ದೇಶದ ಬೆಳವಣಿಗೆಯಲ್ಲಿ ಕಟ್ಟಡ ಕಾರ್ಮಿಕರ  ಪಾತ್ರ ಅತಿ ಅಮೂಲ್ಯ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ ಆ. 18:
ದೇಶದ ಬೆಳವಣಿಗೆಯಲ್ಲಿ ಕಟ್ಟಡ ಕಾರ್ಮಿಕರ  ಪಾತ್ರ ಅತಿ ಅಮೂಲ್ಯವಾಗಿದೆ ಅವರು ಕೆಲಸ ಮಾಡದಿದ್ದರೆ ಯಾವುದೆ ಕಟ್ಟಡ, ಸೇತುವೆ, ಮನೆಗಳು ನಿರ್ಮಾಣವಾಗುತ್ತಿರಲಿಲ್ಲ ಎಂದು ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಅವರ ಕಾರ್ಯವನ್ನು ಸ್ಮರಿಸಿದರು.
ನಗರದ ಐ.ಎಂ.ಎ.ಹಾಲ್‌ನಲ್ಲಿAದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘ ಮೈಸೂರು ಇದರ ಚಿತ್ರದುರ್ಗ ಜಿಲ್ಲಾ ಮತ್ತು ನಗರ ಘಟಕದ ಸಂಘದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಶಾಸಕರು, ಚಿತ್ರದುರ್ಗ ನಗರದಲ್ಲಿ ೨-೩ ಸಂಘಗಳಿವೆ ಅದರಂತೆ ಕಾಮೀಕರ ಸಮಘಯೂ ಸಹಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರೋನಾ ಸಮಯದಿಂದ ಕಟ್ಟಡ ಕಾರ್ಮೀಕರ ಕೆಲಸ ಹೆಚ್ಚಾಗಿದೆ. ಕಟ್ಟಡ, ಸೇತುವೆ, ರಸ್ತೆಯನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಲಾಗಿದೆ. ದೇಶದ ಬೆಳವಣಿಗೆಯಲ್ಲಿ ನಿಮ್ಮಗಳ ಪಾತ್ರ ಅತಿ ಮುಖ್ಯವಾಗಿದೆ. ಅಲ್ಲದೆ ಪ್ರಮುಖವಾದ ಪಾತ್ರವನ್ನು ಸಹಾ ವಹಿಸಲಾಗಿದೆ ಎಂದು ಅವರ ಕಾರ್ಯವನ್ನು ಶ್ಲಾಘೀಸಿದರು.
ಸರ್ಕಾರ ನಿಮಗಾಗಿ ವಿವಿಧ ರೀತಿಯ ಸೌಲಭ್ಯವನ್ನು ನೀಡುತ್ತಿದೆ ಅದನ್ನು ನಿಮ್ಮ ಸಂಘಟನೆಯ ಮೂಲಕ ಪಡೆಯುವಲ್ಲಿ ಮುಂದಾಗಿ, ಇಲ್ಲಿ ಕೆಲಸ ಮಾಡುವವರೆ ಪದಾಧಿಕಾರಿಗಳಾಗಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇದರಿಂದ ಅವರ ನೋವು ಏನೆಂಬುದು ಗೂತ್ತಾಗಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಮೂಮದಾಗುತ್ತಾರೆ. ಬಿಜೆಪಿ ಸರ್ಕಾರ ಕಟ್ಟಡ ಕಾರ್ಮೀಕರಿಗಾಗಿ ಸಾವಿರಾರು ಕೋಟಿ ರೂಗಳನ್ನು ವಿವಿಧ ರೀತಿ ಯೋಜನೆಯಡಿ ನೀಡುತ್ತಿದೆ. ಮಕ್ಕಳ ವಿದ್ಯಾಭ್ಯಾಸ, ಉನ್ನತ ಶಿಕ್ಷಣಕ್ಕೆ ಸಹಾಯಧನ, ಮದುವೆ, ಆರೋಗ್ಯ, ವಿಕಲರಾದರೆ, ಮೃತಪಟ್ಟರೆ ಈ ರೀತಿಯಾದ ವಿವಿಧ ರೀತಿಯ ಸಹಾಯವನ್ನು ಮಾಡುತ್ತಿದೆ ಇದರ ಪ್ರಯೋಜನವನ್ನು ಪಡೆಯುವಂತೆ ಶಾಸಕ ತಿಪ್ಪಾರೆಡ್ಡಿ ಕರೆ ನೀಡಿದರು.
ಸರ್ಕಾರ ಮಕ್ಕಳ ಶಿಕ್ಷಣಕ್ಕೆ ವಿವಿಧ ರೀತಿಯ ಸಹಾಯವನ್ನು ಮಾಡುತ್ತಿದೆ ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳ ಶಿಕ್ಷಣವನ್ನು ಮೊಟಕುಗೂಳಿಸಬೇಡಿ, ನಿಮಗೆ ಎಷ್ಟೇ ಕಷ್ಟವಾದರೂ ಸಹಾ ಮಕ್ಕಳನ್ನು ಓದಿಸಿ, ಮುಂದೆ ಅವರಿಗೆ ಅದು ಅನುಕೂಲವಾಗಲಿದೆ. ಸರ್ಕಾರದಿಂದ ಸೌಲಭ್ಯ ಪಡೆಯುವುದು ದಾನವಲ್ಲ ಅದು ನಿಮ್ಮ ಹಕ್ಕು, ನಿಮಗೆ ಏನಾದರೂ ಸಮಸ್ಯೆಯಾದರೂ ನನ್ನ ಬಳಿ ಬನ್ನಿ ಪರಿಹಾರ ಮಾಡಿಕೂಡುವ ಭರವಸಯನ್ನು ನೀಡಿದ ಶಾಸಕರು, ನಿಮ್ಮ ಕೆಲಸ ಕಷ್ಟದ ಕೆಲಸವಾಗಿದೆ ಎತ್ತರವಾದ ಪ್ರದೇಶದಲ್ಲಿ ಯಾವುದೇ ಸಹಾಯವಿಲ್ಲದೆ ಕೆಲಸ ಮಾಡುವುದು ಧೈರ್ಯದ ಕೆಲಸವಾಗಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ರಾಜ್ಯಾಧ್ಯಕ್ಷರಾದ ಪಿ.ರಾಜು ಮಾತನಾಡಿ, ಚಿತ್ರದುರ್ಗ ಶಾಖೆ ೧೫ನೇ ಶಾಖೆಯಾಗಿ ಪ್ರಾರಂಭವಾಗಿದೆ. ನಮ್ಮ ಸೇವೆ ಕಟ್ಟಡ ಕಾಮೀಕರಿಗೆ ಉಚಿತವಾಗಿದೆ. ಅಜೀವ ಸದಸತ್ವವನ್ನು ಮಾತ್ರ ಪಡೆಯಬೇಕಿದೆ. ಒಮ್ಮೆಯಾದರೆ ಸಾಕು ಜೀವನ ಪೂರ್ತಿ ಸರ್ಕಾರದ ಸೌಲಭ್ಯವನ್ನು ಪಡೆಯಬಹುದಾಗಿದೆ. ನಿಮ್ಮ ಸಮಸ್ಯೆ ಏನೇ ಇದ್ದರೂ ಸಹಾ ಶಾಸಕರ ಗಮನಕ್ಕೆ ತನ್ನಿ ಅವರು ನಮೆಗ ದಂಡ ಇದ್ದಂತೆ ಅಧಿಕಾರಿಗಳಿಂದ ಕೆಲಸವನ್ನು ಮಾಡಿಸಿಕೊಡುತ್ತಾರೆ. ಇತ್ತೀಚಿನ ದಿನದಲ್ಲಿ ನಿಜವಾದ ಕಾರ್ಮಿಕರಿಗೆ ಸರ್ಕಾಋದ ಸೌಲಭ್ಯಗಳು ಸಿಗುತ್ತಿಲ್ಲ ಮನೆಯಲ್ಲಿ ಕುಳಿತು ಕೆಲಸ ಮಾಡದವರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿರುವುದು ವಿಷಾಧ ಸಮಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ವೇಣುಗೋಪಾಲ, ರಾಜ್ಯ ನಿರ್ದೇಶಕರಾದ ಪುಟ್ಟ ಮಾದಯ್ಯ, ರಾಜ್ಯ ಕಾರ್ಯದರ್ಶೀ ಆಂಥೊನಿರಾಜ್, ಜಿಲ್ಲಾಧ್ಯಕ್ಷ ನಾಗರಾಜ್ ಕೃಷ್ಣಾಪುರ, ಉಪಾಧ್ಯಕ್ಷ ಮೈಲಾರಪ್ಪ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಬಳ್ಳಾರಿ ಜಿಲ್ಲಾಧ್ಯಕ್ಷ ಅಂಜನೇಯ, ನಗರಾಧ್ಯಕ್ಷ ಚಂದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours