ಉನ್ನತ ಸ್ಥಾನ ಮತ್ತು ಅಯಕಟ್ಟಿನ ಸ್ಥಳದಲ್ಲಿರುವ ವ್ಯಕ್ತಿಗಳು ಸಂಕಷ್ಟದಲ್ಲಿರುವ ಜನರಿಗೆ ನೇರವಾಗಬೇಕು:ತಹಶೀಲ್ದಾರ್ ಎನ್‌.ರಘುಮೂರ್ತಿ

 

 

 

 

ಚಳ್ಳಕೆರೆ:  ತಾಲೂಕಿನ ನೆಲ ಜಲ ಮತ್ತು ಬಾಧ್ಯತೆಗಳನ್ನು ಪಡೆದುಕೊಂಡು ಉತ್ತಮ ಸ್ಥಿತಿಯಲ್ಲಿರುವಂತಹ  ವ್ಯಕ್ತಿಗಳು ಮತ್ತು ಉದ್ದಿಮೆದಾರರು ಮತ್ತು  ಸಂಕಷ್ಟದಲ್ಲಿರುವ ಜನರಿಗೆ ಶಾಲೆಗಳ ದುರಸ್ತಿಗೆ ಮತ್ತು ನಿರುದ್ಯೋಗಿಗಳಿಗೆ ನೆರವಾಗಲು ಮುಂದಾಗಬೇಕೆಂದು ತಹಶೀಲ್ದಾರ್  ಏನ್.ರಘುಮೂರ್ತಿ  ಹೇಳಿದರು.

ಇಂದು ಟಾಟಾ ಕಂಪನಿಯವರು ತಳುಕು ಪ್ರೌಢಶಾಲೆಗೆ ಉಚಿತವಾಗಿ ನೀಡಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಚಿತ್ರದುರ್ಗದ ಇತಿಹಾಸ ಮತ್ತು ಪರಂಪರೆಯನ್ನು ಮತ್ತು ಪಾಳೇಗಾರರ ವೀರಗಾಥೆಯನ್ನು ಕಾದಂಬರಿಗಳ ಮುಖಾಂತರ ವಿಶ್ವಕ್ಕೆ ಪರಿಚಯಿಸಿದ್ದು ತಾರಾಸುರವರು  ರಚಿಸಿರುವಂತ ರಕ್ತರಾತ್ರಿ ಕಂಬನಿ ಕೊಯ್ಲು ದುರ್ಗಾಸ್ತಮಾನ ಮುಂತಾದ ಕಾದಂಬರಿಗಳನ್ನು ಓದಿದರೆ ನಮ್ಮಗಳ ಮೈ ನವಿರೇಳುತ್ತವೆ ಹೇಳುತ್ತವೆ. ಇಂತಹ ಸಾಹಿತಿಗಳು ಹುಟ್ಟಿದ ಈ ಗ್ರಾಮದಲ್ಲಿ ಶೈಕ್ಷಣಿಕ ನೆಲೆಗಟ್ಟು ಭದ್ರವಾಗಬೇಕು ಈ ಕ್ಷೇತ್ರದ ಶಾಸಕರು ಮತ್ತು ಮಂತ್ರಿಗಳು ದುರಸ್ತಿಯಲ್ಲಿರುವಂತಹ ಬಹುತೇಕ ಶಾಲೆಗಳಿಗೆ ಅನುದಾನವನ್ನು ಒದಗಿಸಿದ್ದಾರೆ. ಶೈಕ್ಷಣಿಕವಾಗಿ ಈ ಭಾಗದ ಮಕ್ಕಳು ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನೀಡಬೇಕೆಂಬುದು ಅವರ ಬಯಕೆ ಹಾಗೆ ಈ ಶಾಲೆಯಲ್ಲಿ ಓದಿರುವಂತ ಈ ವರ್ಷದ ಹೆಚ್ಚು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಶ್ರೇಯಾಂಕದ ಸಾಲಿನಲ್ಲಿ  ಮೂರು ಮಕ್ಕಳಿದ್ದಾರೆ.  ಇದೇ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ ಸಂಚಿಕೆಯ ಮುಖಾಂತರ ಉದಯವಾಣಿ ಪತ್ರಿಕೆಯವರು ಗುಣಮಟ್ಟದ ಶಿಕ್ಷಣ ಒದಗಿಸುವ ನೆರವು ನೀಡಿದ್ದಾರೆ. ಈ ಶಾಲೆಯಲ್ಲಿನ ಶೌಚಾಲಯ ನಿರ್ವಹಣೆಯಲ್ಲಿ ತೀರ ಕಳಪೆಯಾಗಿದ್ದು ಶೌಚಾಲಯಗಳ ನಿರ್ವಹಣೆಯನ್ನು ಶಾಲಾ ಸಿಬ್ಬಂದಿಗಳು ಸಮರ್ಪಕವಾಗಿ ಮಾಡಬೇಕು.  ಶಾಲೆಗಳಿಗೆ ಅಗತ್ಯವಿರುವಂತಹ ಇನ್ನು ಹೆಚ್ಚಿನ ಹೈಟೆಕ್ ಶೌಚಾಲಯಗಳನ್ನು ಈ ಸಂಸ್ಥೆಯವರು ನಿರ್ಮಿಸಿ ಕೊಡಬೇಕೆಂದು ಟಾಟಾ ಕಂಪನಿ ಅವರಿಗೆ ಮನವಿ ಮಾಡಿದ್ದೇವೆ ಎಂದರು.

 

 

ಟಾಟಾ ಕಂಪನಿಯ ವ್ಯವಸ್ಥಾಪಕರದಂತ ರಮಣಗೌಡ ಮಾತನಾಡಿ ಈಗ ಕಂಪನಿ ವತಿಯಿಂದ  ಕೊಡುಗೆಯಾಗಿ  ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಯಾದ ನಿರ್ವಹಣೆಯಿಂದ ನಡೆಸಿಕೊಂಡು ಹೋಗಬೇಕು.  ಮುಂದಿನ ದಿನಗಳಲ್ಲಿ ಈ ಶಾಲೆಗೆ ಅಗತ್ಯವಿರುವಂತಹ ಮೂಲಭೂತ ಸೌಕರ್ಯಗಳನ್ನು ಕಂಪನಿ ವತಿಯಿಂದ ಒದಗಿಸಲಾಗುವುದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ ಶಾಲೆಗೆ ಅಗತ್ಯವಿರುವಂತ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿರುವಂತಹ ಈ ಕಂಪನಿಯವರಿಗೆ ಇಲಾಖೆ ವತಿಯಿಂದ ಅಭಿನಂದಿಸಿದರು. ಟಾಟಾ ಕಂಪನಿಯ ಸಿಬ್ಬಂದಿಯನ್ನು ಅದರ ಗೌರವಗಳೊಂದಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ  ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವೀರೇಶ್ ಬಸವ ರೆಡ್ಡಿ,  ತಳುಕು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಶಾಲೆಯ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours