ಅನೇಕ ಮಹಾತ್ಮರ ಹೋರಾಟದಿಂದ ಸ್ವಾತಂತ್ರ್ಯವನ್ನು ಪಡೆದಿದ್ದೇವೆ : ಶಾಸಕಿ ಪೂರ್ಣಿಮಾ ಶ್ರೀನಿವಾಸ್

 

 

 

 

ಹಿರಿಯೂರು: ಆಗಸ್ಟ್ 15-ನಾವು ಅನೇಕ ಮಹಾತ್ಮರ ಹೋರಾಟದಿಂದ ಸ್ವಾತಂತ್ರವನ್ನು ಪಡೆದಿದ್ದೇವೆ ಅಲ್ಲದೆ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳನ್ನು ತಂದಿದ್ದು ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ ಎಂದರು. ಬರಗಾಲಕ್ಕೆ ತುತ್ತಾಗಿದ್ದ ತಾಲೂಕಿನಲ್ಲಿ ಈ ಬಾರಿ ವಿವಿ ಸಾಗರ ಜಲಾಶಯ 128 ಅಡಿಗಳಿಗೆ ತಲುಪಿದ್ದು ಎಲ್ಲರಲ್ಲೂ ಸಂತಸ ಮೂಡಿದೆ ಉತ್ತಮ ದಿನಗಳನ್ನು ಕಾಣುತ್ತಿದ್ದೇವೆ ಎಂದರು. ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್ ರವರು ಮಾತನಾಡಿ ದೇಶದ ಪ್ರಗತಿಗೆ ಸರ್ಕಾರ ಅನೇಕ ಯೋಜನೆಗಳನ್ನು ತರುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು. ದೇಶದಲ್ಲಿ 30 ಕೋಟಿಗೂ ಹೆಚ್ಚು ಮಕ್ಕಳು ಇದ್ದು ದೇಶವನ್ನು ಮುನ್ನಡೆಸುವ ಹಾಗೂ ದೇಶದ ಭವಿಷ್ಯ ರೂಪಿಸುವ ಶಕ್ತಿ ವಿದ್ಯಾರ್ಥಿಗಳ ಕೈಯಲ್ಲಿ ಇದೆ ಎಂದು ಹೇಳಿದರು. ನಗರಸಭೆ ಅಧ್ಯಕ್ಷರಾದ ಶಿವರಂಜನಿ ಯಾದವ್, ಉಪಾಧ್ಯಕ್ಷರಾದ ಗುಂಡೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಜಯ್ ಕುಮಾರ್, ಮಾಜಿ ಅಧ್ಯಕ್ಷರಾದ ಶಂಸುನ್ನಿಸ ಹಾಗೂ ಸದಸ್ಯರು ಪೌರಾಯುಕ್ತರಾದ ಡಿ ಉಮೇಶ್, ಬಿಇಓ ನಾಗಭೂಷಣ್, ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಪ್ರಸಾದ್, ಡಿ ವೈ ಎಸ್ಪಿ ರೋಷನ್ ಜಮೀರ್, ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್

 

 

ತಿಮ್ಮಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ ಎಂ ನಾಗೇಶ್ ಹಾಗೂ ಅನೇಕ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ಭಾಗವಹಿಸಿದ್ದರು. 28 ಶಾಲಾ ಮಕ್ಕಳಿಂದ ಪಥ ಸಂಚಲನ ಮೂರು ಪೊಲೀಸರ ತಂಡದಿಂದ ಪಥಸಂಚಲನ, ಗೃಹರಕ್ಷಕ ದಳ ಮತ್ತು ಪ್ರಪ್ರಥಮ ಬಾರಿಗೆ ನಗರಸಭೆ ಸಿಬ್ಬಂದಿ ವರ್ಗದವರಿಂದ ಆಕರ್ಷಕ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಸ್ವತಂತ್ರ ಹೋರಾಟಗಾರರಿಗೆ ಮತ್ತು ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಗರದ ಸಾವಿರಾರು ಜನ ಕ್ರೀಡಾಂಗಣದ ತುಂಬ ನೆರೆದು ಕಾರ್ಯಕ್ರಮ ವೀಕ್ಷಿಸಿದರು.

[t4b-ticker]

You May Also Like

More From Author

+ There are no comments

Add yours