ನಮ್ಮ ಯುವ ಜಾಗೃತಿ ಮತ್ತು ಸೇವಾ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

 

 

 

 

ಚಳ್ಳಕೆರೆ: ನಮ್ಮ ಯುವ ಜಾಗೃತಿ ಮತ್ತು ಸೇವಾ ಟ್ರಸ್ಟ್ ಕಚೇರಿಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ 75ನೇ ಸ್ವಾತಂತ್ರದ ಅಮೃತ ಮಹೋತ್ಸವ ಮತ್ತು ನಮ್ಮ ನಾಡಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಜನ್ಮದಿನ ಆಚರಿಸಲಾಯಿತು. ನಂತರ ನಮ್ಮ ಟ್ರಸ್ಟ್ ಸಹಯೋಗದೊಂದಿಗೆ ರಾಮಪ್ರಿಯ ಸೋಲಾರ್ ವತಿಯಿಂದ ರಾಮಜೋಗಿಹಳ್ಳಿಯ ಪ್ರೌಢಶಾಲೆಯ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಿಕೊಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಶಾಲೆಯ ಮುಖ್ಯ ಶಿಕ್ಷಕರಾದ S ಮಂಜುನಾಥ್ ರವರು ವಹಿಸಿದ್ದರು. ರಮಪ್ರಿಯ ಸೋಲಾರ್ ನ ಮಾಲೀಕರಾದ ಪವನ್ ಕುಮಾರ್ ರವರು ಕಾರ್ಯಕ್ರಮದಲ್ಲಿ ಮಾತನಾಡಿ ಸದೃಢವಾದ ಭಾರತವನ್ನು ಕಟ್ಟುವ ಕೆಲಸ ನಮ್ಮ ಮೇಲಿದೆ ಎಂದು ಮಕ್ಕಳಿಗೆ ತಿಳಿಸಿದರು. ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ನಾಲ್ಕು ಜನ ವಿದ್ಯಾರ್ಥಿಗಳಿಗೆ ಬಹುಮಾನದ ಜೊತೆಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಪ್ರೋತ್ಸಾಹಧನವನ್ನು ಚಿಕ್ಕ ಮೂಲಕ ವಿತರಿಸಿದರು. ಪ್ರಥಮ ಬಹುಮಾನ ತೇಜಸ್ವಿನಿ ಎಸ್ (5000-/ ), ದ್ವಿತೀಯ ಬಹುಮಾನ ಪವಿತ್ರ ಎನ್ (3000-/ )ರೂ, ತೃತೀಯ ಬಹುಮಾನವನ್ನು ಇಬ್ಬರು ಸಮಾನ ಅಂಕ ಪಡೆದ ಧನುಷ ಟಿ (2000-/)ರೂ , ಬೋರಮ್ಮ(2000-/)ರೂ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಹಾಗೆ ಅಮೃತ ಮಹೋತ್ಸವದ ಪ್ರಯುಕ್ತ ಪ್ರೌಢ ಶಾಲಾ ಮಕ್ಕಳಿಗೆ ರಾಷ್ಟ್ರ ಜಾಗೃತಿ, ವಿದ್ಯಾರ್ಥಿಗಾಗಿ ಎಂಬುವ ಪುಸ್ತಕಗಳನ್ನು ವಿತರಿಸಲಾಯಿತು. ಹಾಗೆ ಯುವ ಜಾಗೃತಿ ಮತ್ತು ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಜಿ ಎಸ್ ಹರೀಶ್ ಮಾತನಾಡಿ ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವ ಮತ್ತು ಕನ್ನಡನಾಡಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನದ ಶುಭಾಶಯಗಳು ತಿಳಿಸಿದರು. ಹಾಗೆ ಆರ್ಟಿಕಲ್ 370 ರದ್ದಾಗಿ ಕಾಶ್ಮೀರದಲ್ಲೂ ಸಹ ತ್ರಿವರ್ಣ ಧ್ವಜ ಹಾರಾಡಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು. ಹಾಗೆ ಶಾಲಾ ಶಿಕ್ಷಕವರ್ಗ ಮತ್ತು ಎಸ್ಡಿಎಂಸಿ ವತಿಯಿಂದ ರಾಮಪ್ರಿಯ ಸೋಲರ್ ನಮಾಲೀಕರಾದ ಪವನ್ ಕುಮಾರ್,ಹಾಗೂ ರಚನ್ ಕುಮಾರ್,ರಾಘವೇಂದ್ರ ರವರಿಗೆ ಗೌರವ ಪೂರ್ವಕವಾಗಿ ಅಭಿನಂದನೆಗಳು ತಿಳಿಸಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಅನಿತಾ, ಸುಷ್ಮಾ, ಎಸ್ಡಿಎಂಸಿ ಸದಸ್ಯರಾದ ದಾದಾಪಿರ್, ಪ್ರಹಲ್ಲಾದ್, ಹಾಗೂ ಯುವ ಜಾಗೃತಿ ಮತ್ತು ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳಾದ ಜಿ ಪಿ ಮಾರುತಿ, ಟ್ರಸ್ಟಿಗಳಾದ ಓಬಳೇಶ್, ಗ್ರಾಮಸ್ಥರಾದ ಮೂರ್ತಿರವರು, ರಘು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours