ಕಂಪ್ಯೂಟರ್ ಶಿಕ್ಷಣದಿಂದ ಉದ್ಯೋಗ ಅವಕಾಶಗಳು ಹೆಚ್ಚು :ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಆಧುನಿಕ ಜಗತ್ತಿನತ್ತ  ದಾಪುಗಾಲು ಇಡುತ್ತಿರುವ ಇಂದಿನ ಸುಸಂದರ್ಭದಲ್ಲಿ ಪ್ರತಿಯೊಬ್ಬ  ವಿದ್ಯಾರ್ಥಿಗಳಿಗೆ  ಕಂಪ್ಯೂಟರ್ ಶಿಕ್ಷಣ ಹಾಗೂ ಜ್ಞಾನ ಅಗತ್ಯವಾಗಿದ್ದು ಶ್ರದ್ಧೆಯಿಂದ ಕಲಿತರೆ  ಉದ್ಯೋಗ ಮಾರ್ಗಕ್ಕೆ ಹೆಚ್ಚು ಅವಕಾಶಗಳಿವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ  ಸರ್ಕಾರಿ ಕಲಾ ಕಾಲೇಜು ನ್ಯಾಕ ‘ಬಿ’ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಪರಂಪರೆ ದಿನಾಚರಣೆ ಹಾಗೂ  ನೂತನ ಗಣಕಯಂತ್ರ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಹಂತದಿಂದಲೆ ಕಂಪ್ಯೂಟರ್ ಶಿಕ್ಷಣ ಇಂದಿನ ಮಕ್ಕಳಿಗೆ ಅವಶ್ಯವಾಗಿದೆ. ಶಿಕ್ಷಣದ ಜತೆಗೆ ಕಂಪ್ಯೂಟರ್ ಶಿಕ್ಷಣ ಪಡೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಲ್ಲಿ  ಕಂಪ್ಯೂಟರ್ ಶಿಕ್ಷಣವಿದ್ದರೆ ಉದ್ಯೋಗ ಸುಲಭವಾಗಿ ದೊರಕುತ್ತದೆ. ಸಾವಿರಾರು ಜನರು ಕಂಪ್ಯೂಟರ್ ಟೈಪಿಂಗ್, ಟಾಟ ಎಂಟ್ರಿ, ಪತ್ರ ವ್ಯವಹಾರಗಳನ್ನು ಕಲಿತು ನಿತ್ಯ ಸಾವಿರಾರು ರೂಪಾಯಿ ದುಡಿಮೆ ಮಾಡಿ ತಮ್ಮ ಬದುಕು ಕಂಡಿರುವ ನಿದರ್ಶನಗಳು ನಮ್ಮ ನಗರದಲ್ಲಿ ಸಾಕಷ್ಟು ಜನರನ್ನು ತಾವುಗಳು ಗಮನಿಸಬಹುದು ಎಂದರು.
ರೋಟರ್ ಇನ್ನರ್ ವಿಲ್  ಕ್ಲಬ್ ವತಿಯಿಂದ ಕಾಲೇಜಿಗೆ ಕೊಡುಗೆಯಾಗಿ 40 ಕಂಪ್ಯೂಟರ್ ನೀಡಿರುವುದು ತುಂಬಾ ಸಂತೋಷದ ವಿಷಯ ನನ್ನ ಕಡೆಯಿಂದ ಅಭಿನಂದನೆ ಸಲ್ಲಿಸಿತ್ತೇನೆ ಮತ್ತು  ಸರ್ಕಾರದಿಂದ 48 ಕಂಪ್ಯೂಟರ್  ಒಟ್ಟು 88 ಕಂಪ್ಯೂಟರ್ ನೂತನ ಲ್ಯಾಬ್ ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು   ಕಂಪ್ಯೂಟರ್ ತರಬೇತಿಗೆ ಮೀಲಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 
ವಿದ್ಯಾರ್ಥಿಗಳು  ಖಾಸಗಿಯಾಗಿ ಕಂಪ್ಯೂಟರ್ ಶಿಕ್ಷಣವನ್ನು ಪಡೆಯಲು ಸಾವಿರಾರು ರೂಪಾಯಿ ಹಣ ವ್ಯಯ ಮಾಡಬೇಕು. ಜೊತೆಗೆ ಸಮಯ ಹೊಂದಾಣಿಕೆ ಆಗದೇ ಎಷ್ಟೋ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿದ್ದು  ಅಂತಹ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಕಾಲೇಜಿನಲ್ಲಿ ಕಂಪ್ಯೂಟರ್ ಶಿಕ್ಷಣ ದೊರಕುವುದು ಸದವಕಾಶ ಎಂದು ಹೇಳಬಹುದು.
 
ತರಬೇತಿ ಉತ್ತಮ ಶಿಕ್ಷಕರ ನೇಮಕಕ್ಕೆ ಸೂಚನೆ: ಕಂಪ್ಯೂಟರ್ ತರಬೇತಿಯಲ್ಲಿ ಪರಿಣಿತಿ ಹೊಂದಿದವರಿಂದ ಕಂಪ್ಯೂಟರ್ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೊಡಿಸಬೇಕು. ವಿದ್ಯಾರ್ಥಿಗಳಿಗೆ ಸಮಯದ ನಿಗದಿ ಮಾಡಿ ಗುಂಪುಗಳಾಗಿ ವಿಂಗಡಿಸಿ ಅಚ್ಚುಕಟ್ಟಾಗಿ ಕಂಪ್ಯೂಟರ್ ಅಧ್ಯಯನಕ್ಕೆ ವ್ಯವಸ್ಥೆ ಮಾಡಬೇಕು. ಸಮಯ ನಿಗದಿಯಿಂದ ಎಲ್ಲಾರಿಗೂ ಕಂಪ್ಯೂಟರ್ ತರಬೇತಿಗೆ ಅನುಕೂಲವಾಗುತ್ತದೆ ಎಂದು ಪ್ರಾಂಶುಪಾಲರಿಗೆ ಸೂಚಿಸಿದರು. 
 
ಪರಂಪರೆ ದಿನಾಚರಣೆ ಶುಭಾಷಯ ಕೋರಿದ ಶಾಸಕರು: ನಮ್ಮ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲಾ ಯುವ ಸಮೂಹ ಮಾಡಬೇಕಿದೆ.  ಎಲ್ಲಾ ದೇಶಗಳು ನಮ್ಮ ಪರಂಪರೆಯನ್ನು  ಇಷ್ಟ ಪಡುತ್ತವೆ. ಹೆಣ್ಣು ಮತ್ತು ಗಂಡಿನ ಪರಂಪರೆಯ  ಉಡುಪುಗಳು ಭಾರತದಲ್ಲಿ ತುಂಬಾ ಆಕರ್ಷಣೆಯಿಂದ ಕಾಣುತ್ತವೆ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ತಿಳಿಸಿದರು‌.
 
ಈ‌ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ‌.ಆರ್.ರಂಗಪ್ಪ, ವಿಶ್ರಾಂತ ಪ್ರಾಂಶುಪಾಲರಾದ ಪ್ರೋ.ಸಜ್ಜಾತ್, ಉಪಾನ್ಯಾಸಕರಾದ ಡಾ.ಮಧುಸೂದನ, ಎಲ್.ನಾಗರಾಜಪ್ಪ, ಹೆಚ್.ರಂಗಸ್ವಾಮಿ, ಎನ್ ಸಿಸಿ ವಿಭಾಗದ ಡಾ.ಎಸ್.ಆರ್.ಲೇಪಾಕ್ಷ, ಎನ್‌ ಎಸ್ಎಸ್ ವಿಭಾಗದ ಅಶ್ವಥ್, ಕ್ರೀಡಾ ವಿಭಾಗದ ಶಾಮ್ ರಾವ್ ಇದ್ದರು‌.
[t4b-ticker]

You May Also Like

More From Author

+ There are no comments

Add yours