ವಿದ್ಯಾರ್ಥಿಗಳು ವೈಫಲ್ಯಗಳಿಗೆ ಕುಗ್ಗದೆ ಕಠಿಣ ಪರಿಶ್ರಮದಿಂದ ಮುನ್ನೆಡೆಯಬೇಕು: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ವಿದ್ಯಾರ್ಥಿಗಳು ವೈಫಲ್ಯಗಳಿಗೆ ಬೆನ್ನು ತೋರಿಸದೆ  ಸಮರ್ಥವಾಗಿ ಎದುರಿಸಿ ಕಠಿಣಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಅಧ್ಯಯನ ಮಾಡಬೇಕು  ಎಂದು  ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.

ತಾಲೂಕಿನ  ಬೇಡ ರೆಡ್ಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ   ಮಾತನಾಡಿ ವಿದ್ಯಾರ್ಥಿಗಳು ಆರಂಭದ ದಿನದಿಂದಲೇ ಕ್ರಮಬದ್ಧವಾದ ಅಧ್ಯಯನ ಮಾಡಬೇಕು. ಕೆಲವೊಮ್ಮೆ ವೈಫಲ್ಯಗಳು ಸಹಜ ಆದರೆ ಇವುಗಳು ಒಂದು ಸಣ್ಣ ಘಟನೆಗಳು ಅಷ್ಟೇ.  ಇವುಗಳನ್ನು ಮೆಟ್ಟಿ ನಿಂತು  ವಿಚಲಿತರಾಗದೆ.  ಇವುಗಳನ್ನು  ಸವಾಲಾಗಿ ಸ್ವೀಕರಿಸಿ ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತಿಸಿಕೊಳ್ಳಬೇಕು.

 

 

ಒಂದು ಮಲ್ಲಿಗೆ ಹೂವಿನ ಆಯಸ್ಸು ಒಂದು ದಿನ ಮಾತ್ರ ಹಸಿರು ಗರಿಕೆಯ ಆಯಸ್ಸು ಕೆಲವೇ ದಿನಗಳು ಮಾತ್ರ .  ಹಸನ್ಮುಖದಿಂದ ನಗುತಿರುತ್ತವೆ.  ವಿದ್ಯಾರ್ಥಿಗಳು  ಉನ್ನತ ಶಿಕ್ಷಣಗಳ ಜೊತೆ ಮೌಲ್ಯದಾರಿತ ಮತ್ತು ಆಧ್ಯಾತ್ಮಿಕ ಶಿಕ್ಷಣದ ಕಡೆ ಒತ್ತು ನೀಡಬೇಕು.  ಜೊತೆಯಲ್ಲಿ ಜೀವನದಲ್ಲಿ ಬರುವಂತಹ ಸವಾಲುಗಳನ್ನು ಎದುರಿಸಿ ನಿಲ್ಲುವಂತಹ ಶಿಕ್ಷಣವನ್ನು ಕೂಡ ಇಂದಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುವ ಅನಿವಾರ್ಯತೆ ಇದೆ ಎಂದು ಹೇಳಿದರು.

ಸಮಾರಂಭದಲ್ಲಿ ರಾಘವೇಂದ್ರ ರೆಡ್ಡಿ ಎಸ್ ಪಿ ಭೀಮಾರೆಡ್ಡಿ ಸತೀಶ್ ರೆಡ್ಡಿ ,  ಉಮಾದೇವಿ ಮತ್ತು ಶಶಿಕಲಾ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours