ಕಿಚ್ಚ ಸುದೀಪ್ ಸಾಮಾಜಿಕ ಕಳಕಳಿ ಸೇವೆ ಅನನ್ಯ: ತಹಶೀಲ್ದಾರ್ ಎನ್‌.ರಘುಮೂರ್ತಿ

 

 

 

 

ಚಳ್ಳಕೆರೆ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಸಾಮಾಜಿಕ ಕಳಕಳಿಯ ಸೇವೆಗಳು ತುಂಬಾ ಅನನ್ಯವಾದದ್ದು  ಸಮಾಜದಲ್ಲಿರುವ ಎಲ್ಲಾ  ವ್ಯಕ್ತಿಗಳು  ನಿಸ್ವಾರ್ಥ ಸೇವೆ ಜನೋಪಯೋಗಿ ಸೇವೆ ಮಾಡಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

 

 

ಇಂದು ಕಿಚ್ಚ ಸುದೀಪ ಅವರ ಜನ್ಮದಿನದ ಪ್ರಯುಕ್ತ ಚಳ್ಳಕೆರೆ ನಗರದ ಬನಶ್ರೀ ವೃದ್ಧಾಶ್ರಮದಲ್ಲಿ ಏರ್ಪಡಿಸಿದ್ದಂತಹ ಸಮಾರಂಭದಲ್ಲಿ ಮಾತನಾಡಿ  ಅರ್ಪಣಾ ಮನೋಭಾವದ ಸೇವೆಗಳು,  ಬದುಕಿದ ನಂತರವೂ ಕೂಡ ನಮ್ಮನ್ನು ಬಿಟ್ಟು ದೂರ ಹೋಗುವುದಿಲ್ಲ. ದುರದೃಷ್ಟವಶಾತ್ ಇಂತಹ ವ್ಯಕ್ತಿಗಳು ಬದುಕಿದ್ದಾಗಲೇ ಇವರುಗಳ ಸೇವೆಗಳನ್ನು ಸಮಾಜಕ್ಕೆ ತಿಳಿ ಹೇಳಬೇಕು.

ಈ ರೀತಿ ಕೆಲಸ ಮಾಡಿ ಇವರುಗಳಿಗೆ ಶಕ್ತಿ ತುಂಬಿದಲ್ಲಿ ಸಮಾಜದ ಇನ್ನಷ್ಟು ಕೆಲಸಗಳನ್ನು ಮಾಡಲು ಪ್ರೇರಣೆ ನೀಡುತ್ತದೆ.  ಪುನೀತ್ ರಾಜಕುಮಾರ್ ಬದುಕಿದ್ದಾಗಲೇ ಅವರ ಸಾಮಾಜಿಕ ಸೇವೆಗಳು ಜನರಿಗೆ ಏನಾದರೂ  ಗೊತ್ತಾಗಿದ್ದಲ್ಲಿ ಅವರ ಜೀವಿತ ಅವಧಿಯಲ್ಲಿ ಅವರ ಗುಡಿಗಳನ್ನು ಕಟ್ಟಿಸಿ ಜನರು ಆರಾಧಿಸುತ್ತಿದ್ದರು. ದುರಾದೃಷ್ಟವಶಾತ್ ಅವರು ಕಾಲವಾದ ನಂತರ ಅವರ ಸಮಾಜಮುಖಿ  ಕಾರ್ಯಗಳು ಜನರಿಗೆ ತಿಳಿಯಿತು.  ಈ ಬಗ್ಗೆ ನಮ್ಮೆಲ್ಲರಿಗೂ ಕೂಡ ತುಂಬಾ ನೋವಿದೆ ಇಂತಹ ವ್ಯಕ್ತಿಗಳು ಇವರುಗಳು ಕಾಲವಾದ ನಂತರವೂ ಕೂಡ ಸಮಾಜದಲ್ಲಿ ಬದುಕಿರುತ್ತಾರೆ.  ಸಮಾಜದಲ್ಲಿರುವ ನಾವೆಲ್ಲರೂ ಕೂಡ ಇಂತಹ ವ್ಯಕ್ತಿಗಳ ಆದರ್ಶ ಗುಣಗಳನ್ನು ಮತ್ತು ಆದರ್ಶ ಸತ್ಕಾರ್ಯಗಳನ್ನು ಮಾಡುವುದರ ಮೂಲಕ ಸಮಾಜದಲ್ಲಿ ನಮ್ಮಗಳ ಹೆಜ್ಜೆ ಗುರುತನ್ನು ಮೂಡಿಸಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಕಿಚ್ಚ ಸುದೀಪ್ ಟ್ರಸ್ಟ್ ನ ಅಧ್ಯಕ್ಷರದಂತಹ ರಾಘವೇಂದ್ರ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours