ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಇಂದಿನ ಯುವ ಪೀಳಿಗೆಗೆ ಸ್ವಾಭಿಮಾನ ತುಂಬುತ್ತವೆ:ಪ್ರೊ.ಎಸ್.ಸಂದೀಪ್

 

 

 

 

ಚಿತ್ರದುರ್ಗ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳು ಇಂದಿನ ಯುವ ಪೀಳಿಗೆಗೆ ಸ್ವಾಭಿಮಾನವನ್ನು ತುಂಬುತ್ತವೆ ಎಂದು ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್.ಸಂದೀಪ್ ಹೇಳಿದರು.
ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ವತಿಯಿಂದ ನಗರದ ಮಹಾರಾಣಿ ಕಾಲೇಜಿನ ಆವರಣದ ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವುದಕ್ಕೆ ತ್ಯಾಗ, ಬಲಿದಾನಗಳು, ಸಂಘರ್ಷ, ಹೋರಾಟಗಳು ನಡೆದಿವೆ. ಕೊನೆಯದಾಗಿ ಅಹಿಂಸೆ ಮೂಲಕ ನಮಗೆ ಸ್ವಾತಂತ್ರ್ಯದಕ್ಕಿದೆ. ಯುವಜನತೆ ಸ್ವಾತಂತ್ರ್ಯ ಹೋರಾಟ ಸಾಮಾಜಿಕ ರಾಜಕೀಯ ನೆಲೆಗಳಲ್ಲಿ ಇತಿಹಾಸ ಮತ್ತು ನಮ್ಮ ಭವ್ಯ ಪರಂಪರೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಅದು ಮುಂದಿನ ತೀರ್ಮಾನಗಳಿಗೆ ತಳಹದಿಯಾಗುತ್ತದೆ. ಇಲ್ಲದಿದ್ದರೆ ದುಡಿಕಿನ ನಿರ್ಧಾರಗಳಿಗೆ ಬಿದ್ದು ಪರಿತಪಿಸಬೇಕಾಗುತ್ತದೆ. ಇಂದಿನ ಯುವಕರಿಗೆ ಸ್ವಾತಂತ್ರ್ಯದ ನಿಜ ಅರ್ಥ, ಹೋರಾಟವನ್ನು ನೆನಪಿಸಿಕೊಡುವ ಕೆಲಸ ಈ 75ನೇ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಗುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ. “ಹರ್‍ಘರ್‍ತಿರಂಗಾ”ಕಾರ್ಯಕ್ರಮವು ಯುವಕರಲ್ಲಿ ಸ್ವಾಭಿಮಾನ, ದೇಶಪ್ರೇಮ ಹೆಚ್ಚಿಸುತ್ತದೆ. “ನಮ್ಮ ರಾಷ್ಟ್ರಧ್ವಜ ನಮ್ಮ ಹೆಮ್ಮೆ”. ನಮ್ಮರಾಷ್ಟ್ರಧ್ವಜವು ತ್ಯಾಗ, ಸತ್ಯ, ಶಾಂತಿ, ಪರಿಶುದ್ಧತೆ ಮತ್ತು ಸಸ್ಯ ಶ್ಯಾಮಲೆಯಾದ ಭೂಮಿಯ ಸಂಕೇತವಾಗಿದ್ದು ಕೃಷಿಯ ಸಮೃದ್ಧಿಯನ್ನು ಸೂಚಿಸುತ್ತದೆ. ಯಾವುದೇ ಧರ್ಮ, ಜಾತಿಯ ಬಣ್ಣಗಳನ್ನು ಅದು ಒಳಗೊಂಡಿಲ್ಲ ಎಂದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಭಾಷಣದಲ್ಲಿ ಪ್ರಥಮ ಸ್ಥಾನಷೇಕ್ ಮುತ್ತುರುಲ್ಲಾ, ದ್ವಿತೀಯ ಸ್ಥಾನ ಹೆಚ್. ಮಾರುತಿ ಪಡೆದರು. ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಪಥಸಂಚಲನಾ ನಡೆಸಲಾಯಿತು ಹಾಗೂ ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು. ಈ ಕಾರ್ಯಕ್ರಮಕ್ಕೆ ಸಂಸ್ಥೆ ಅಡಿಯಲ್ಲಿ ಬರುವ ಪ್ರಾಥಮಿಕ, ಮಾಧ್ಯಮಿಕ, ಪ್ರಥಮ ದರ್ಜೆಕಾಲೇಜು ಮತ್ತು ನರ್ಸಿಂಗ್ ಕಾಲೇಜುಗಳ  ಪ್ರಾಚಾರ್ಯರು, ಬೋಧಕ ಮತ್ತುಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕು.ಝಾನ್ಸಿ ರಾಣಿ, ಸಂಸ್ಥೆಯ ಕಾರ್ಯದರ್ಶಿ ವೈ.ಬಿ.ದಿವ್ಯಸರಸ್ವತಿ ಸಂದೀಪ್, ಆಡಳಿತಾಧಿಕಾರಿ ಎಸ್.ಸಾಗರ್, ಹೇಮಾವತಿ ಕುವೆಂಪು ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ದಾಸಯ್ಯ, ಯಶೋಧರಮ್ಮ ಬೋರಪ್ಪ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಎಸ್.ಲತಾ, ಆಡಳಿತ ಮಂಡಳಿ ಸದಸ್ಯ ಜಿ.ಬಿ.ಚಂದ್ರಣ್ಣ ಇದ್ದರು.

 

 

[t4b-ticker]

You May Also Like

More From Author

+ There are no comments

Add yours