ಗೌರಸಮುದ್ರ ದೇವಸ್ಥಾನದ ಹುಂಡಿಯಲ್ಲಿ 2.92.107ರೂ ಸಂಗ್ರಹ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಶ್ರೀಗೌರಸಮುದ್ರ ಮಾರಮ್ಮ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ
ಚಳ್ಳಕೆರೆ: ತಾಲ್ಲೂಕಿನ ಶ್ರೀಗೌರಸಮುದ್ರ  ಮಾರಮ್ಮ ದೇವಸ್ಥಾನದಲ್ಲಿ ಇಂದು ಕಂದಾಯ ಇಲಾಖೆ ಗ್ರಾಮಪಂಚಾಯಿತಿ ವತಿಯಿಂದ ತಹಶೀಲ್ದಾರ್  ಎನ್.ರಘುಮೂರ್ತಿ ನೇತೃತ್ವದಲ್ಲಿ ಕಾಣಿಕೆ ಹುಂಡಿ ಎಣಿಕೆ ಕಾರ್ಯವನ್ನು   ಹಮ್ಮಿಕೊಂಡಿದ್ದರು.

 

 

ದೇವಸ್ಥಾನದಲ್ಲಿ ಪೂಜೆಯ ನಂತರ ದೇವಸ್ಥಾನದಲ್ಲಿ ತಹಶೀಲ್ದಾರ್  ಮತ್ತು  ಪೋಲೀಸ್ ಇಲಾಖೆ,   ಕಂದಾಯ ಇಲಾಖೆ ಕಾಣಿಕೆ ಹುಂಡಿಯ ಬೀಗ ತೆಗೆದು ಅದರಲ್ಲಿ ಶೇಖರಣೆಯಾಗಿದಂತಹ ಕಾಣಿಕೆ ಹಣವನ್ನು   ಎಣಿಕೆ ಮಾಡಲಾಯಿತು.  ದೇವಸ್ಥಾನದಲ್ಲಿ ಒಟ್ಟು ಎರಡು  ದೊಡ್ಡದ ಹುಂಡಿ, ಎರಡು  ಚಿಕ್ಕ ಹುಂಡಿ  ಕಾಣಿಕೆ  ಇದ್ದು ಎಲ್ಲಾ ಹುಂಡಿಯಲ್ಲಿದ್ದ ಹಣ ಎಣಿಕೆ ಮಾಡಲಾಗಿದೆ. ಒಟ್ಟು 2. 92.700ರೂ  ಸಂಗ್ರಹವಾಗಿದೆ.

ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದಲ್ಲಿ ಪಾಲ್ಗೂಂಡು ನಂತರ ಮಾತನಾಡಿದ ತಹಶೀಲ್ದಾರ್  ಎನ್.ರಘುಮೂರ್ತಿ ಮಾತನಾಡಿ  ಜಿಲ್ಲಾಧಿಕಾರಿಗಳ ಆದೇಶದಂತೆ ಗೌರಸಮುದ್ರ ಮಾರಮ್ಮ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ  ಎಣಿಕೆ ಕಾರ್ಯವನ್ನು ಹಮ್ಮಿಕೊಂಡಿದ್ದು 29 ರಿಂದ ಗೌರಸಮುದ್ರ ಮಾರಮ್ಮ ಜಾತ್ರೆ ಪ್ರಾರಂಭವಾಗಲಿದ್ದು ಇದರೆ ಹಿನ್ನೆಲೆ ಪ್ರತಿ ವರ್ಷವು ಜಾತ್ರೆಗೆ ಮುನ್ನವೇ ಕಾಣಿಕೆ ಎಣಿಕೆಯನ್ನು ಮಾಡಲಾಗುವುದು.ಅದರಂತೆ ಇಂದು ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಿಂದ ಈ ದೇವಿಯ ಕಾಣಿಕೆ ಹಣವನ್ನ ಎಣಿಸಲಾಗಿದೆ . ಹಾಗೂ ಜಾತ್ರೆಗೆ ಬರುವ ಭಕ್ತರಿಗೆ ಹಾಗೂ ಅಂಗಡಿ ಇತರೆ ಜಾಕಾತಿಯನ್ನು ಗ್ರಾಮಪಂಚಾಯಿತಿ ಹಾಗು ಇತರ ಕಂದಾಯ ಇಲಾಖೆಯಿಂದ ವಸೂಲಿ ಮಾಡಲಾಗುವುದು. ಅಂಗಡಿ ಹೋಟೆಲ್ ನಿಗದಿತ ಹಣವನ್ನು ಕೊಟ್ಟು ಸಹಕರಿಸಿ, ಜಾತ್ರೆಗೆ ಎಲ್ಲಾ ತಯಾರಿ ಮಾಡಿಕೊಳ್ಳಾಗಿದೆ ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours