ಮಾದರಿ ಮನೆಯ ನಿರ್ಮಾಣ ಜನರಿಗೆ ಹೆಚ್ಚು ಅನುಕೂಲ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಆಗಸ್ಟ್ -26: ಮಾದರಿ ಮನೆಯ ನಿರ್ಮಾಣ ಜನರಿಗೆ ಮನೆ ‌ನಿರ್ಮಾಣದ  ಖರ್ಚು ವೆಚ್ಚದ ಕಡಿವಾಣಕ್ಕೆ ಆಸರೆಯಾಗಲಿದೆ  ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ನಗರದ  ತಾಲ್ಲೂಕು ಪಂಚಾಯತಿ ಆವರಣದಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್  ( ಗ್ರಾಮೀಣ ) ವಸತಿ ಯೋಜನೆಯಡಿ  ಮಾದರಿ ಮನೆ  ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿ  ಮಾತನಾಡಿದರು.
ಜನರಿಗೆ ಮನೆ ಕಟ್ಟವುದು ಜೀವಮಾನದ ಒಂದು ಕನಸಾಗಿರುತ್ತದೆ. ಮನೆಯ ಕನಸು ನನಸು ಮಾಡಲು ಸಾಕಷ್ಟು ಕಷ್ಟಪಡುತ್ತಿದ್ದು ಇಂತಹ ಜನರಿಗೆ ಮಾದರಿ ಮನೆ ನಿರ್ಮಾಣ ಮಾಡುವ ಮೂಲಕ ಸರ್ಕಾರದಿಂದ ಬರುವ ಹಣದಲ್ಲಿ ಯಾವ ರೀತಿ ಮನೆ ನಿರ್ಮಾಣ ಮಾಡಿಕೊಂಡರೆ ಖರ್ಚು ವೆಚ್ಚ ಕಡಿಮೆ ಆಗುತ್ತದೆ ಎಂಬ  ಅರಿವ ಮೂಡಿಸಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಮಾದರಿ ಮನೆ ನಿರ್ಮಾಣ ಮಾಡಲಾಗುತ್ತದೆ.ಅದರಂತೆ ಇಂದು ಚಿತ್ರದುರ್ಗ ತಾಲೂಕು ಪಂಚಾಯಿತಿ ಆವರಣದಲ್ಲಿ ಮಾದರಿ ಮನೆ ನಿರ್ಮಾಣ ಮಾಡಿ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ವಸತಿ ಯೋಜನೆಯಲ್ಲಿ ಆಯ್ಕೆ ಆಗಿರುವ 1 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಂತ ಹಂತವಾಗಿ  30  ದಿನಗಳ ಕಾಲ ಮಾದರಿ ಮನೆಯ ತರಬೇತಿ  ಒದಗಿಸಲಾಗುವುದು.
ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ಫಲಾನುಭವಿಗಳಿಗೆ 1.75, ಉದ್ಯೋಗ ಖಾತ್ರಿಯಲ್ಲಿ 28410ರೂ,ಶೌಚಾಲಯ ನಿರ್ಮಾಣಕ್ಕಾಗಿ  15 ಸಾವಿರ ಒಟ್ಟು ಘಟಕ ವೆಚ್ಚ  2.18.400ರೂ ಆಗುತ್ತದೆ. ಅದೇ ರೀತಿಯಲ್ಲಿ  ಸಾಮಾನ್ಯ ವರ್ಗಕ್ಕೆ  1.31 .800, ಉದ್ಯೋಗ ಖಾತ್ರಿ-28410ರೂ, ಶೌಚಾಲಯ ನಿರ್ಮಾಣಕ್ಕೆ  12 ಸೇರಿ ಒಟ್ಟು ಘಟಕ ವೆಚ್ಚ 1.72.210 ರೂ ಒಬ್ಬ ಫಲಾನುಭವಿಗಳಿಗೆ  15-20 ಅಳತೆಯಲ್ಲಿ ಮನೆ ನಿರ್ಮಾಣ ಮಾಡಲಾಗುತ್ತದೆ ಎಂದರು.
ಮುಖ್ಯಮಂತ್ರಿ ಮನವಿ: ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಎಲ್ಲಾ ಶಾಸಕರು ಸೇರಿ ಮನೆಯ ನಿರ್ಮಾಣದ ಘಟಕ ವೆಚ್ಚವನ್ನು ಈ ಬಾರಿ ಬಜೆಟ್ ನಲ್ಲಿ ಕನಿಷ್ಠ 50 ಸಾವಿರ ಹೆಚ್ಚುವರಿ ವೆಚ್ಚ ಮಾಡಲು ಮನವಿ ಮಾಡಲಾಗುವುದು.
ಈ ಸಂದರ್ಭದಲ್ಲಿ  ತಾಲ್ಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಣಧಿಕಾರಿ ಹನುಮಂತಪ್ಪ, ಸಹಾಯಕ ನಿರ್ದೇಶಕ ಧನಂಜಯ ಮತ್ತು ಎಲ್ಲಾ  ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
[t4b-ticker]

You May Also Like

More From Author

+ There are no comments

Add yours