ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ಮೇಲೆ ಧ್ವಜರೋಹಣ ಮಾಡಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ಪ್ರತಿಯೊಬ್ಬರ ನಾಗರಿಕರು ತಮ್ಮ  ಮನೆಗಳ ಮೇಲೆ ಮೂರು ದಿನಗಳ‌ ಕಾಲ‌ ರಾಷ್ಟ್ರದ ಧ್ವಜವನ್ನು ಕಟ್ಟುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕರೆ ನೀಡಿದರು.

ನಗರದ ತ ಶಾಸಕರು ತಮ್ಮ ನಿವಾಸದ ಮೇಲೆ ಹರ್ ಘರ್ ತಿರಂಗ  ಧ್ವಜವನ್ನು  ಕಾರ್ಯಕರ್ತರ ಜೊತೆಯಲ್ಲಿ  ಮತ್ತು ಗುತ್ತಿನಾಡು  ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಧ್ವಜರೋಹಣ ಮಾಡಿ  ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೇಂದ್ರ ಸರ್ಕಾರವು ‘ಹರ್ ಘರ್ ತಿರಂಗ’ ಅಭಿಯಾನವನ್ನು ಸಹ ಘೋಷಿಸಿದೆ ಮತ್ತು ಇದರ ಅಡಿಯಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲಿ ಆಗಸ್ಟ್ 13 ರಿಂದ 15 ರವರೆಗೆ ತ್ರಿವರ್ಣ ಧ್ವಜವನ್ನು ಕಟ್ಟಿ ಗೌರವ ಸಲ್ಲಿಸಿ ದೇಶದ ಸಂಭ್ರಮಕ್ಕೆ ತಾವುಗಳು ಕೈಜೋಡಿಸಿ ಎಂದು ತಿಳಿಸಿದರು.

 

 

ಹರ್ ಘರ್ ತಿರಂಗ ಅಭಿಯಾನವು ಸ್ವಾತಂತ್ರ್ಯ ದಿನಾಚರಣೆಯ ಒಂದು ಭಾಗವಾಗಿದೆ. ಈ ಉಪಕ್ರಮವು ಭಾರತದ ನಾಗರಿಕರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರಧ್ವಜವನ್ನು ಹಾರಿಸಲು ಭಾರತದಾದ್ಯಂತ ಜನರನ್ನು ಪ್ರೋತ್ಸಾಹಿಸುತ್ತದೆ. ಜುಲೈ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಂದರು.

ದೇಶದ ಜನರು ತಮ್ಮ ಮನೆಗಳ ಮೇಲೆ ರಾಷ್ಟ್ರದ ಧ್ವಜವನ್ನು  ಕಟ್ಟಿಕೊಂಡು ಸಂಭ್ರಮ ಪಡುತ್ತಿದ್ದಾರೆ. ಇಂತಹ ಸುಮಧುರ ದೃಶ್ಯ ನೋಡಲು ಕಣ್ಣುಗಳಿಗೆ ಸಂತಸ  ಉಂಟು ಮಾಡುತ್ತಿದೆ‌. ಯಾವುದೇ ಪಕ್ಷ, ಜಾತಿ ಬೇದ, ಧರ್ಮ ಬೇದವಿಲ್ಲದೆ ಸಂತೋಷದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡಬೇಕು ಎಂದರು.

ರಾಜ್ಯದ  ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ‘ಹರ್ ಘರ್ ತಿರಂಗ ‘ಧ್ವಜವನ್ನು ಕಟ್ಟಲು  ಸರ್ಕಾರ ಸೂಚಿಸಿದ್ದು  ನಮ್ಮ ಜಿಲ್ಲೆಯ ಎಲ್ಲಾ ಹಂತದ ಅಧಿಕಾರಿಗಳು  ಬೆಳಗ್ಗೆ ಧ್ವಜರೋಹಣ ಮಾಡಿ  ಸಂಜೆ ಧ್ವಜವನ್ನು ಇಳಿಸುವ ಕೆಲಸ ಅಚ್ಚುಕಟ್ಟಾಗಿ ಮಾಡಬೇಕು. ಯಾರು ಸಹ ಅಗೌರವ  ಮತ್ತು ಕಾಟಾಚಾರಕ್ಕೆ ಕಟ್ಟಿ ಬಿಡುವ ಕೆಲಸ ಮಾಡಬಾರದು. ಇಂತಹ ಸುಸಂದರ್ಭವನ್ನು ಅರ್ಥ ಪೂರ್ಣವಾಗಿ ಎಲ್ಲಾರೂ ಒಟ್ಟಾಗಿ ಮೂರು ದಿನದ  ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.

ಈ‌ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಓ ಹನುಂಮತಪ್ಪ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ನರಸಿಂಹರಾಜು ಮತ್ತು  ಶಿಕ್ಷಕರು ಮತ್ತು ಗ್ರಾಮದ ಮಕ್ಕಳು, ಗ್ರಾಮಸ್ಥರು  ಭಾಗವಹಿಸಿದ್ದರು

[t4b-ticker]

You May Also Like

More From Author

+ There are no comments

Add yours