ಐಯುಡಿಪಿ ಅಭಿವೃದ್ದಿಗೆ 14 ಕೋಟಿ ಅನುದಾನ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಆಗಸ್ಟ್-1:  ಐಯುಡಿಪಿ ಲೇ ಹೌಟ್  ವ್ಯಾಪ್ತಿಯಲ್ಲಿ  14.1 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಪಾರ್ಕ್ ಸೇರಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು  ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ನಗರದ ಐಯುಡಿಪಿ ಲೇ ಹೌಟ್ ನ   ನೀರಿನ ಟ್ಯಾಂಕ್ ಪಕ್ಕದಲ್ಲಿ ವಿವಿಧ ಯೋಜನೆ ಅನುದಾನದಲ್ಲಿ ನಿರ್ಮಾಣ ಮಾಡುತ್ತಿರು ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ನಗರಸಭೆ ವ್ಯಾಪ್ತಿಯಲ್ಲಿ  ದೊಡ್ಡ ವಾರ್ಡ‌ ಆಗಿರುವ  ಐಯುಡಿಪಿ ಲೇ ಹೌಟ್ ವಾರ್ಡನಲ್ಲಿ  ಸಾಕಷ್ಟು ರಸ್ತೆಗಳ ಅಭಿವೃದ್ಧಿ  ಮಾಡಿದ್ದರು ಸಹ ವ್ಯಾಪ್ತಿ ದೊಡ್ಡದಾದ ಕಾರಣ ಹಂತ ಹಂತವಾಗಿ ರಸ್ತೆ ಮಾಡಲಾಗುತ್ತಿದೆ.‌ ಈಗ ನಗರೋತ್ಥಾನದಲ್ಲಿ  ಸಿ.ಸಿ.ರಸ್ತೆಗಳಿಗೆ 9 ಕೋಟಿ, ಪಾರ್ಕಗಳ ಅಭಿವೃದ್ಧಿಗೆ  1.30  ಕೋಟಿ,  ಐಯುಡಿಪಿ  ಅನುದಾನ 1.80 ಕೋಟಿ  ಹಾಗೂ  ಅಮೃತ ಯೋಜನೆ 2 ಕೋಟಿ ಅನುದಾನದಲ್ಲಿ  ರಸ್ತೆಗಳ‌ ಅಭಿವೃದ್ಧಿಗೆ ಹಣ  ನೀಡಿಲಾಗಿದ್ದು ಎಲ್ಲಾ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಒಂದು  ತಿಂಗಳಲ್ಲಿ‌  ಕೆಲಸ ಪ್ರಾರಂಭವಾಗುತ್ತವೆ ಎಂದರು.
ನಗರದ ಎಲ್ಲಾ ಒಳ‌ ರಸ್ತೆಗಳು ಸೇರಿ ಎಲ್ಲಾ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುತ್ತಿದೆ. ಸಾರ್ವಜನಿಕರು ಯಾರು ಸಹ ರಸ್ತೆಗಳನ್ನು ಹಗೆಯುವ ಕೆಲಸ ಮಾಡಬೇಡಿ. ರಸ್ತೆ ಮಾಡವುದಕ್ಕಿಂತ ಮೊದಲು ನಿಮ್ಮ ನೀರಿನ ಲೈನ್ ಸೇರಿ ಎಲ್ಲಾ ಅಗತ್ಯವಾದ ಸೌಲಭ್ಯದ ಸಂಪರ್ಕಗಳನ್ನು ಪಡೆದುಕೊಂಡ ನಂತರ ರಸ್ತೆ ಮಾಡಲಾಗುತ್ತದೆ. ಸಾಕಷ್ಟು ಶ್ರಮಪಟ್ಟು ಹಣವನ್ನು ತಂದು ರಸ್ತೆ‌ಮಾಡಲಾಗುತ್ತದೆ. ಐಯುಡಿಪಿಯ ಎಲ್ಲಾ ಒಳ ರಸ್ತೆಗಳ ಮತ್ತು ಚಿಕ್ಕ ಪಟ್ಟ ರಸ್ತೆಗಳನ್ನು ಬಿಡದೇ ಪೂರ್ಣಗೊಳಿಸಿ ಎಂದು ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತಿಳಿಸಿದರು. ಐಯುಪಿಡಿ ವ್ಯಾಪ್ತಿಯಲ್ಲಿ ಪಾರ್ಕ್ ಗಳ ಅಭಿವೃದ್ಧಿಯಿಂದ ಹಿರಿಯ ನಾಗರಿಕರು , ಮಹಿಳೆಯರು, ಮಕ್ಕಳು ಸಂಜೆ ಸಮಯದಲ್ಲಿ ವಾಕಿಂಗ್ ಮತ್ತು ಪ್ರಶಾಂತವಾದ ವಾತವರಣಕ್ಕಾಗಿ ಉತ್ತಮ ಗಿಡಿಗಳನ್ನು ಹಾಕಿ ಅಭಿಯ ಮಾಡಲಾಗುವುದು. ಎಲ್ಲಾದರೂ ಸಹ ಚಿಕ್ಕ ಪುಟ್ಟ ರಸ್ತೆಗಳು ಉಳಿದಿದ್ದರು ಸಹ ಮಾಡಲಾಗುವುದು. ಗುಣಮಟ್ಟ ಕಾಪಾಡಿಕೊಂಡು‌ ತ್ವರಿತವಾಗಿ ಕಾಮಗಾರಿ ಮುಗಿಸಬೇಕು ಎಂದು ತಾಕೀತು ಮಾಡಿದರು.
ಮೊಣಕಾಲು ನೋವಿದ್ದರು ಸಹ  ಕಾರಿನಲ್ಲೆ ಕುಳಿತು  ಕಷ್ಟ ಆಲಿಸಿದ ಶಾಸಕರು: ಶಾಸಕರು ಕಳೆದ 20 ದಿನಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಆದರು ಸಹ ಇಂದು ನಡೆಯಲು ಆಗದಿದ್ದರು ಸಹ ಇಂದು  ಸಿ.ಸಿ.ರಸ್ತೆ  ಕಾಮಗಾರಿಗೆ ಚಾಲನೆ ನೀಡಿದ ನಂತರ  ನೂರಾರು ಮಹಿಳೆರು, ಹಿರಿಯ ನಾಗರಿಕರು ಸಮಸ್ಯೆಯನ್ನು ಕಾರಿನಲ್ಲಿ ಕುಳಿತು ಆಲಿಸುವ ಮೂಲಕ ಜನರ ಕಷ್ಟಕ್ಕೆ‌ ಸದಾ ಸಿದ್ದ ಜನರ ನೋವು ಮೊದಲು ನಂತರ ನನ್ನ‌ ನೋವು ಎಂಬಂತೆ ಅನೇಕ ಸಮಸ್ಯೆಗಳಿಗೆ ಕಾರಿನಲ್ಲಿ‌ ಕುಳಿತು ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್,  ನಗರಸಭೆ ಸದಸ್ಯರಾದ ಬಾಸ್ಕರ್, ತಾರಕೇಶ್ವರಿ, ಹರೀಶ್, ನಗರಸಭೆ ಇಂಜಿನಿಯರ್ ಕಿರಣ್ ಮತ್ತು ಸಾರ್ವಜನಿಕರು ಇದ್ದರು.
[t4b-ticker]

You May Also Like

More From Author

+ There are no comments

Add yours