ಶಾಸಕರು ಸರ್ಕಾರದಿಂದ ಅನುದಾನ ತಂದಿದ್ದು ಅದು ಸಫಲವಾಗಬೇಕು ಎಂಬ ದೃಷ್ಟಿಯಿಂದ ಇಂದು  ಗೋಪನಹಳ್ಳಿಗೆ ಭೇಟಿ ನೀಡಿದ್ದೇನೆ‌  ಹಲವು ಬಾರಿ ವಿವಾದವನ್ನು ಬಗೆಹರಿಸಲು ಗ್ರಾಮಕ್ಕೆ ಬಂದಾಗಲೂ ಕೂಡ ಕೆಲವರು ಅಡ್ಡಿಪಡಿಸಿ ಕೆಲಸ ನಿಲ್ಲಿಸಿದ್ದರು. ಒಂದು ಸುತ್ತಿನ ಮಾತುಕತೆಯನ್ನು ಶಾಸಕರು ಮುಗಿಸಿದ್ದು ಕಾಮಗಾರಿ ಪ್ರಾರಂಭ ಹಂತದಲ್ಲಿ ಯಾರು ಅಡ್ಡಿಪಡಿಸಬಾರದು ಎಂದು ಭೇಟಿ ನೀಡಿದ್ದೇನೆ. ಸರ್ಕಾರದ  ಹಣ ವಾಪಸ್ ಹೋದರೆ  ಗ್ರಾಮದ ನಾಗರಿಕರಿಗೆ ಹೆಚ್ಚಿನ ನಷ್ಟವಾಗಲಿದ್ದು  ಸರ್ಕಾರದ ಯೋಜನೆಗಳಿಗೆ ಅಡ್ಡಿಪಡಿಸುವುದು. ಈ  ನಿಟ್ಟಿನಲ್ಲಿ ಯಾರಾದರೂ ಅಡ್ಡಿಪಡಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಗ್ರಾಮಸ್ಥರು ಸಹ ಇಂದು ಯಾರು ಸಹ ಅಡ್ಡಿ ಮಾಡದಿರವುದು ಸಂತೋಷ ತಂದಿದೆ. ಎಲ್ಲಾ ಗ್ರಾಮದಲ್ಲಿ ಸಹ ಅಭಿವೃದ್ಧಿಗೆ ಯಾರು ಅಡ್ಡಿಪಡಿಸಬಾರದು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ  ಅಧಿಕಾರಿ ಕೃಷ್ಣಪ್ಪ, ರಾಜಶ್ವ ನಿರೀಕ್ಷಕ ಲಿಂಗೇಗೌಡ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours