ಮುರುಘಾ ಮಠದ ಪರ ವಕೀಲ ವಿಶ್ವನಾಥಯ್ಯ ಹೇಳಿದ್ದೇನು.

 

 

 

 

ಚಿತ್ರದುರ್ಗ:  ಮುರುಘಾ ಮಠದ ಬಳಿ ವಕೀಲ ವಿಶ್ವನಾಥಯ್ಯ ಹೇಳಿಕೆ ನೀಡಿದ್ದು. 
ಮುರುಘಾಮಠ ಶಿವಮೂರ್ತಿ ಮುರುಘಾ  ಶರಣರ ವಿರುದ್ದ ಪೋಕ್ಸೋ ಕಾಯ್ದೆ ಮೈಸೂರಿನಲ್ಲಿ ಪ್ರಕರಣ ದಾಖಲು ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಬಳಿ ವಕೀಲ ವಿಶ್ವನಾಥಯ್ಯ  ಮಾತನಾಡಿದ್ದು   “ಮಾಧ್ಯಮಗಳಲ್ಲಿ ಬಂದ ಸುದ್ದಿಯಿಂದ ಸ್ವಾಮೀಜಿ ಅವರಿಗೆ ನೋವಾಗಿದೆ. ಮಕ್ಕಳು ಮೈಸೂರು ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರ ಗೊತ್ತಾಗಿದೆ. ದೂರಿನ ಪೂರ್ಣ ವಿವರ ನಮಗೆ ಗೊತ್ತಿಲ್ಲ. ಇದರಿಂದ ಸ್ವಾಮೀಜಿ ಅವರಿಗೆ ಬಹಳ ನೋವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಆದರೆ ಯಾವುದೋ ಮಠದ ವಿರೋಧಿ ಶಕ್ತಿ ಅತಿ ಆಸೆಯಿಂದ ಇಂಥ ಕೆಲಸ ಮಾಡಿರಬಹುದು. ಮಕ್ಕಳನ್ನು ದುರ್ಬಳಕೆ ಮಾಡಿಕೊಂಡು ದೂರು ನೀಡಿದ್ದಾರೆ” ಎಂದು ಟೀಕಿಸಿದ್ದಾರೆ.

 

 

ದೂರಿನ ಹಿಂದೆ ವಿರೋಧಿ ಶಕ್ತಿಗಳ ಕೈವಾಡ
“ಇದರ ಹಿಂದೆ ವಿರೋಧಿ ಶಕ್ತಿಗಳ ಕೈವಾಡ ಇದೆ ಎಂದು ತಿಳಿದು ಬಂದಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಹೆಚ್ಚಿನದಾಗಿ ದೂರಿನ ಅಂಶಗಳು ಬಂದ ಮೇಲೆ ಸ್ವಾಮೀಜಿ ಮಾತನಾಡುತ್ತಾರೆ. ಈ ಕುರಿತು ಕಾನೂನು ಹೋರಾಟ ಮಾಡುತ್ತೇವೆ. ಅವರು ತಪ್ಪು ದೂರು ನೀಡಿದ್ದರೆ ಮುರುಘೇಶ ಅವರಿಗೆ ಬುದ್ದಿ ನೀಡಲಿ. ತಪ್ಪಿನ ಅರಿವಾಗಿ ಅವರು ಕೇಸ್ ವಾಪಸ್ ಪಡೆಯಲಿ. ಎಲ್ಲಾ ಭಕ್ತರ ಸಮೂಹದ   ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು  ಚಿತ್ರದುರ್ಗದ ಮುರುಘಾ ಮಠದ ಬಳಿ ವಕೀಲ ವಿಶ್ವನಾಥಯ್ಯ ಎಂದು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours