ವಿರೋಧ ಪಕ್ಷಗಳ ಸುಳ್ಳು ಪ್ರಚಾರಕ್ಕೆ ಜಗ್ಗುವ ಮಗ ನಾನಲ್ಲ: ಶಾಸಕ ಟಿ.ರಘುಮೂರ್ತಿ ವಾಗ್ದಾಳಿ

 

 

 

 

ಚಿತ್ರದುರ್ಗ: chitrdaurga:  ಶಾಸಕನಾದ ವ್ಯಕ್ತಿಯು ಜನರಲ್ಲಿ ಅಭಿವೃದ್ಧಿ ಮೂಲಕ ಭರವಸೆಯನ್ನು ಮೂಡಿಸುವ ಕೆಲಸ ಮಾಡಬೇಕು ಆ ಕೆಲಸವನ್ನು ನಾನು ಮಾಡಿದ್ದು ಜನರು ನನ್ನ ಜೊತೆಗಿದ್ದು ವಿರೋಧ ಪಕ್ಷಗಳ ಸುಳ್ಳು ಪ್ರಚಾರಕ್ಕೆ ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಟಿ.ರಘುಮೂರ್ತಿ ವಿರೋಧಿಗಳಿಗೆ ಟಾಂಗ್ ನೀಡಿದರು.

75 ನೇ ಸ್ವಾತಂತ್ರ್ಯ  ಅಮೃತ ಮಹೋತ್ಸವದ  ಅಂಗವಾಗಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ 101 ಕಿಲೋ ಮೀಟರ್  ಪಾದಯಾತ್ರೆ ಶುಕ್ರವಾರ  ಸಂಜೆ ತುರುವನೂರು ಗ್ರಾಮದಲ್ಲಿ  ಅಂತ್ಯಗೊಂಡಿದ್ದು ಈ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.

ಅಮೃತ ಮಹೋತ್ಸವದ ಪಾದಯಾತ್ರೆಗೆ ನನ್ನ ನಿರೀಕ್ಷೆ ಮೀರಿ ಜನ ಬೆಂಬಲ ವ್ಯಕ್ತವಾಗಿದೆ.ಜನರ ಪ್ರೀತಿ ವಿಶ್ವಾಸಕ್ಕೆ ನಾನು ಮನಸೋತಿದ್ದೇನೆ.ಪ್ರತಿ ಗ್ರಾಮದಲ್ಲಿನ ಜನರ ಸಮಸ್ಯೆಗಳನ್ನು ಅಲಿಸುತ್ತ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಕಾರಿಗಳ ಸಭೆ ಮಾಡುತ್ತ  ನಾವು ಜನರ ಜೊತೆಗೆ ಹೆಜ್ಜೆ ಹಾಕಿದ್ದೇನೆ. ಜನರು ಪ್ರತಿ ಗ್ರಾಮದಲ್ಲಿ ಮನೆ ಮಗನಂತೆ ಬರಮಾಡಿಕೊಂಡ ಸತ್ಕಾರಿಸಿರುವುದಕ್ಕೆ ನಾನು ಅವರ ಪ್ರೀತಿಗೆ ಚಿರರುಣಿಯಾಗಿತ್ತೇನೆ ಎಂದರು‌

 

ನನ್ನನ್ನು ಸೋಲಿಸಲು ಸ್ವಪಕ್ಷ ಮತ್ತು ವಿರೋಧ ಪಕ್ಷಗಳು ಸಂಚು ಮಾಡಿದರು ನಾನು ಅದಕ್ಕೆ ಕುಗ್ಗುವ  ಪ್ರಶ್ನೆ ಇಲ್ಲ, ನಾನು ಶಾಸಕನಾಗುವ ಮೊದಲು ಸಹ 5 ಲಕ್ಷ ಕಿಲೋ ಮೀಟರ್ ಸುತ್ತಾಡಿ ಪಕ್ಷ ಸಂಘಟನೆ ಮಾಡಿದ್ದೇನೆ. ಈಗಲೂ ಸಹ ನಾನು ಜನರ ಜೊತೆಗಿದ್ದೇನೆ.  ಜನರೇ ನನಗೆ ಸುಪ್ರೀಂ ಎಂದರು.

 

 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಎಲ್ಲರೂ ಸಹ  ಶಾಸಕರಾಗಬೇಕು  ಎಂಬ  ಆಸೆಯಿಂದ ಬರುತ್ತಾರೆ. ಒಮ್ಮೆ ಶಾಸಕರಾದರೆ ಜನರಲ್ಲಿ ಅಭಿವೃದ್ಧಿ ಬೆಳಕು ಚೆಲ್ಲದರೆ ಮಾತ್ರ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯ. ನಾನು ಆ ಕೆಲಸವನ್ನು ಶಕ್ತಿ‌ ಮೀರಿ ಮಾಡಿದ್ದೇನೆ. ಜನರ ನಾನು ಎಂದು ಸಹ ನನ್ನನೇ ಗೆಲ್ಲಿಸಿ ಎಂದು ಕೇಳಲ್ಲ. ಜನರು ಪ್ರೀತಿ ಆಶೀರ್ವಾದ ನನ್ನ ಮೇಲೆ ಇರುವ ತನಕ ಜನರು ನನ್ನ ಕೈ ಬಿಡಲ್ಲ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಜೊತೆ ಇರುವವರು ಎಲ್ಲರೂ ಅಸಮಾಧಾನವಾಗಿದ್ದಾರೆ ಚುನಾವಣೆ ಸಂದರ್ಭದಲ್ಲಿ ಬರುತ್ತಾರೆ ಎಂಬ ವಿರೋಧ ಪಕ್ಷದವರು   ಹಬ್ಬಿಸುತ್ತಿದ್ದಾರೆ. ಪಕ್ಷ ಎಂದ ಮೇಲೆ ಸಣ್ಣ ಪುಟ್ಟ ಭಿನ್ನಭಿಪ್ರಾಯ ಇರಬಹುದು. ಕಾಂಗ್ರೆಸ್ ಪಕ್ಷದಲ್ಲಿ ಸಹ ಮನುಷ್ಯರೆ ಇರುವುದು ಎಂದು ಕುಟುಕಿದರು.

ಬಿಜೆಪಿ ಪಕ್ಷದಂತೆ ನಾವು ಎಂದು ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬಂದಿಲ. ಜನರಿಂದ ತೀರ್ಪಿನ ಮೂಲಕ‌ ಕಾಂಗ್ರೆಸ್ ಅಧಿಕಾರ ಪಡೆದಿದೆ ಅಂತಹ ಪಕ್ಷದ ಶಾಸಕನಾಗಿರುವುದು ನನಗೆ ಹೆಮ್ಮೆ ಎಂದರು.  ಅಧಕಾರದ ಆಸೆ ನನಗಿಲ್ಲ. ಅಧಿಕಾರ ಹಮಲು ಇದ್ದಿದ್ದರೆ ನಾನು ಸಚಿವನಾಗುತ್ತಿದ್ದೆ ಮನುಷ್ಯನಿಗೆ ನಿಷ್ಠೆ ಮುಖ್ಯ  ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಸಚಿವನಾಗುವ ಆಸೆ ನನಗಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನನ್ನ ಕ್ಷೇತ್ರಕ್ಕೆ ನಾನೇ ಸಚಿವ ಎಂದರು. ದೇಶದ ಸಂವಿಧಾನ ಬಡವರ , ದಿನದದಲಿತರ, ಹಿಂದುಳಿದ ಜನಾಂಗಗಳ ಅಭಿವೃದ್ಧಿ ಮಾಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಹಾಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬೆಂಬಲಿಸಿ ಸಂವಿಧಾನ ಉಳಿಸುವ ಕೆಲಸ ಜನರು ಮಾಡುತ್ತಾರೆ ಎಂಬ ಆಶಯ  ನನಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ತುರುವನೂರು ನಮಗೆ ಪುಣ್ಯ ಭೂಮಿಯಾಗಿದೆ. ನಿತ್ಯ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರನ್ನು ನಾವು ನೆನೆಯಬೇಕು ಎಂದರು. ಕಾಂಗ್ರೆಸ್ ಪಕ್ಷವನ್ನು  ಟೀಕಿಸಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಬೆಲೆ ನಿಯಂತ್ರಣ ಮಾಡಲು ಆಗಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿ ಜನರಿಗೆ ಟೋಪಿ ಹಾಕುವ ಕೆಲಸ ಮಾಡಿದ್ದಾರೆ‌.  ಗ್ಯಾಸ್,  ಪೆಟ್ರೋಲ್, ಡಿಸೇಲ್ ಅಗತ್ಯ ವಸ್ತುಗಳ ಬೆಲೆ ಏರಿಸಿ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದು ದೇಶವನ್ನು ಕೊಳ್ಳೆ ಒಡೆದುಕೊಂಡು ಹೋಗುವ ಕೆಲಸ ಬಿಜೆಪಿ ಮಾಡುತ್ತಿದೆ. ಸರ್ವ ಜನಾಂಗದ ಹಿತ ಕಾಯಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ‌. ನಾನು ಜಿಲ್ಲಾ ಮಂತ್ರಿ ಆದ ಸಂದರ್ಭದಲ್ಲಿ ಶಾಸಕ ಟಿ.ರಘುಮೂರ್ತಿ ಅವರಿಗೆ ನನ್ನ ಶಕ್ತಿ ಮೀರಿ ಬೆಂಬಲ ನೀಡಿದ್ದೇನೆ. ವಸತಿ ಶಾಲೆಗಳನ್ನು ತಂದು ಜಿಲ್ಲೆಯ ಬಡವರ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ. ವಾಲ್ಮೀಕಿ ಭವನ, ಜನಜೀನನರಾಂ ಭವನ ಸೇರಿ ಅನೇಕ ಭವನಗಳ ಕಾಮಗಾರಿ ಪೂರ್ಣ ಮಾಡಲು ಬಿಜೆಪಿ ಸಚಿವರಿಗೆ ಆಗಿಲ್ಲ ಎಂದು ಕುಟುಕಿದರು. ಮುಂದಿನ ಬಾರಿ ಸಹ ರಘುಮೂರ್ತಿ ಅವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮತ ಹಾಕಿ..ರಘುಮೂರ್ತಿ ಅವರಂತಹ  ವ್ಯಕ್ತಿ ಚಳ್ಳಕೆರೆ ಕ್ಷೇತ್ರಕ್ಕೆ ಸಿಗಲು ಸಾಧ್ಯವಿಲ್ಲ. ಅಭಿವೃದ್ಧಿ  ವಿಚಾರದಲ್ಲಿ ಬಂಗಾರದ ಮನುಷ್ಯ ಚಳ್ಳಕೆರೆ ದಿಕ್ಕು ಬದಲಿಸಿ ಅಭಿವೃದ್ಧಿ ಕ್ರಾಂತಿ ಮಾಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಘು ಮೂರ್ತಿ ಅವರ ಧರ್ಮಪತ್ನಿಯವರಾದ ಗಾಯತ್ರಮ್ಮ ರಘುಮೂರ್ತಿ , ಕೆಪಿಸಿಸಿ ವಕ್ತಾರ ಹಸಗೋಡು ಜಯಸಿಂಹ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಜಯಮ್ಮ ಬಾಲರಾಜ್  ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತಾಜ್ ಪೀರ್, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಬಾಬುರೆಡ್ಡಿ,  ಪ್ರಕಾಶ್ ಮೂರ್ತಿ, ರವಿಕುಮಾರ್, ಮಾಜಿ ತಾಲೂಎ ಪಂಚಾಯಿತಿ ಅಧ್ಯಕ್ಷ ಲಿಂಗರಾಜ್, ಮಹಿಳಾ‌ ಕಾಂಗ್ರೆಸ್ ಅಧ್ಯಕ್ಷೆ ಗೀತಾನಂದಿನಿ‌ಗೌಡ , ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಮಕ್ಕ ಆಂಜನೇಯ ಉಪಾಧ್ಯಕ್ಷರಾದ ಮಂಜುಳಾ ಪ್ರಸನ್ನ ಕುಮಾರ್ ಮತ್ತು ನಗರಸಭಾ ಸದಸ್ಯರು ಮತ್ತು ತುರುವನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸವರಾಜ್ ಮತ್ತು ಗ್ರಾಮ ಪಂಚಾಯತಿ ಸದಸ್ಯರು  ಮತ್ತು ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours