ಬುದ್ದಿಶಕ್ತಿಯಲ್ಲಿ ಸಾಮಾನ್ಯ ವ್ಯಕ್ತಿಗಳಿಗಿಂತ ವಿಕಲಚೇತನರೆ ಸ್ಟ್ರಾಂಗ್:ಶಾಸಕ ಟಿ.ರಘುಮೂರ್ತಿ ಪ್ರಶಂಸೆ

 

 

 

 

ಚಳ್ಳಕೆರೆ-05:ಸರ್ಕಾರದ ಸೌಲಭ್ಯಗಳನ್ನು  ಸದ್ಬಳಕೆ ಮಾಡಿಕೊಂಡು ಎಲ್ಲಾರಂತೆ ವಿಕಲಚೇತನರು ಬದುಕು ಕಟ್ಟಿಕೊಳ್ಳಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ಶಾಸಕರ ಭವನದಲ್ಲಿ ಅಂಗವಿಕಲ ಕಲ್ಯಾಣ ಇಲಾಖೆ ಆಯೋಜಿಸಿದ್ದ  ಯಂತ್ರಚಾಲಿತ ದ್ವಿಚಕ್ರವಾಹನ, ಎಸ್ ಎಸ್ ಎಲ್‌ ಸಿ‌ ನಂತರದ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲು ಲ್ಯಾಪ್‌ಟಾಪ್,ಹೊಲಿಗೆ ಯಂತ್ರ ಮುಂತಾದ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.

ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಅನುದಾನದಡಿ 75 ಲಕ್ಷ ಅನುದಾನದಲ್ಲಿ  ಚಳ್ಳಕೆರೆ ತಾಲೂಕಿಗೆ  86 ತ್ರಿಚಕ್ರ ವಾಹನ ಮತ್ತು 5 ಲಕ್ಷ  ಅನುದಾನದಲ್ಲಿ ವಿಕಲಚೇತನ  ಇಲಾಖೆ ಅನುದಾನದಡಿ 2021-22 ನೇ ಸಾಲಿನ 6 ತ್ರಿಚಕ್ರ ವಾಹನ ವಿತರಿಸಲಾಗಿಸೆ.    ಅಂಕಲವಿಕಲ ಕಲ್ಯಾಣ ಇಲಾಖೆಯಿಂದ   ದೃಷ್ಟಿ ದೋಷ ವಿಕಲಚೇತನ  ಎಸ್ ಎಸ್ ಎಲ್ ಸಿ ಮಕ್ಕಳಿಗೆ  4 ಟಾಕಿಂಗ್ ಲ್ಯಾಪ್ ಟಾಪ್ ಮತ್ತು ಒಂದು ಬ್ರೈಲ್ ಕಿಟ್ ವಿತರಣೆ ಮಾಡಿದ್ದು‌  ಮಕ್ಕಳು ಇದರ ಸದುಪಯೋಗ ಮಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಎಂದು ತಿಳಿಸಿದರು.

 

 

50 ಸಾವಿರ ಬಾಂಡ್‌:ವಿಕಲಚೇತನ ವ್ಯಕ್ತಿಯನ್ನು  ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ 50 ಸಾವಿರದ ಬಾಂಡ್ ನೀಡುತ್ತಿದ್ದು ಇದು  ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ವಿಕಲಚೇತನರು ಸಹ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಈ ಸೌಲಭ್ಯಗಳನ್ನು ನೀಡಿದ್ದು ಅವುಗಳ ಬಳಕೆ ಉತ್ತವವಾಗಿರಲಿ ಎಂದರು. ಸರ್ಕಾರದಿಂದ ಉತ್ತಮ ಸೌಲಭ್ಯಗಳನ್ನು ನೀಡುತ್ತಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮುಖಾಂತರ ಬದುಕು ಹಸನು ಮಾಡಿಕೊಳ್ಳಬೇಕು. ವಿಕಲಚೇತನರು ದೈಹಿಕವಾಗಿ ನ್ಯೂನತೆ ಹೊಂದಿದ್ದರು ಮಾನಸಿಕವಾಗಿ ತುಂಬಾ ಸಬಲರಾಗಿರುತ್ತಾರೆ. ಯಾವುದೇ ಕೆಲಸ ಕೊಟ್ಟರು ಸಾಮಾನ್ಯ ವ್ಯಕ್ತಿಗಳಿಗಿಂತ ಅಚ್ಚಕಟ್ಟಾಗಿ ಮಾಡುತ್ತಾರೆ. ತಮ್ಮಲಿನ ವಿಶೇಷ ಸಾಮರ್ಥ್ಯದಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ವಿಕಲಚೇತನರಿಗೆ ಇನ್ನಷ್ಟು ಸರ್ಕಾರಿ ಸೌಲಭ್ಯ ನೀಡಿದರೆ ಸಮಾಜದಲ್ಲಿ ಮತ್ತಷ್ಟು ಬಲಿಷ್ಠರಾಗಲು ಸಹಕಾರಿ ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ವೈಶಾಲಿ, ತಾಲ್ಲೂಕು ಅಧಿಕಾರಿ ನರಸಿಂಹಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷೆ ಮಂಜುಳಾ ಆರ್ ಪ್ರಸನ್ ಕುಮಾರ್, ನಗರಸಭೆ ಸದಸ್ಯರಾದ ಪ್ರಕಾಶ್, ಮಲ್ಲಿಕಾರ್ಜುನ, ವೀರಭದ್ರಪ್ಪ, ಶ್ರೀಮತಿ ಜೈ ತುಂಬಿ, ರಾಘವೇಂದ್ರ, ಮುಖಂಡರುಗಳಾದ ಹನುಮಂತಪ್ಪ , ವೀರೇಶ್ , ನಾಗರಾಜ್, ರಾಜಪ್ಪ, ಮಾಜಿ ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ಶೈಲಪ್ಪ ,ಓಬಣ್ಣ, ಕಿಸಾನ್ ಜಿಲ್ಲಾಧ್ಯಕ್ಷರಾದ ನಾಗರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಸ್ವಾಮಿ, ದೊಡ್ಡ ರಂಗಪ್ಪ ನಾಗರಾಜ, ಉಮೇಶ್, ರಾಮಣ್ಣ, ಜಗದೀಶ್ ಮತ್ತು ಮುಖಂಡರುಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಗೂ ಅಂಗವಿಕಲ ಫಲಾನುಭವಿಗಳ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours